ಮೊಬೈಲ್‌ ಬಳಸುತ್ತಿರುವುದು ನಾವು, ಅದೇ ನಮ್ಮನ್ನು ಬಳಸುತ್ತಿಲ್ಲವಲ್ಲ; ಸಮಂತಾ ಲಾಜಿಕ್‌ಗೆ ಏನಂತೀರಾ?

By Shriram BhatFirst Published May 6, 2024, 2:36 PM IST
Highlights

'ಮೊಬೈಲ್ ಫೋನ್‌ಗೆ ಯುವಪೀಳಿಗೆ ಅದೆಷ್ಟು ಅಡಿಕ್ಷನ್ ಆಗಿಬಿಟ್ಟಿದೆ ಎಂದರೆ ಒಂದೆರಡು ಕ್ಷಣ ಕೂಡ ಮೊಬೈಲ್ ಬಿಟ್ಟು ಜೀವನವೇ ನಡೆಯಲಾರದು ಎಂಬಂತೆ ಆಡುತ್ತಿದ್ದಾರೆ. ಯಾವಾಗಲೂ ಮೊಬೈಲ್ ಸ್ಕ್ರೀನ್ ನೋಡುವ ಮೂಲಕ ಹಲವರ ನಿದ್ದೆ...

ಖ್ಯಾತ ನಟಿ ಸಮಂತಾ (Samantha Ruth Prabhu) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಫೋನ್‌ ಅಡಿಕ್ಷನ್‌ ಬಗ್ಗೆ ಮಾತನಾಡಿದ್ದಾರೆ. ಸಮಂತಾ ಯಾವತ್ತೂ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ತಾವು ಅನಾರೋಗ್ಯಕ್ಕೆ ಒಳಗಾದ ಬಳಿಕವಂತೂ ನಟಿ ಸಮಂತಾ ಅವರು ಆರೋಗ್ಯ-ಅನಾರೋಗ್ಯದ ಬಗ್ಗೆ ಹೆಚ್ಚಿನ ಒಲವು ಮಾತ್ತು ಟಿಪ್ಸ್‌ಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಇಂದಿನ ಜನರೇಶನ್‌ ಮೊಬೈಲ್‌ ಫೋನಿಗೆ ಅದೆಷ್ಟು ಅಡಿಕ್ಟ್ ಆಗಿದ್ದಾರೆ ಎಂದರೆ ಮೊಬೈಲ್‌ ಫೋನ್‌ ಬಿಟ್ಟು ಜೀವನವೇ ಇಲ್ಲ ಎಂಬಂತಾಗಿದೆ ಎಂದರೂ ಅತಿಶಯೋಕ್ತಿಯಲ್ಲ ಎನ್ನಬಹುದು. 

ನಟಿ ಸಮಂತಾ ಇಲ್ಲಿ ಹೇಳಹೊರಟಿರುವುದು ಇಂದಿನ ಜನರೇಶನ್‌ ಅದೆಷ್ಟು ಮೊಬೈಲ್ ಅಡಿಕ್ಷನ್ ಹೊಂದಿದ್ದಾರೆ ಎಂಬ ಬಗ್ಗೆ ಆಗಿದೆ. 'ಮೊಬೈಲ್ ಫೋನ್‌ಗೆ ಯುವಪೀಳಿಗೆ ಅದೆಷ್ಟು ಅಡಿಕ್ಷನ್ ಆಗಿಬಿಟ್ಟಿದೆ ಎಂದರೆ ಒಂದೆರಡು ಕ್ಷಣ ಕೂಡ ಮೊಬೈಲ್ ಬಿಟ್ಟು ಜೀವನವೇ ನಡೆಯಲಾರದು ಎಂಬಂತೆ ಆಡುತ್ತಿದ್ದಾರೆ. ಯಾವಾಗಲೂ ಮೊಬೈಲ್ ಸ್ಕ್ರೀನ್ ನೋಡುವ ಮೂಲಕ ಹಲವರ ನಿದ್ದೆ ಹಾರಿಹೋಗುತ್ತಿದೆ. ಹಲವರು ಇನ್‌ಸೋಮ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. 

ಕೆಜಿಎಫ್‌ಗೂ ಮೊದಲೇ ಕನ್ನಡ ಸಿನಿಮಾ ಪ್ರೀತಿ ಮೆರೆದಿದ್ದ ಯಶ್, ಪರಭಾಷಿಕರ ಅವಹೇಳನಕ್ಕೆ ಕೌಂಟರ್ ಹೇಗಿತ್ತು ನೋಡಿ!

ನಾನೊಮ್ಮೆ ಬ್ರಾಡಕಾಸ್ಟ್‌ನಲ್ಲಿ ಇರುವಾಗ ನನಗೆ ಲೈವ್‌ನಲ್ಲೇ ಅದೆಷ್ಟು ಸಂದೇಶಗಳು ಬಂದಿವೆ ಗೊತ್ತೇ? ನನಗೆ ಮೊಬೈಲ್ ಬಿಟ್ಟಿರಲು ಆಗುತ್ತಿಲ್ಲ. ಆದರೆ, ಅದರಿಂದಲೇ ನಾನು ಡಿಪ್ರೆಶನ್‌ಗೆ ಹೋಗಿದ್ದೇನೆ ಎಂದು ಕೆಲವರು ಮೆಸೇಜ್ ಮಾಡಿದ್ದರೆ, ಹಲವರು ನನಗೆ ಮೊಬೈಲ್‌ನಿಂದಲೇ ನಿದ್ದೆ, ಊಟ ಯಾವುದೂ ಸರಿಯಾಗಿ ಆಗುತ್ತಿಲ್ಲ ಎಂದಿದ್ದಾರೆ. ಅದರಿಂದಲೇ ಸಮಸ್ಯೆ, ಅದು ಅಡಿಕ್ಟ್‌ ಆಗಿದ್ದರಿಂದಲೇ ಸಮಸ್ಯೆ ಎಂದು ಗೊತ್ತಿದ್ದರೂ ಅದನ್ನು ಬಿಡಲಾಗುತ್ತಿಲ್ಲ ಎಂದರೆ ಏನೆನ್ನಬೇಕು? ನಮ್ಮ ಯೋಗಕ್ಷೇಮಕ್ಕಾಗಿ ಕೆಲವೊಂದನ್ನು ತ್ಯಾಗ ಮಾಡಲು ಕೂಡ ಆಗದಿದ್ದರೆ ಸರಿಯಾಗಿ ಲೈಫ್ ಲೀಡ್ ಮಾಡುವುದು ಹೇಗೆ?

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಯನತಾರಾ, ಬಹುಮುಖ ಪ್ರತಿಭೆ ಎನಿಸಿಕೊಂಡ ಲೇಡಿ ಸೂಪರ್‌ ಸ್ಟಾರ್!

ಆದರೆ, ಇಂದಿನ ಯುವಜನತೆಗೆ ಹಲವು ಸಂಗತಿಗಳು ಅರ್ಥವಾಗುತ್ತಿಲ್ಲ. ನಾವೇ ಮೊಬೈಲ್‌ ಫೋನ್ ಬಳಸುತ್ತಿರುವುದು, ನಾವೇ ಅದನ್ನು ಸ್ವಲ್ಪ ಪಕ್ಕಕ್ಕಿಟ್ಟು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಅದಕ್ಕಾಗಿ ಕೌನ್ಸಿಲಿಂಗ್ ಇದೆ, ಆದರೆ ನಮ್ಮ ಸಮಸ್ಯೆಯೇನು ಎಂಬುದು ನಮಗೇ ಗೊತ್ತಿರಬೇಕಾದರೆ ಇನ್ಯಾರದೋ ಬಳಿ ಕೌನ್ಸಿಲಿಂಗ್‌ಗೆ ಹೋಗಿ ಕುಳಿತುಕೊಳ್ಳುವ ಅಗತ್ಯವಾದರೂ ಏನು? ನಮ್ಮ ಆರೋಗ್ಯ ತುಂಬಾ ಮುಖ್ಯ, ಹಾಗೂ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರಬೇಕು ಎಂದರೆ ಕೆಲವನ್ನು ತ್ಯಾಗ ಮಾಡಲೇಕಾಗುತ್ತದೆ ಎಂದಿದ್ದಾರೆ ನಟಿ ಸಮಂತಾ. 

ಕೋವಿಡ್ ವ್ಯಾಕ್ಸಿನ್ ಅಡ್ಡ ಪರಿಣಾಮ, ಶ್ರೇಯಸ್ ತಲ್ಪಾಡೆ ಕಾರ್ಡಿಯಾಕ್ ಅರೆಸ್ಟ್‌ ಹಿಂದಿದ್ಯಾ ಲಸಿಕೆ ಎಫೆಕ್ಟ್?

click me!