
ದೀಪಿಕಾ ಪಡುಕೋಣೆ ಇದೇ 8ರಂದು ಹೆಣ್ಣುಮಗುವನ್ನು ಬರಮಾಡಿಕೊಂಡಿದ್ದಾರೆ. ಗರ್ಭಿಣಿ ಎಂದು ತಿಳಿದಾಗಿನಿಂದಲೂ ದೀಪಿಕಾ ತಾವು ವಹಿಸಿಕೊಂಡಿರುವ ಎಲ್ಲಾ ಚೀತ್ರಗಳನ್ನೂ ಪೂರ್ಣಗೊಳಿಸಿ ಭೇಷ್ ಎನ್ನಿಸಿಕೊಂಡವರು. ಗರ್ಭಿಣಿಯಾಗಿದ್ದರೂ ಕಲ್ಕಿ ಚಿತ್ರದಲ್ಲಿ ನಟಿಸಿದ್ದರು. ಇದಾಗ ಬಳಿಕ ಈಗ ಸಂಪೂರ್ಣ ಮಗಳ ಜೊತೆ ಕಳೆಯುವುದಾಗಿ ಹೇಳಿಕೊಂಡಿರೋ ದೀಪಿಕಾ ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಹೇಳಿಕೊಂಡಿದ್ದರು. ನಿನ್ನೆಯಷ್ಟೇ ದೀಪಿಕಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಗೆ ಮರಳಿದ್ದಾರೆ. ಕೂಡಲೇ ಇನ್ಸ್ಟಾಗ್ರಾಮ್ನಲ್ಲಿ ಇಂಟ್ರೋವನ್ನು ಬದಲಾಯಿಸಿ ಫೀಡ್, ಬರ್ಪ್, ಸ್ಲೀಪ್, ರಿಪೀಟ್ (Feed, Burp, Sleep, Repeat) ಎಂದು ಬರೆದುಕೊಂಡಿದ್ದಾರೆ. ಇನ್ನು ಮಗುವಿನ ಆರೈಕೆಯಷ್ಟೇ ತಮ್ಮ ಕೆಲಸ ಎನ್ನುವುದನ್ನು ಈ ಮೂಲಕ ಹೇಳಿಕೊಂಡಿದ್ದಾರೆ.
ಆದರೆ ಇದೀಗ ಹೊಸ ಅಪ್ಡೇಟ್ ಒಂದು ಹೊರಬಂದಿದೆ. ಅದೇನೆಂದರೆ, ದೀಪಿಕಾ ಪಡುಕೋಣೆ ಹೊಸ ಕೆಲಸಕ್ಕೆ ಸಹಿ ಹಾಕಿದ್ದಾರೆ. ಇವರು ಸಹಿ ಹಾಕುತ್ತಿದ್ದಂತೆಯೇ ಅದೇ ಜಾಗದಲ್ಲಿದ್ದ ನಟ, ದೀಪಿಕಾ ಪತಿ ರಣವೀರ್ ಸಿಂಗ್ ಕೆಲಸ ಕಳೆದುಕೊಂಡಿದ್ದಾರೆ! ಹೌದು. ಇಲ್ಲಿಯವರೆಗೆ ರಣವೀರ್ ಸಿಂಗ್ ರಾಯಭಾರಿಯಾಗಿದ್ದ ಜಾಗಕ್ಕೆ ತಾವು ಬಂದು ಕೂತಿದ್ದಾರೆ ದೀಪಿಕಾ. ಈ ಮೂಲಕ ಪತಿಯ ಜಾಗಕ್ಕೆ ಇವರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ರಣವೀರ್ ಸಿಂಗ್ ಆ ಉದ್ಯೋಗ ಕಳೆದುಕೊಂಡಿದ್ದಾರೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ತಯಾರಕ ಕ್ರಾಫ್ಟನ್, ಜಾಗತಿಕ ಐಕಾನ್ ದೀಪಿಕಾ ಪಡುಕೋಣೆ ಅವರನ್ನು ಹೊಸ ಬ್ರಾಂಡ್ ಅಂಬಾಸಿಡರನ್ನಾಗಿ ನೇಮಕ ಮಾಡಿಕೊಂಡಿದೆ. ಇಲ್ಲಿಯವರೆಗೆ ಈ ಜಾಗದಲ್ಲಿ ರಣವೀರ್ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ-ರಣವೀರ್ ಪುತ್ರಿ ಭವಿಷ್ಯ ಹೀಗಿರಲಿದೆಯಂತೆ!
ಅಂದಹಾಗೆ BGMIನೊಂದಿಗೆ ಒಂದು ವರ್ಷ ದೀಪಿಕಾ ರಾಯಭಾರಿಯಾಗಿ ಇರಲಿದ್ದಾರೆ. ಕಳೆದ ವರ್ಷ ರಣವೀರ್ ಸಿಂಗ್ ಇದ್ದರು. ಈಗ ಅವರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಮುಂದುವರೆಸದೇ ಬಾಣಂತಿ ದೀಪಿಕಾ ಅವರನ್ನು ಕಂಪೆನಿ ನೇಮಕ ಮಾಡಿಕೊಂಡಿದ್ದಾರೆ. ಈ ಕಂಪೆನಿಗೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರಂತಹ ಕ್ರೀಡಾ ಐಕಾನ್‌ಗಳು ಪಾಲುದಾರರಾಗಿದ್ದಾರೆ. ಭಾರತೀಯ ಆಟಗಾರರಿಗೆ ತಕ್ಕಂತೆ ಗೇಮಿಂಗ್ ಅನುಭವಗಳನ್ನು ತರುವುದು ಈ ಕಂಪೆನಿಯ ಉದ್ದೇಶವಾಗಿದೆ. ಈ ಮೂಲಕ ದೀಪಿಕಾ ಗೇಮಿಂಗ್ ಜಗತ್ತಿನ ಒಳಗೆ ಸದ್ಯ ಹೊಕ್ಕಿದ್ದಾರೆ. ಸದ್ಯ ಮಗುವಿನ ಲಾಲನೆ ಪಾಲನೆಯಷ್ಟೇ ತಮ್ಮ ಜವಾಬ್ದಾರಿ ಎಂದು ಹೇಳಿಕೊಂಡಿದ್ದ ದೀಪಿಕಾ, ಹೊಸ ಕೆಲಸ ಸಿಗುತ್ತಲೇ ಅದನ್ನು ಮರೆತರಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಿಂದ ಕೇಳಿಬರುತ್ತಿದೆ.
ದೀಪಿಕಾ ಇದಕ್ಕೆ ಸಹಿ ಹಾಕುತ್ತಲೇ BGMI ಸಂತೋಷ ವ್ಯಕ್ತಪಡಿಸಿದೆ. ಸಿಇಒ ಸೀನ್ ಹ್ಯುನಿಲ್ ಸೋಹ್ನ್ ಮಾಧ್ಯಮಗಳ ಜೊತೆ ಮಾತನಾಡಿ, "ನಮ್ಮ ಆಟಗಾರರಿಗೆ ಮರೆಯಲಾಗದ ಕ್ಷಣಗಳನ್ನು ಸೃಷ್ಟಿಸಲು ಜಾಗತಿಕ ರಾಯಭಾರಿಯಾಗಿ ದೀಪಿಕಾ ಒಪ್ಪಿಕೊಂಡಿರುವುದು ಖುಷಿ ಕೊಟ್ಟಿದೆ. ಅವರ ಜೊತೆ ಪಾಲುದಾರಿಕೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಈ ಸಹಯೋಗವು ವಿವಿಧ ದೇಶಗಳಲ್ಲಿರುವ BGMI ಅಭಿಮಾನಿಗಳಿಗೆ ತಾಜಾ ಅನುಭವಗಳನ್ನು ನೀಡಲು ಸಹಾಯವಾಗಿದೆ. ದೀಪಿಕಾ ಪಡುಕೋಣೆ ಅವರಂಥ ಮಹಾನ್ ತಾರೆ, ನಮ್ಮ ಮುಂಚೂಣಿಯಲ್ಲಿ ಗೇಮಿಂಗ್ ಮತ್ತು ಮನರಂಜನೆಯ ಜಗತ್ತನ್ನು ಒಟ್ಟುಗೂಡಿಸಲು ನೆರವಾಗುತ್ತಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ಇಲ್ಲಿಯವರೆಗೆ ದೀಪಿಕಾರದ್ದು ಫೇಕ್ ಹೊಟ್ಟೆ ಎಂದು ಟ್ರೋಲ್ಗೆ ಒಳಗಾಗುತ್ತಲೇ ಬಂದಿರುವ ದೀಪಿಕಾ, ಈಗ ಮಗು ಹುಟ್ಟಿ ವಾರದಲ್ಲಿಯೇ ತಾಯ್ತನದ ಅನುಭವವನ್ನು ಸಂಪೂರ್ಣ ಅನುಭವಿಸುವುದನ್ನು ಬಿಟ್ಟು ಹೊಸ ಪ್ರಾಜೆಕ್ಟ್ಗೆ ಸಹಿ ಹಾಕಿರುವುದಕ್ಕೆ ಟೀಕೆಗಳು ಕೇಳಿಬಂದಿವೆ.
ಛೇ... ಈಗ ತಾನೇ ಕಣ್ಣುಬಿಟ್ಟ ದೀಪಿಕಾ ಮಗುವಿಗೆ ಇದೆಂಥ ಕಾಟ! ಅಪ್ಪನ ಹೆಸರಿನಲ್ಲಿ ಹೀಗೆ ಮಾಡೋದು ಸರಿನಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.