ಸದ್ಯ ಅಮೀರ್‌ಖಾನ್ 'ಸಿತಾರೆ ಜಮೀನ್ ಪರ್' ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಹೀರೋಯಿನ್ ಕೈಗೆ ಉಗುಳಿ ಓಡುತ್ತಿದ್ದ ಅವರ ವಿಚಿತ್ರ ಅಭ್ಯಾಸ ಚರ್ಚೆಗೆ ಬಂದಿದೆ.
ಅಮೀರ್‌ಖಾನ್ ಅಂದರೆ ಸಾಕು, ಪಫೆಕ್ಷನಿಸ್ಟ್ ಅಂತಾರೆ ಬಹಳ ಮಂದಿ. ಅವರ ಸಿನಿಮಾಗಳನ್ನು ನೋಡ್ತಿದ್ರೆ ನಮಗೂ ಅವರ ಪರ್ಫೆಕ್ಷನಿಸಂ ಹೇಗಿರಬಹುದು, ಒಂದು ಸಿನಿಮಾಗಾಗಿನ ಅವರ ಶ್ರಮ ಎಷ್ಟಿರಬಹುದು ಅನ್ನೋದು ಊಹೆಗೆ ನಿಲುಕುತ್ತದೆ. ಹಾಗೆ ನೋಡಿದರೆ ಅಮೀರ್ ಖಾನ್ ಭಾರತೀಯ ಚಿತ್ರರಂಗಕ್ಕೆ ಹಲವಾರು ಹಿಟ್ ಮತ್ತು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ತನ್ನ ಅಭಿನಯದಿಂದಲೇ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಈ ನಟ ಸದ್ಯ 'ಸಿತಾರೆ ಜಮೀನ್ ಪರ್' ಸಿನಿಮಾ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಈ ಸೂಪರ್‌ಸ್ಟಾರ್‌ನ ವೀಡಿಯೊವೊಂದು ನೆಟಿಜನ್‌ಗಳನ್ನು ಕೆರಳಿಸಿದೆ, ಇದಕ್ಕೆ ಕಾರಣ ಅಮೀರ್‌ಖಾನ್ ನಾಯಕಿಯರ ಕೈಗೆ ಉಗುಳುತ್ತಿದ್ದದ್ದು. ಸೋಷಿಯಲ್ ಮೀಡಿಯಾದಲ್ಲಿ ಈಗ ಇದೇ ಸುದ್ದಿ. ಅಮೀರ್‌ಖಾನ್ ನಾಯಕಿಯರ ಕೈಗೆ ಉಗುಳಿ ಓಡಿ ಹೋಗುತ್ತಿದ್ದದ್ದು ಯಾಕೆ ಅಂತ. ಇದಕ್ಕೆ ಸಂಬಂಧಿಸಿದ ವೀಡಿಯೋವೂ ಬಹಿರಂಗಗೊಂಡಿದ್ದು ಅಮೀರ್ ತನ್ನ ಸಿನಿಮಾದ ನಾಯಕಿಯರ ಕೈಗಳ ಮೇಲೆ ಉಗುಳುತ್ತಿದ್ದರು ಎಂದು ಸಾಬೀತಾಗಿದೆ.
ಅಂದಹಾಗೆ ಈ ಚರ್ಚೆ ಮುನ್ನೆಲೆಗೆ ಬರಲು ಕಾರಣವಾಗಿದ್ದು ಒಂದು ಅವಾರ್ಡ್ ಫಂಕ್ಷನ್. ಹೌದು, MAMI 18ನೇ ಮುಂಬೈ ಚಲನಚಿತ್ರೋತ್ಸವದ ಸಂದರ್ಭದಲ್ಲಿ. ಈ ವೇಳೆ ಅಮೀರ್ ಅವರು, ಫರಾ ಖಾನ್ ಮತ್ತು ಅವರ ಜೋ ಜೀತಾ ವೋಹಿ ಸಿಕಂದರ್ ಸಹ-ನಟರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. ಈ ಟೈಮ್‌ನಲ್ಲಿ ಫರಾ ಒಂದು ಘಟನೆಯನ್ನು ನೆನಪಿಸಿಕೊಂಡರು. 'ಅಮೀರ್ ಈ ವಿಚಿತ್ರ ಅಭ್ಯಾಸವನ್ನು ತನ್ನ ಹೀರೋಯಿನ್ ಮೇಲೆ ಪ್ರಯೋಗಿಸಿದ್ದರು.
ಮಾಜಿ ಪತಿ ಎ.ಆರ್. ರೆಹಮಾನ್ ಕುರಿತು ಮೌನ ಮುರಿದ ಸಾಯಿರಾ: ದನಿ ಸಂದೇಶದಲ್ಲಿ ಹೇಳಿದ್ದೇನು?
ಈಗಲೂ ಈ ಅಭ್ಯಾಸ ಮುಂದುವರಿದಿದೆ ಅನಿಸುತ್ತೆ. ಆತ ಹೀರೋಯಿನ್ ಬಳಿ ಹೋಗಿ ನಾನು ನಿನ್ನ ಕೈ ನೋಡಿ ಭವಿಷ್ಯ ಹೇಳ್ತೀನಿ ಅಂತಾರೆ. ಹೀರೋಯಿನ್ ಸಹಜ ಕುತೂಹಲದಿಂದ ಕೈ ನೀಡಿದರೆ ಕೈ ಮೇಲೆ ಉಗುಳಿ ಓಡಿಹೋಗುತ್ತಾರೆ. ಇದ್ಯಾಕೆ ಇಂಥಾ ವಿಚಿತ್ರ ಅಭ್ಯಾಸ?' ಎಂತ ಫರಾ ಕೇಳಿದ್ದಾರೆ.
ಈ ಪ್ರಶ್ನೆ ನಿರೀಕ್ಷಿಸದ ಅಮೀರ್ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ತನ್ನ ಈ ವಿಚಿತ್ರ ಅಭ್ಯಾಸವನ್ನು ಒಪ್ಪಿಕೊಂಡು ಬಿಡುತ್ತಾರೆ. 'ಹೌದು, ಅಂಥದ್ದೊಂದು ವಿಚಿತ್ರ ಅಭ್ಯಾಸ ನನಗಿದೆ. ಆದರೆ ನನಗೆ ಯಾವ ಹೀರೋಯಿನ್ ಅಂಗೈ ಮೇಲೆ ಉಗುಳಬೇಕು ಅಂತ ಅನಿಸಿ ನಾನು ಉಗುಳುತ್ತೇನೋ ಅವರೆಲ್ಲ ನಂಬರ್ 1 ಆಗಿದ್ದಾರೆ' ಎಂದುಬಿಡ್ತಾರೆ ಅಮೀರ್. ಮತ್ತೆ ನೋಡಿದಾಗ ಈ ಮಾತು ಪೂರ್ತಿ ಸುಳ್ಳೇನಲ್ಲ ಅನ್ನೋದು ಗೊತ್ತಾಗುತ್ತೆ. ಏಕೆಂದರೆ ಅಮೀರ್ ಕೈ ಮೇಲೆ ಉಗುಳಿದ ಅಷ್ಟೂ ಮಂದಿ ನಟಿಯರೂ ನಂ.೧ ಸ್ಥಾನಕ್ಕೇರಿದ್ದು ಸುಳ್ಳಲ್ಲ. ಆದರೆ ಇದನ್ನು ಜೋಕ್ ಆಗಿ ತಗೊಂಡ ಪೂಜಾ ಬೇಡಿ, 'ಹಾಗಿದ್ದ ನನ್ನ ಮಗಳು ಅಲಿಯಾಗೆ ಹೇಳ್ತೀನಿ. ಹೋಗಿ ಅಮೀರ್ ಅಂಕಲ್ ಮುಂದೆ ಅಂಗೈ ಚಾಚು ಅಂತ. ಅವಳ ಅಂಗೈ ಮೇಲೂ ಉಗುಳಿಬಿಡಿ. ನಂಗೆ ಮಗಳು ನಂಬರ್ ೧ ಸ್ಟಾರ್ ಆಗೋದು ಇಂಪಾರ್ಟೆಂಟ್' ಅಂತ.
ಸಿಂಗಲ್ಲೂ ಅಲ್ಲ, ರಿಲೇಷನ್‌ನಲ್ಲೂ ಇಲ್ಲ! ಮಲೈಕಾ ಅರೋರಾ ಹೊಸ ಪೋಸ್ಟ್‌ಗೆ ಫ್ಯಾನ್ಸ್ ಸುಸ್ತು...
ಆದರೆ ಇದನ್ನು ನೆಟ್ಟಿಗರೇನೂ ಪಾಸಿಟಿವ್ ಆಗಿ ತೆಗೆದುಕೊಂಡಿಲ್ಲ. ಅಮೀರ್ ಖಾನ್‌ಗೆ ಹಿಗ್ಗಾಮಗ್ಗಾ ಝಾಡಿಸುತ್ತಿದ್ದಾರೆ. ‘ಆಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ಹಾಗೂ ಥಗ್ಸ್ ಆಫ್ ಹಿಂದೂಸ್ತಾನ ಸಿನಿಮಾಗಳ ಮೇಲೂ ಎಂಜಲು ಉಗಿಯಬೇಕಿತ್ತು. ಆಗಲಾದರೂ ಸಿನಿಮಾ ಹಿಟ್ ಆಗುತ್ತಿತ್ತೇನೋ’ ಎಂದು ಕೆಲವರು ಕಾಲೆಳೆದಿದ್ದಾರೆ. ‘ಸೆಲೆಬ್ರಿಟಿ ಹಾಗೂ ಶ್ರೀಮಂತರು ಏನೇ ಮಾಡಿದರೂ ಅದು ಫನ್ನಿ ಎಂದು ಅವರೇ ಅಂದುಕೊಳ್ಳಬೇಕು’ ಎಂದಿದ್ದಾರೆ ಅವರು. ‘ಇದೆಂಥಾ ಲಾಜಿಕ್? ಇದು ಪ್ರ್ಯಾಂಕ್ ಎನ್ನಬಹುದೇ? ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಇನ್ನೊಂದಿಷ್ಟು ಮಂದಿ ಅಮೀರ್ ಮೇಲೆ ಕೆಂಡ ಕಾರಿದ್ದಾರೆ.
Aamir Khan spits on heroines hands to make the number 1 . Did it on Juhi too.
byu/bhasadkweeen inBollyBlindsNGossip