ಪುನೀತ್ ರಾಜ್‌ಕುಮಾರ್ ಜೊತೆ ಅಭಿನಯಿಸಿದ್ದ ನಟಿಯ ಬೋಲ್ಡ್ ಲುಕ್, ಹಾಟ್ ಫೋಟೋಸ್ ವೈರಲ್

First Published Sep 16, 2023, 12:53 PM IST

ಕನ್ನಡದಲ್ಲಿ ನಟ ಪುನೀತ್ ರಾಜ್‌ಕುಮಾರ್‌ ಜೊತೆ ಅರಸು, ಮೌರ್ಯ ಚಿತ್ರದಲ್ಲಿ ನಟಿಸಿದ ನಟಿ ಮೀರಾ ಜಾಸ್ಮಿನ್‌. ಕೆಲ ವರ್ಷಗಳಿಂದ ಸಿನಿರಂಗದಿಂದ ದೂರವಿದ್ದವರು ಮತ್ತೆ ನಟನೆಯಲ್ಲಿ ಸಕ್ರಿಯವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದು, ಇತ್ತೀಚಿಗೆ ನಟಿ ಫ್ಲೋರಲ್ ಪ್ರಿಂಟ್‌ನ ಗೌನ್‌ನಲ್ಲಿ ಸಖತ್ ಹಾಟ್ ಆಗಿ ಫೋಸ್ ನೀಡಿದ್ದಾರೆ.

ಬಹುಭಾಷಾ ನಟಿ ಮೀರಾ ಜಾಸ್ಮಿನ್, ಪುನೀತ್ ರಾಜ್‌ಕುಮಾರ್‌ ಜೊತೆ 'ಅರಸು' ಚಿತ್ರದಲ್ಲಿ ಅಭಿನಯಿಸಿದ ನಂತರ ಕನ್ನಡ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿಲ್ಲ. ಅಷ್ಟೇ ಯಾಕೆ ಇತರ ಭಾಷೆಯ ಸಿನಿಮಾಗಳಿಂದಲೂ ದೂರವಿದ್ದರು. ಈ ವರ್ಷ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾದ ವಿಮಾನಂ ಚಿತ್ರದ ಮೂಲಕ ನಟಿ ಮತ್ತೆ ಕಂ ಬ್ಯಾಕ್ ಮಾಡಿದ್ದಾರೆ. 

ಚಿತ್ರದಲ್ಲಿ ಮತ್ತೆ ಅಭಿನಯಿಸಲು ಆರಂಭಿಸುವ ಜೊತೆಗೇ ಈ ಮುದ್ದಾದ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿದ್ದಾರೆ. ಸ್ಕರ್ಟ್‌, ಟಾಪ್‌, ಸೀರೆಯುಟ್ಟ ಕ್ಯೂಟ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ನಟಿ ಫ್ಲೋರಲ್ ಪ್ರಿಂಟ್‌ನ ಗೌನ್‌ನಲ್ಲಿ ಹಾಟ್ ಹಾಟ್ ಆಗಿ ಪೋಸ್ ನೀಡಿದ್ದು, ಫೋಟೋಸ್ ಎಲ್ಲೆಡೆ ವೈರಲ್ ಆಗ್ತಿದೆ.

Latest Videos


ಬಿಳಿ ಮತ್ತು ಕಂದು ಬಣ್ಣ ಮಿಶ್ರಿತ ಫ್ಲೋರಲ್‌ ಪ್ರಿಂಟ್‌ಗೆ ಮೀರಾ ವೈಟ್ ಇಯರಿಂಗ್ಸ್ ಧರಿಸಿದ್ದಾರೆ. ಓಪನ್ ಹೇರ್‌ನಲ್ಲಿ ಸಖತ್‌ ಕ್ಯೂಟ್‌ ಆಗಿ ಫೋಸ್ ನೀಡಿದ್ದಾರೆ. ಮೀರಾ ಜಾಸ್ಮಿನ್‌ ಶೇರ್‌ ಮಾಡಿರುವ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ಯೂಟಿಫುಲ್‌, ಕ್ಯೂಟ್‌, ಹಾಟ್‌ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

ಸುಮಾರು ಒಂದು ದಶಕದಿಂದ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ನಾಪತ್ತೆಯಾಗಿದ್ದ ಮೀರಾ ಜಾಸ್ಮಿನ್, ವಿಮಾನಂ (ಏರೋಪ್ಲೇನ್) ಎಂಬ ದ್ವಿಭಾಷಾ ಚಿತ್ರದೊಂದಿಗೆ ಮರಳಿದ್ದಾರೆ. ಇದು ಮೀರಾ ಅವರ 40ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಂಡಿತು. ಆ ನಂತರ ಮೀರಾ ಜಾಸ್ಮಿನ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.

ಮಲಯಾಳಂನ  ಸೂತ್ರಧಾರನ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿ ಜರ್ನಿ ಆರಂಭಿಸಿದರು. ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಮಾಧವನ್ ಜೊತೆಯಲ್ಲಿ ಅಭಿನಯಿಸಿದ 'ರನ್' ಚಿತ್ರದ ಮೂಲಕ. ಆ ನಂತರ ಅವರು 'ಆಯುಧ ಎಳುತ್ತು' ಮತ್ತು 'ಸಂದ ಕೋಳಿ' ಚಿತ್ರಗಳಲ್ಲಿ ಅದ್ಬುತ ಅಭಿನಯ ನೀಡಿದ್ದಾರೆ. 2014ರಲ್ಲಿ ಅನಿಲ್ ಜಾನ್‌ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟರು. 

ಆ ನಂತರ ನಟಿ ನಿಧಾನವಾಗಿ ಚಿತ್ರರಂಗದಿಂದ ದೂರವಾದರು. ಮಾತ್ರವಲ್ಲ ತನಗೆ ದೊರಕಿದ ಅನೇಕ ಪಾತ್ರಗಳನ್ನು ನಿರಾಕರಿಸಿದರು. ಕಾರಣಾಂತರಗಳಿಂದ ಏಪ್ರಿಲ್ 2016ರಲ್ಲಿ ವಿಚ್ಛೇದನ ಪಡೆದುಕೊಂಡರು.  2006ರಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನ್ಯಾಯಾಲಯದ ಪ್ರಕಾರ ದಂಡ ಕಟ್ಟಿದ್ದರು. 

ಕೊನೆಯದಾಗಿ ಮೀರಾ 2014ರಲ್ಲಿ ತಮಿಳು ಚಲನಚಿತ್ರದಲ್ಲಿ ಕಾಣಿಸಿಕೊಂಡರು. ನಟಿ ಬಹಳ ಸಮಯದ ನಂತರ ಮತ್ತೆ ಈ ವರ್ಷ ಅಭಿನಯದಲ್ಲಿ ತೊಡಗಿಸಿಕೊಂಡಿದ್ದಾರೆ.  ನಟಿ ಮೀರಾ ಜಾಸ್ಮಿನ್ ಇತ್ತೀಚೆಗೆ ತಮ್ಮ ಅಧಿಕೃತ Instagram ಪ್ರೊಫೈಲ್‌ನ್ನು ರಚಿಸಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್ ಜೊತೆ ಮೌರ್ಯ, ಅರಸು ಚಿತ್ರಗಳಲ್ಲಿ ಪುನೀತ್‌ ರಾಜ್‌ಕುಮಾರ್ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. 

click me!