Malaika Arora Hot Look: ಹೈಸ್ಲಿಟ್ ಬಾಡಿಕಾನ್ ಡ್ರೆಸ್‌ನಲ್ಲಿ ಮಲೈಕಾ ಹಾಟ್ ಲುಕ್

First Published Dec 17, 2021, 4:57 PM IST

Malaika Arora: ಮಲೈಕಾ ಹಾಟ್ ಲುಕ್ ವೈರಲ್ ಆಗಿದೆ. ಡೀಪ್ ಹ್ಯಾಂಗ್ ನೆಕ್ ಜೊತೆಗೆ ಹೈಸ್ಲಿಟ್ ಡ್ರೆಸ್‌ನಲ್ಲಿ ಮಲೈಕಾ ಸಖತ್ ಆಗಿ ಮಿಂಚಿದ್ದಾರೆ.

ಚೈಂಯಾ ಚೈಂಯಾ ಬೆಡಗಿ ಮಲೈಕಾ ಅರೋರಾ ಇತ್ತೀಚೆಗೆ ಕರಣ್ ಜೋಹರ್ ಅವರೊಂದಿಗೆ ದಕ್ಷಿಣ ಮುಂಬೈನಲ್ಲಿ ಮ್ಯಾನ್ಷನ್ಜ್ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಡ್ರಾಪ್-ಡೆಡ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ಡ್ರಾಪಿಂಗ್ ನೆಕ್ ಸ್ಟೈಲ್‌ನ ಸ್ಯಾಟಿನ್ ಡ್ರೆಸ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ. ಅಭಿಮಾನಿಗಳು ನಟಿಯ ಸ್ಕಿನ್ ಫಿಟ್ ಬೋಲ್ಡ್ ಡ್ರೆಸ್‌ನಲ್ಲಿ ನಟಿಯನ್ನು ನೋಡಿ ಬೆರಗಾಗಿದ್ದಾರೆ. ಮಲೈಕಾ ಅನೇಕ ಅಪಾಯಕಾರಿ ಬಟ್ಟೆಗಳನ್ನು ಧರಿಸಿ ಕಾನ್ಫಿಡೆಂಟಾಗಿ ನಡೆಯುವುದಕ್ಕೆ ಹೆಸರುವಾಸಿಯಾಗಿದ್ದಾರೆ. ನಟಿ ಥೈ ಹೈ ಸ್ಲಿಟ್ ಉಡುಪಿನಲ್ಲಿ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದರು.

Latest Videos


ಮಲೈಕಾ ಅವರು ದಿವಾ ಯೋಗ ಸೆಂಟರ್ ಎಂಬ ಹೆಸರಿನಲ್ಲಿ ಯೋಗ ಸ್ಟುಡಿಯೊವನ್ನು ನಡೆಸುತ್ತಿದ್ದಾರೆ. ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನದಲ್ಲಿಡಲು ಯೋಗ ಮಾಡಲು ಅಥವಾ ಜಿಮ್‌ಗೆ ಹೋಗಲು ಜನರನ್ನು ಪ್ರೇರೇಪಿಸುತ್ತಾರೆ.

ಅರ್ಜುನ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಮಲೈಕಾ. ಕೆಲಸದ ಮುಂಭಾಗದಲ್ಲಿ, ಅರ್ಜುನ್ ಪ್ರಸ್ತುತ ಮೂರು ಸಿನಿಮಾ ಹೊಂದಿದ್ದು - 'ಏಕ್ ವಿಲನ್ ರಿಟರ್ನ್ಸ್', 'ಕುಟ್ಟೆ' ಮತ್ತು 'ದಿ ಲೇಡಿ ಕಿಲ್ಲರ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಲೈಕಾ ಈ ದಿನಗಳಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ - ಟೆರೆನ್ಸ್ ಲೂಯಿಸ್ ಮತ್ತು ಗೀತಾ ಕಪೂರ್ ಅವರೊಂದಿಗೆ ಭಾರತದ ಅತ್ಯುತ್ತಮ ಡ್ಯಾನ್ಸರ್‌ಗಳನ್ನು ಜಡ್ಜ್ ಮಾಡುತ್ತಿದ್ದಾರೆ.

ಕರಣ್ ಜೋಹರ್ ಅವರ ಮನೆಯಲ್ಲಿ ಖಾಸಗಿ ಔತಣಕೂಟದಲ್ಲಿ ಭಾಗವಹಿಸಿದ ನಂತರ ಮಲೈಕಾ ಅವರ ಸಹೋದರಿ ಅಮೃತಾ ಅರೋರಾ, ಅವರ ಬೆಸ್ಟೀ ಕರೀನಾ ಕಪೂರ್ ಖಾನ್, ಮಹೀಪ್ ಕಪೂರ್, ಸೀಮಾ ಖಾನ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ.

KJo ಅವರ ಕುಟುಂಬ ಮತ್ತು ಸಿಬ್ಬಂದಿ ನೆಗೆಟಿವ್ ಆಗಿದ್ದಕ್ಕೆ ಇದು ಕೇವಲ 8 ಜನರ ನಿಕಟ ಕೂಟವಾಗಿತ್ತು ಎಂದು BMC ಅವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

click me!