ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವೈರಲ್ ವಿಡಿಯೋ ನೋಡಿ ನಟಿ ಮೇಘಾ ಕೆಂಡಾಮಂಡಲವಾಗಿದ್ದೇಕೆ?
ಇದಾಗಲೇ ಎರಡನೆಯ ಹಂತದ ಚುನಾವಣೆ ನಡೆದಿದ್ದು ನಾಳೆ ಅಂದ್ರೆ ಮೇಲೆ 7 ಮೂರನೆಯ ಹಂತದ ಮತದಾನ ನಡೆಯುತ್ತಿದೆ. ಇದಾದ ಬಳಿಕ ಇನ್ನೂ ನಾಲ್ಕು ಹಂತಗಳ ಚುನಾವಣೆ ನಡೆಯಬೇಕಿದ್ದು, ಇದಕ್ಕಾಗಿ ರಾಜಕೀಯ ಪಕ್ಷಗಳು ಪರಸ್ಪರ ವಾಗ್ದಾಳಿ ನಡೆಸುತ್ತಿವೆ. ಒಬ್ಬರ ಮೇಲೊಬ್ಬರು ಗೂಬೆ ಕುಳ್ಳರಿಸುವುದು, ಟೀಕಿಸುವುದು, ಕೆಟ್ಟ ಪದಗಳಿಂದ ಬೈದುಕೊಳ್ಳುವುದು ಹೀಗೆ ನಡೆದೇ ಇದೆ. ಇದೀಗ ಮರಾಠಿ ನಟಿ ‘ಬಿಗ್ ಬಾಸ್ ಮರಾಠಿ’ ಮೊದಲ ಸೀಸನ್‌ನ ವಿಜೇತೆ ಮೇಘಾ ಧಾಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಅವರ ಮೇಲೆ ಹರಿಹಾಯ್ದಿದ್ದಾರೆ. ವೈರಲ್ ವಿಡಿಯೋ ಒಂದಕ್ಕೆ ಕಮೆಂಟ್ ಮಾಡಿರುವ ನಟಿ ರಾಹುಲ್ ಅವರ ಮೇಲೆ ಕೆಂಡಾಮಂಡಲ ಆಗಿದ್ದಾರೆ.
ಅಷ್ಟಕ್ಕೂ ಈ ವೈರಲ್ ವಿಡಿಯೋದಲ್ಲಿ ಇರುವುದು ಏನೆಂದರೆ, ರಾಹುಲ್ ಗಾಂಧಿಯವರು ತಮಗೆ ಉಡುಗೊರೆಯಾಗಿ ನೀಡಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಉಡುಗೊರೆಯನ್ನು ಕಡೆಗಣಿಸಿರುವುದು! ಪುಣೆಯಲ್ಲಿ ನಡೆದ ಕಾರ್ಯಕ್ರಮದೊಂದರಲ್ಲಿ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿವರಿಗೆ ಮಹಾರಾಷ್ಟ್ರದ ಆರಾಧ್ಯ ದೈವ ಛತ್ರಪತಿ ಶಿವಾಜಿ ಮಹಾರಾಜ್ರ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ರಾಹುಲ್ ಅದನ್ನು ಮುಟ್ಟಲೂ ಇಲ್ಲ. ಮಾತ್ರವಲ್ಲದೇ ಉಡುಗೊರೆಯನ್ನು ಅನುಮಾನದಿಂದ ನೋಡಿದರು, ಅದನ್ನು ಕೊಟ್ಟವರು ಫೋಟೋ ತೆಗೆಸಿಕೊಂಡ ಬಳಿಕ ರಾಹುಲ್ ಗಾಂಧಿಯವರು ತೆಗೆದುಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಟೇಬಲ್ ಮೇಲೆ ಇಡಲು ಹೋದರು.
ಅನನ್ಯಾ- ಆದಿತ್ಯ ಬ್ರೇಕಪ್ ಕನ್ಫರ್ಮ್? ಬಾಯ್ಫ್ರೆಂಡ್ ಜಾಗದಲ್ಲಿ ನಾಯಿ ಇಟ್ಟುಕೊಂಡ ನಟಿ!
ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಟೇಬಲ್ ಮೇಲೆಯೂ ಅದನ್ನು ಇಡಲು ಕೊಡಲಿಲ್ಲ. ಇದನ್ನು ನೋಡಿದ ಹಲವು ಮಹಾರಾಷ್ಟ್ರಿಗರ ರಾಹುಲ್ ಗಾಂಧಿ ವಿರುದ್ಧ ಸಾಕಷ್ಟು ಟೀಕೆ ಮಾಡಿದ್ದಾರೆ. ಇದರಿಂದ ರಾಹುಲ್ ವಿರುದ್ಧ ಅಸಮಾಧಾನಗಳ ಸುರಿಮಳೆಯೇ ಆಗುತ್ತಿದೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ‘ರಾಹುಲ್ ಗಾಂಧಿಯನ್ನು ಬೆಂಬಲಿಸುವವರಿಗೆ ನಾಚಿಕೆಯಾಗಬೇಕು. ರಾಹುಲ್ ಗಾಂಧಿ ನಾನು ನಿನ್ನನ್ನು ದ್ವೇಷಿಸುತ್ತೇನೆ. ನನ್ನ ದೇಶವನ್ನು ಬಿಟ್ಟು ನರಕಕ್ಕೆ ಹೋಗಿ’ ಎಂದು ಅದರಲ್ಲಿ ಬರೆದಿದ್ದಾರೆ.
ಅಂದಹಾಗೆ ಮೇಘಾ ಅವರು, ಬಿಗ್ ಬಾಸ್ ವಿಜೇತೆ, ಖ್ಯಾತ ನಟಿ ಮಾತ್ರವಲ್ಲದೇ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಇವರು ಬಿಜೆಪಿ ಸೇರಿದ್ದು, ರಾಜಕೀಯದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ನಟಿ ಶೇರ್ ಮಾಡಿದ ವಿಡಿಯೋಕ್ಕೂ ಸಾಕಷ್ಟು ಮಂದಿ ಕಮೆಂಟ್ ಹಾಕಿದ್ದು, ನಿಜವಾದ ಮಹಾರಾಷ್ಟ್ರಿಗರು ಇದನ್ನು ಸಹಿಸುವುದಿಲ್ಲ ಎನ್ನುತ್ತಿದ್ದಾರೆ.
ರೇಪ್ ಮಾಡಿಸಿಕೊಳ್ಳಲು ಹುಡುಗಿಯರ ಕ್ಯೂ: ಫಿಲ್ಮ್ ಇಂಡಸ್ಟ್ರಿಯ ಭಯಾನಕ ರೂಪ ಎಕ್ಸ್ಪೋಸ್ ಮಾಡಿದ ರಾಖಿ!