
ಈ ಸ್ಟಾರ್ ನಟಿ ಈಗ ಬಾಲಿವುಡ್ ನಲ್ಲಿ ಫೇಮಸ್ ಆಗಿದ್ದಾಳೆ. ಸೌತ್ ಸಿನಿ ರಂಗದಲ್ಲಿ ಕ್ವೀನ್ ಆಗಿ ಮೆರೆದಿದ್ದಾಳೆ. ಸ್ಟಾರ್ ನಟಿಯಾಗಿ ಮೆರೆದ ಈಕೆ ಮಾಡಿದಷ್ಟು ಐಟಂ ಸಾಂಗ್‌ಗಳನ್ನು ಬೇರೆ ಯಾವ ನಟಿಯೂ ಮಾಡಿಲ್ಲ. ಸಾಮಾನ್ಯವಾಗಿ ಸ್ಟಾರ್ ನಟಿಯರು ಐಟಂ ಸಾಂಗ್‌ಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಈಕೆ ಮಾತ್ರ ಯಾವ ಪಾತ್ರ ಮಾಡುವುದಕ್ಕೂ ಸೈ, ಡಾನ್ಸ್ ಮಾಡುವುದಕ್ಕೂ ಸೈ, ಯಾವಾಗಲೂ ಸಿದ್ಧ ಎಂದು ಮುಂದೆ ಬರುತ್ತಾರೆ. ಅನೇಕ ಚಿತ್ರಗಳಲ್ಲಿಈಕೆ ಈವರೆಗೆ ಐಟಂ ಸಾಂಗ್‌ಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಕೆಲವು ಸೂಪರ್ ಹಿಟ್ ಚಿತ್ರಗಳಿವೆ. ಇನ್ನು ಕೆಲವು ಫ್ಲಾಪ್‌ಗಳಿವೆ.
ಇತ್ತೀಚೆಗೆ ಈ ನಟಿ ರಾಜ್ ಕುಮಾರ್ ರಾವ್, ಶ್ರದ್ಧಾ ಕಪೂರ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ಸ್ತ್ರೀ 2 ರಲ್ಲಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಐಟಂ ಸಾಂಗ್‌ಗಳ ಬಗ್ಗೆ ಆಸಕ್ತಿದಾಯಕ ಹೇಳಿಕೆ ನೀಡಿದ್ದರು. ಒಂದು ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ ನಂತರ ತಾನು ಇನ್ನು ಮುಂದೆ ಜೀವನದಲ್ಲಿ ಐಟಂ ಸಾಂಗ್ ಕಡೆ ಹೋಗಬಾರದು ಎಂದುಕೊಂಡಿದ್ದೆ ಎಂದಿದ್ದರು. ಅದು ಬೇರೆ ಯಾವ ಸಿನೆಮಾವಲ್ಲ ರಜನೀಕಾಂತ್ ಅವರ ಜೈಲರ್ ಸಿನೆಮಾ.
ತೆಲುಗು ಬಿಗ್ ಬಾಸ್ ನಲ್ಲಿ ಮಿಂಚುತ್ತಿರುವ ಕನ್ನಡಿಗ, ಮಂಗಳೂರು ಪ್ರತಿಭೆ ಪೃಥ್ವಿರಾಜ್ ಶೆಟ್ಟಿ ಯಾರು?
ಜೈಲರ್ ಚಿತ್ರದಲ್ಲಿ ಕಾವಲಯ್ಯ ಹಾಡು ಸೆನ್ಸೇಷನಲ್ ಹಿಟ್ ಆಯಿತು. ಕೆಲವು ಲಕ್ಷ ಜನರು ಆ ಹಾಡಿಗೆ ರೀಲ್ಸ್ ಮಾಡಿದರು. ವಿಶ್ವದಾದ್ಯಂತ ಆ ಹಾಡು ಟ್ರೆಂಡ್ ಆಯಿತು. ಎಲ್ಲೆಡೆ ನೋಡಿದರೂ ಅದರಲ್ಲಿ ಹೆಜ್ಜೆಗಳ ಬಗ್ಗೆ ಮಾತನಾಡುತ್ತಿದ್ದರು. ಈ ಹಾಡಿಗೆ ಸರಿಸಾಟಿಯಾಗುವಂತೆ ಮತ್ತೊಂದು ಐಟಂ ಸಾಂಗ್ ಮಾಡಲು ಸಾಧ್ಯವಿಲ್ಲ. ಹೋಲಿಕೆ ಮಾಡಿ ಟೀಕಿಸುತ್ತಾರೆ ಎಂಬ ಭಯ ಶುರುವಾಯಿತು. ಹಾಗಾಗಿ ಐಟಂ ಸಾಂಗ್‌ಗಳನ್ನು ಇನ್ನು ಮಾಡಬಾರದು ಎಂದುಕೊಂಡಿದ್ದೆ ಎಂದು ಈ ನಟಿ ಹೇಳಿದ್ದರು. ಆದರೆ ಆ ಬಳಿಕ ಸ್ತ್ರೀ 2 ಚಿತ್ರದಲ್ಲಿ ಕುಣಿಯುವ ಅವಕಾಶ ನಟಿಗೆ ಒಲಿದು ಬಂತು.
ಸ್ತ್ರೀ 2 ನಲ್ಲಿ ಐಟಂ ಸಾಂಗ್ ನಲ್ಲಿ ಅವಕಾಶ ಬಂದಾಗ ಈ ನಟಿ ಒಪ್ಪಿರಲಿಲ್ಲ ಬಳಿಕ ಸಿನೆಮಾ ತಂಡ ಮನವೊಲಿಸಿ, ಹಾಡು ಹಿಟ್ ಆಗುತ್ತದೆ ಎಂದು ತಿಳಿಸಿದ ಬಳಿಕ ಹೆಜ್ಜೆ ಹಾಕಲು ಒಪ್ಪಿಕೊಂಡಿದ್ದರು. ನಂತರ ಸ್ತ್ರೀ 2 ನಲ್ಲಿ ಬಂದ ಆಜ್ ಕಿ ರಾತ್ ಎಂಬ ಸ್ಪೆಷಲ್ ಸಾಂಗ್ ಸೂಪರ್ ಹಿಟ್ ಆಗಿತ್ತು.
ಅದಿತಿ ರಾವ್ - ಸಿದ್ದಾರ್ಥ್ ವಿವಾಹವಾದ 400 ವರ್ಷ ಹಳೆಯ ದೇವಾಲಯದ ರಹಸ್ಯವೇನು? ರಾಜಮನೆತನದ ನಂಟೇನು?
ಎನ್‌ಟಿಆರ್ ಜೈ ಲವಕುಶ ಚಿತ್ರದಲ್ಲಿ ಸ್ವಿಂಗ್ ಜರಾ, ಜೈಲರ್ ಚಿತ್ರದಲ್ಲಿ ಕಾವಲಯ್ಯ ಸಾಂಗ್‌ಗಳಲ್ಲಿ ಈ ನಟಿಯ ನೃತ್ಯದ ಭಂಗಿಗಳು ಮೈಂಡ್ ಬ್ಲೋಯಿಂಗ್ ಆಗಿದೆ. ಕೆಜಿಎಫ್‌ನಂತಹ ಪ್ಯಾನ್ ಇಂಡಿಯಾ ಚಿತ್ರದಲ್ಲಿಯೂ ಸೌತ್ ನಟಿ ಸ್ಪೆಷಲ್ ಸಾಂಗ್ ಮಾಡಿದ್ದಾರೆ. ರಾಕಿಬಾಯ್ ಯಶ್ ಜೊತೆ ಕೂಡ ಡಾನ್ಸ್ ಮಾಡಿದ್ದರು. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ಅಲ್ಲುಡು ಶ್ರೀನು, ಸ್ಪೀಡುನ್ನೋಡು ಚಿತ್ರಗಳಲ್ಲಿ ಐಟಂ ಸಾಂಗ್‌ಗಳನ್ನು ಮಾಡಿದ್ದಾರೆ. ಅದೇ ರೀತಿ ಎನ್‌ಟಿಆರ್ ಜೈ ಲವಕುಶ, ಮಹೇಶ್ ಬಾಬು ಸರಿಲೇರು ನೀಕೆವ್ವರು, ವರುಣ್ ತೇಜ್ ಗని ಸ್ಪೆಷಲ್ ಸಾಂಗ್ ಮಾಡಿದ್ದಾರೆ.
ಇಷ್ಟೆಲ್ಲ ವಿವರಣೆ ನೀಡಿದ ಬಳಿಕ ನಿಮಗೆ ಈ ಚಿತ್ರದಲ್ಲಿರುವ ನಟಿ ಯಾರೆಂದು ನೀವು ಯಾರೆಂದು ಊಹಿಸದಿರಲು ಸಾಧ್ಯವೇ ಇಲ್ಲ ಅಲ್ಲವೇ? ಆ ನಟಿ ಬೇರಾರು ಅಲ್ಲ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ. ಇತ್ತೀಚೆಗೆ ತಮ್ಮ ಬಾಲ್ಯದ ಫೋಟೋಗಳನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ 1989 ರಿಂದ ಮೂಡ್ ಎಂಬ ಶೀರ್ಷಿಕೆ ನೀಡಿದ್ದಾರೆ. 34 ವರ್ಷ ವಯಸ್ಸಿನ ತಮನ್ನಾ ಅವರು ಅಶೋಕ್ ತೇಜಾ ನಿರ್ದೇಶನದ ಮತ್ತು ಸಂಪತ್ ನಂದಿ ನಿರ್ಮಿಸಿದ ತೆಲುಗಿನ ಅಲೌಕಿಕ ಥ್ರಿಲ್ಲರ್ ಚಿತ್ರ ಒಡೆಲಾ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಹೆಬ್ಬಾ ಪಟೇಲ್ ಮತ್ತು ಕನ್ನಡದ ನಟ ವಸಿಷ್ಟ ಎನ್ ಸಿಂಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.