ಮೊಮ್ಮಗಳ ನೋಡಿ ನೀತು ಸಿಂಗ್ ಫುಲ್ ಖುಷ್, ಆಲಿಯಾಗ್ಯಾಕೆ ಇರಿಸು ಮುರಿಸು!

By Roopa Hegde  |  First Published Sep 16, 2024, 3:11 PM IST

ಬಾಲಿವುಡ್ ಸ್ಟಾರ್ ಕಿಡ್, ಆಲಿಯಾ ಭಟ್ ಮಗಳು ರಾಹಾ ವಿಡಿಯೋ ಇಂದು ಸೋಶಿಯಲ್ ಮೀಡಿಯಾ ಆವರಿಸಿದೆ. ರಾಹಾ ಹಾಗೂ ಅಜ್ಜಿ ನೀತೂ ಕಪೂರ್ ಖುಷಿ ನೋಡಿದ ಫ್ಯಾನ್ಸ್, ಆಲಿಯಾ ಮೇಲೆ ಬಾಣ ಬಿಟ್ಟಿದ್ದಾರೆ. ಆಲಿಯಾ ಹೀಗ್ಯಾಕೆ ಆಡ್ತಿದ್ದಾರೆ ಅಂತ ಪ್ರಶ್ನೆ ಮಾಡಿದ್ದಾರೆ. 


ಕಪೂರ್ ಕುಟುಂಬ (Kapoor family)ದ ಮುದ್ದು ಗೊಂಬೆ ರಾಹಾ (Raha). ಬಾಲಿವುಡ್ ಸ್ಟಾರ್ ಕಪಲ್ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ (Star couple Alia Bhatt and Ranbir Kapoor) ಮಗಳು ರಾಹಾ ಅಂದ್ರೆ ಎಲ್ಲರಿಗೂ ಪ್ರೀತಿ. ಬೆಳ್ಳಗೆ, ಬೆಣ್ಣೆ ಮುದ್ದೆಯಂತಿರುವ ರಾಹಾ ದೊಡ್ಡವಳಾಗ್ತಿದ್ದಾಳೆ. ಮಾತನಾಡಲು ಕಲಿಯುತ್ತಿರುವ ರಾಹಾ, ಮುಂಬೈ ವಿಮಾನ ನಿಲ್ದಾಣದಲ್ಲಿ ಎಲ್ಲರನ್ನು ಅಟ್ರ್ಯಾಕ್ ಮಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಕಿಡ್ ರಾಹಾ ಹವಾ. ಎಲ್ಲ ಕಡೆ ರಾಹಾ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. 

ಆಲಿಯಾ ಭಟ್, ರಾಹಾರನ್ನು ಎತ್ತಿಕೊಂಡಿದ್ದಾರೆ. ಈ ಸಮಯದಲ್ಲಿ ಅಲ್ಲಿಗೆ ರಾಹಾ ಅಜ್ಜಿ, ಬಾಲಿವುಡ್ ಹಿರಿಯ ನಟಿ ನೀತೂ ಕಪೂರ್ (Neetu Kapoor)  ಬರ್ತಾರೆ. ನೀತೂರನ್ನು ನೋಡ್ತಿದ್ದಂತೆ ಖುಷಿಯಾಗುವ ರಾಹಾ, ಚಪ್ಪಾಳೆ ತಟ್ಟಿ, ಅಜ್ಜಿಗೆ ಏನೋ ಹೇಳುವ ಪ್ರಯತ್ನ ಮಾಡ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ರಾಹಾ, ಕ್ಯೂಟ್ನೆಸ್ ಗೆ ಅಭಿಮಾನಿಗಳು ಸೋತಿದ್ದಾರೆ. ಇದ್ರ ಜೊತೆ ಆಲಿಯಾ ಟ್ರೋಲರ್ ಬಾಯಿಗೆ ಆಹಾರವಾಗಿದ್ದಾರೆ. 

Tap to resize

Latest Videos

undefined

ಅಗತ್ಯಕ್ಕಿಂತ ಹೆಚ್ಚಿರುವ ಹಣ ವೇಸ್ಟ್, ಲೈಫ್ ಸೆಟಲ್ ಅರ್ಥ ಹೇಳಿದ ಕನ್ನಡತಿ ರಂಜನಿ ರಾಘವನ್

ಅಜ್ಜಿ ನೋಡಿ ರಾಹಾ, ಖುಷಿಯಾಗಿ ರಿಯಾಕ್ಟ್ ಮಾಡ್ತಿದ್ದರೆ, ಆಲಿಯಾ ಸ್ವಲ್ಪ ಗಂಭೀರವಾಗಿದ್ದರು. ನೀತೂ ಅವರನ್ನು ಒಮ್ಮೆ ವೆಲ್ ಕಂ ಮಾಡುವ ಆಲಿಯಾ, ನಂತ್ರ ಮಗಳನ್ನು ಕರೆದುಕೊಂಡು ವಿಮಾನ ನಿಲ್ದಾಣದ ಒಳಕ್ಕೆ ಹೋಗ್ತಾರೆ. ಅವರ ಮುಖದಲ್ಲಿ ನಗು ಇರಲಿಲ್ಲ. ಇದನ್ನೇ ಟಾರ್ಗೆಟ್ ಮಾಡ್ಕೊಂಡ ಟ್ರೋಲರ್ಸ್, ನೀತೂರಿಂದ ಮೊಮ್ಮಗಳನ್ನು ದೂರವಿಡಲು ಆಲಿಯಾ ನೋಡ್ತಿದ್ದಾರೆ ಅಂತ ಕಮೆಂಟ್ ಶುರು ಮಾಡಿದ್ದಾರೆ. ಯಾಕೋ ಆಲಿಯಾ, ಖುಷಿಯಾದಂತೆ ಕಾಣ್ತಿಲ್ಲ ಎಂದು ಒಬ್ಬರು ಕಮೆಂಟ್ ಹಾಕಿದ್ದಾರೆ. ಈ ವಿಡಿಯೋ ನೋಡಿದ್ರೆ, ಆಲಿಯಾ, ನೀತೂರನ್ನು ಅವೈಡ್ ಮಾಡಿದಂತೆ ಕಾಣ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನೀತೂ ಹಾಗೂ ರಾಹಾ ಮಾತನಾಡ್ವಾಗ, ಆಲಿಯಾ ಮುಂದೆ ತಿರುಗಿದ್ದು ಏಕೆ ಅನ್ನೋದು ಬಳಕೆದಾರರ ಪ್ರಶ್ನೆ. 

ಆಲಿಯಾ ಭಟ್ ಪರ ಕಮೆಂಟ್ ಮಾಡಿದವರ ಸಂಖ್ಯೆ ಕೂಡ ಸಾಕಷ್ಟಿದೆ. ಆಲಿಯಾ ಹಾಗೂ ನೀತೂ ಮಧ್ಯೆ ಒಳ್ಳೆ ಬಾಂಧವ್ಯವಿದೆ. ಕ್ಯೂನಲ್ಲಿ ನಿಂತಿದ್ದ ಆಲಿಯಾ, ನೀತೂಗೆ ಹೆಲ್ಪ್ ಆಗ್ಲಿ ಅಂತಾನೆ ಮುಂದೆ ಹೋದ್ರು. ಜೊತೆಗೆ ಪಾಪರಾಜಿಗಳ ಕ್ಯಾಮರಾ ಅವರಿಗೆ ಹಿಂಸೆ ನೀಡಿದೆ ಎಂದು ಕೆಲವರು ಹೇಳಿದ್ದಾರೆ. ಒಂದೇ ವಿಡಿಯೋ ನೋಡಿ ಜಡ್ಜ್ ಮಾಡ್ಬೇಡಿ. ಹಿಂದೆ, ಮುಂದೆ ಇರೋ ಇನ್ನೊಂದಿಷ್ಟು ವಿಡಿಯೋ ನೋಡಿ ಎಂದು ಮತ್ತೆ ಕೆಲ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ದಾಂಪತ್ಯ ಜೀವನಕ್ಕೆ ಅದಿತಿ ರಾವ್ ಹೈದರಿ – ಸಿದ್ಧಾರ್ಥ್, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್‌  

ಇನ್ನು ಕೆಲವರು ರಿಶಿ ಕಪೂರ್ ನೆನಪು ಮಾಡಿಕೊಂಡ್ರೆ, ಅಜ್ಜಿ ನೀತೂ ಸ್ಟೈಲ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಜ್ಜಿ – ಮೊಮ್ಮಗಳ ಜೋಡಿ ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ. ಕುಟುಂಬ ಸಮೇತ ರಣಬೀರ್ ಕಪೂರ್ ಟ್ರಿಪ್ ಹೊರಟಿದ್ದು, ರಣಬೀರ್ ಮತ್ತು ಮಗಳು ರಾಹಾ ಮಧ್ಯೆ ಒಳ್ಳೆ ಬಾಂಡಿಂಗ್ ಇದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ 14 ಏಪ್ರಿಲ್ 2022 ರಂದು ಮದುವೆಯಾಗಿದ್ದಾರೆ. ಇದಕ್ಕೂ ಮುನ್ನ ಇಬ್ಬರೂ ಐದು ವರ್ಷಗಳ ಕಾಲ ಪರಸ್ಪರ ಡೇಟ್ ಮಾಡಿದ್ದರು. ಮದುವೆಯಾಗಿ 8 ತಿಂಗಳ ನಂತರ ಆಲಿಯಾ, ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ಅವಳಿಗೆ ರಾಹಾ ಎಂದು ಹೆಸರಿಡಲಾಗಿದೆ. ರಾಹಾ ಇದೇ ನವೆಂಬರ್ 6 ಬಂದ್ರೆ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾಳೆ. ರಾಹಾ, ಸಾರ್ವಜನಿಕವಾಗಿ ಮಾತನಾಡಿದ್ದನ್ನು ಅಭಿಮಾನಿಗಳು ನೋಡಿರಲಿಲ್ಲ. ಇದೇ ಮೊದಲ ಬಾರಿ ರಾಹಾ ಧ್ವನಿ ಕೇಳಲು ಅಭಿಮಾನಿಗಳಿಗೆ ಸಿಕ್ಕಿದೆ. ಇದು ಫ್ಯಾನ್ಸ್ ಖುಷಿಯನ್ನು ಇಮ್ಮಡಿಗೊಳಿಸಿದೆ. 
 

click me!