ಸಿಂಗಲ್ಲೂ ಅಲ್ಲ, ರಿಲೇಷನ್‌ನಲ್ಲೂ ಇಲ್ಲ! ಮಲೈಕಾ ಅರೋರಾ ಹೊಸ ಪೋಸ್ಟ್‌ಗೆ ಫ್ಯಾನ್ಸ್‌ ಸುಸ್ತು...

By Suchethana D  |  First Published Nov 25, 2024, 6:13 PM IST

ಸಿಂಗಲ್ಲೂ ಅಲ್ಲ, ರಿಲೇಷನ್‌ನಲ್ಲೂ ಇಲ್ಲ! ಮಲೈಕಾ ಅರೋರಾ ಹೊಸ ಪೋಸ್ಟ್‌ಗೆ ಫ್ಯಾನ್ಸ್‌ ಸುಸ್ತು. ತಾನು ಸಿಂಗಲ್‌ ಎಂದು ಅರ್ಜುನ್‌ ಕಪೂರ್ ಹೇಳಿದ ಬೆನ್ನಲ್ಲೇ ಇದೆಂಥ ಪೋಸ್ಟ್‌? 
 


​  ಸದ್ಯ ಬಾಲಿವುಡ್​ನಲ್ಲಿ ಹಾಟ್​ ಟಾಪಿಕ್​ಗಳಲ್ಲಿ ಒಂದಾಗಿರುವುದು ನಟರಾದ ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ಬ್ರೇಕಪ್​ ಕುರಿತು. ದಶಕದಿಂದ ರಿಲೇಷನ್​ನಲ್ಲಿದ್ದ ಈ ನಟರು ಈಗ ಬ್ರೇಕಪ್​ ಆಗಿರುವುದು ಕನ್​ಫರ್ಮ್​ ಆಗಿದೆ. ಇದಾಗಲೇ ಅರ್ಜುನ್​ ಕಪೂರ್​ ತಾವು ಸಿಂಗಲ್​ ಎಂದು ಹೇಳಿದ್ದಾರೆ. ಹತ್ತು ವರ್ಷ ದೊಡ್ಡವಳಾಗಿರುವ ಮಲೈಕಾ ಜೊತೆ ದಶಕದವರೆಗೆ ಲಿವ್​ ಇನ್​ ರಿಲೇಷನ್​ನಲ್ಲಿದ್ದ ಅರ್ಜುನ್​ ಕೂಡ ಬ್ರೇಕಪ್​ ಬಗ್ಗೆ ಮಾತನಾಡಿದ್ದಾರೆ. ಇದಾಗಲೇ ಮಲೈಕಾ ಕೂಡ ಹಲವಾರು ರೀತಿಯಲ್ಲಿ ತಾವು ಒಂಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ವಯಸ್ಸು 50 ಆದ್ರೂ ಇನ್ನೂ ಮಾದಕ ನೋಟ, ಬಟ್ಟೆಗಳಿಂದ ಅಭಿಮಾನಿಗಳ ಹೃದಯ ಕದಿಯುತ್ತಿದ್ದಾರೆ ಈ ಬಾಲಿವುಡ್​ ನಟಿ. ಈ ಮೂಲಕ ಹಸಿಬಿಸಿ ಲೇಡಿ ಎಂದೇ ಫೇಮಸ್​ ಆಗಿದ್ದಾರೆ.  ಅರ್ಜುನ್​ ಕಪೂರ್​ ಡೇಟಿಂಗ್, ಬ್ರೇಕಪ್​ ವಿಷಯ ಸದಾ ಹಾಟ್​ ಟಾಪಿಕ್​ ಆಗಿಯೇ ಇರುತ್ತದೆ. 

ಇದೀಗ ನಟಿ ಹೊಸ ಪೋಸ್ಟ್‌ ಒಂದನ್ನು ಶೇರ್‍‌ ಮಾಡಿಕೊಂಡಿದ್ದಾರೆ. ಅದರಲ್ಲಿ ಸಿಂಗಲ್‌, ಇನ್‌ ರಿಲೇಷನ್‌ ಎನ್ನುವ ಆಯ್ಕೆ ಇದೆ. ಎರಡನ್ನೂ ಖಾಲಿ ಬಿಟ್ಟಿರುವ ನಟಿ ಮೂರನೆಯದ್ದಕ್ಕೆ ಕ್ಲಿಕ್‌ ಮಾಡಿದ್ದಾರೆ. ಅದರಲ್ಲಿ ಹ್ಹೆಹ್ಹೆಹ್ಹೆ ಎಂದು ಬರೆದಿದೆ. ಹಾಗಿದ್ರೆ ನಟಿ ಏನು ಹೇಳಲು ಹೊರಟಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಕಪೂರ್‍‌ ತಾವು ಇನ್ನು ಸಿಂಗಲ್‌ ಎಂದು ಹೇಳಿಕೊಂಡ ಬಳಿಕ ನಟಿ ವ್ಯಂಗ್ಯವಾಡುವ ರೀತಿಯಲ್ಲಿ ಇದನ್ನು ಬರೆದುಕೊಂಡಿರುವುದು ಅಭಿಮಾನಿಗಳ ತಲೆಯನ್ನು ಮತ್ತಷ್ಟು ಬಿಸಿ ಮಾಡಿದೆ. ಅಷ್ಟಕ್ಕೂ, ಇವರ ಬ್ರೇಕಪ್​ ವಿಷಯ ಹಿಂದೆಯೂ ಈ ವಿಷಯ ಸಾಕಷ್ಟು ಸದ್ದು ಮಾಡಿತ್ತು. ನಂತರ ಇಬ್ಬರೂ ಒಟ್ಟಾಗಿ ಓಡಾಡಿದ್ದರು. ಆದರೆ ಕೊನೆಗೂ ಇದು ನಿಜ ಆಗಿದ್ದಾರೆ.  ಅದೇನೇ ಇದ್ದರೂ, 50 ವರ್ಷದ ಮಲೈಕಾ ಮತ್ತು ಅರ್ಜುನ್​ ಕಪೂರ್​ ಸುದ್ದಿ ಸಿನಿ ಪ್ರಿಯರ ಬಾಯಲ್ಲಿ ಎಂದಿಗೂ ಹಾಟ್​ ಟಾಪಿಕ್ಕೇ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ಈ ವಯಸ್ಸಿನಲ್ಲಿಯೂ ಇಂದಿಗೂ, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್​ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್​ ಸೆನ್ಸ್​ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ.  

Tap to resize

Latest Videos

ಫಳ ಫಳ ಹೊಳೆಯುವ ಪ್ರಿಯಾಂಕಾ ಚೋಪ್ರಾ ಹೊಕ್ಕಳಿಗೆ 2.7 ಕೋಟಿ ಬೆಲೆ! ಅಂಥದ್ದೇನಿದೆ ನೋಡಿ..

 ಇದೀಗ ಒಂಟಿಯಾಗಿರುವ ಮೂಲಕ ಮಲೈಕಾ, ತಾನು ಒಂಟಿ ಒಂಟಿ ಎಂದು ಈಗ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಸಾಲದು ಎನ್ನುವುದಕ್ಕೆ ಕೆಲವು ದಿನಗಳ ಹಿಂದೆ ಟಿ-ಷರ್ಟ್​ ಮೇಲೆಯೂ ಅದೇ ಅರ್ಥ ಕೊಡುವ ಬರಹ ಬರೆದುಕೊಂಡಿದ್ದರು. ನಾನೀಗ ಬೋರಿಂಗ್​ ಬೇಬಿ. ದುಡ್ಡು ಮಾಡುವುದು, ಮನೆಗೆ ಬರುವುದು ಅಷ್ಟೇ ಕೆಲಸ ಎಂದಿದ್ದರು. ಇದಾಗಲೇ ಡ್ರಿಂಕ್ಸ್ ಕೂಡ ಮಾಡುವುದಿಲ್ಲ ಎಂದು ನಟಿ ಶಪಥ ಮಾಡಿದ್ದರು. ಆದರೆ ಈ ಟಿ-ಷರ್ಟ್​ ಮೇಲೆ ಬರೆದುಕೊಂಡಿರುವುದು ಸಕತ್​ ವೈರಲ್​ ಜೊತೆ ಟ್ರೋಲ್​ ಕೂಡ ಆಗುತ್ತಿದೆ. ಹತ್ತು ವರ್ಷ ಚಿಕ್ಕವನಾದ ಮೇಲೆ ಈಗ ಇನ್ನೆಷ್ಟು ವರ್ಷ ಚಿಕ್ಕವನನ್ನು ಹುಡುಕುತ್ತಿರುವೆ ಎಂದು ಪ್ರಶ್ನಿಸುತ್ತಿದ್ದಾರೆ. ಬೋರ್​ ಆದರೆ, ಅದನ್ನು ಹೀಗೆಲ್ಲಾ ತೋರಿಸಿಕೊಳ್ಳಬೇಕಾ? ಇದೇನು ಮೂರನೆಯದ್ದಕ್ಕೆ ಆಫರ್​ ಕೊಡ್ತಿದ್ಯಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.

ಈಚೆಗಷ್ಟೇ ಅರ್ಜುನ್​ ಕಪೂರ್​ ತಮಗಿರುವ ಗಂಭೀರ ಕಾಯಿಲೆ ಬಗ್ಗೆ ವಿವರಿಸಿದ್ದರು. 'ಹಾಲಿವುಡ್ ರಿಪೋರ್ಟರ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಅರ್ಜುನ್ ಕಪೂರ್ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದರು. ಅಲ್ಲಿ ಅವರು ಕಾಯಿಲೆ ಬಗ್ಗೆ ಮಾತನಾಡಿದ್ದಾರೆ.  ಖಿನ್ನತೆಯಿಂದ ಬಳಲುತ್ತಿರುವ ತಾವು ಹಶಿಮೊಟೊ ಎಂಬ ಕಾಯಿಲೆಯಿಂದಲೂ ಬಳಲುತ್ತಿರುವುದಾಗಿ ಹೇಳಿ ಕೊಂಡಿದ್ದರು.  ಇದು ಥೈರಾಯ್ಡ್ ಕಾಯಿಲೆ ಎಂದು ವಿಶ್ಲೇಷಿಸಿದ್ದರು. ಇದರಲ್ಲಿ ತೂಕವೂ ಹೆಚ್ಚುತ್ತದೆ. ಇದರಿಂದ ನನ್ನ ದೇಹವೂ ಸಾಕಷ್ಟು ತೊಂದರೆ ಎದುರಿಸುತ್ತಿದೆ. ನನಗೆ 30 ವರ್ಷದವನಿದ್ದಾಗ ಈ ಕಾಯಿಲೆ ಬಂದಿತ್ತು. ನನ್ನ ತಾಯಿ ಮೋನಾ ಕಪೂರ್ ಅವರಿಗೂ ಈ ಕಾಯಿಲೆ ಇತ್ತು ಮತ್ತು ಅವರ ಸಹೋದರಿ ಅಂಶುಲಾ ಕಪೂರ್ ಅವರಿಗೂ ಇದೆ ಎಂದು ಅವರು ಬಹಿರಂಗಪಡಿಸಿದ್ದರು. 

ನನಗೆ ಮಗು ಇಷ್ಟವಿಲ್ಲ, ಎಲ್ಲರೂ ಸುಳ್ಳೆ ಹೇಳ್ತಾರೆ, ಈ ಹಿಂಸೆ ತಾಳೋಕೆ ಕಷ್ಟವಾಗ್ತಿದೆ: ನಟಿ ರಾಧಿಕಾ ಓಪನ್ ಮಾತು!

click me!