ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಹಿಂದೂ ಧರ್ಮದತ್ತ ಆಕರ್ಷಿತರಾಗಿ, ನೀಮ್ ಕರೋಲಿ ಬಾಬಾ ಅವರ ಅನುಯಾಯಿಯಾಗಿದ್ದಾರೆ. 'ಈಟ್ ಪ್ರೇ ಲವ್' ಚಿತ್ರೀಕರಣದ ಸಂದರ್ಭದಲ್ಲಿ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಹೆಚ್ಚಿಸಿಕೊಂಡ ಜೂಲಿಯಾ, ಧ್ಯಾನ ಮತ್ತು ಪ್ರಾರ್ಥನೆಯನ್ನು ನಿಯಮಿತವಾಗಿ ಆಚರಿಸುತ್ತಾರೆ.
ಜೂಲಿಯಾ ರಾಬರ್ಟ್ಸ್ ಎಂಬ ಹೆಸರನ್ನು ನೀವು ಕೇಳಿರಬಹುದು. ʼಈಟ್, ಪ್ರೇ, ಲವ್ʼ ಎಂಬ ಫಿಲಂ ಅನ್ನು ನೋಡಿದರೆ ಖಂಡಿತವಾಗಿಯೂ ಈಕೆಯ ಬಗ್ಗೆ ತಿಳಿದಿರುತ್ತೀರಿ. ಹಿಂದೂ ಧರ್ಮದ ಬಗ್ಗೆ ತಿಳಿದು, ಅದಕ್ಕೆ ಮನಸೋತು, ಇಂದು ಹಿಂದೂ ಧರ್ಮೀಯಳಾಗಿ ಇಲ್ಲಿ ಆಧ್ಯಾತ್ಮಿಕ ಗುರುಗಳ ಶಿಷ್ಯಳಾಗಿ ಸಾಧನೆ ಮಾಡುತ್ತಿರುವ ಈಕೆ ಮಿಲಿಯನ್ ಡಾಲರ್ ಬೆಲೆಬಾಳುವ ಹಾಲಿವುಡ್ ನಟಿ.
ಹಲವಾರು ಹಾಲಿವುಡ್ ಸೆಲೆಬ್ರಿಟಿಗಳು ಭಾರತೀಯ ಯೋಗ ಮತ್ತು ಅಧ್ಯಾತ್ಮದಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದಾರೆ. ಜೂಲಿಯಾ ರಾಬರ್ಟ್ಸ್ ಅದರಲ್ಲಿ ಅತ್ಯಂತ ಗಮನಾರ್ಹರಲ್ಲಿ ಒಬ್ಬರು. ಈಕೆಯ 2010ರ ಚಲನಚಿತ್ರ ಈಟ್, ಪ್ರೇ, ಲವ್‌ನ ಭಾಗಗಳನ್ನು ಭಾರತದಲ್ಲಿ ಚಿತ್ರೀಕರಿಸಲಾಯಿತು. ಜೂಲಿಯಾಳ ಹಿಂದೂ ಧರ್ಮದ ಆಸಕ್ತಿಯು ಈ ಚಲನಚಿತ್ರದೊಂದಿಗೆ ಆಕೆಯ ತೊಡಗಿಸಿಕೊಳ್ಳುವಿಕೆಯನ್ನು ಗಾಢಗೊಳಿಸಿತು.
ಜೂಲಿಯಾ ರಾಬರ್ಟ್ಸ್ ಯೋಗಿ, ಭಾರತೀಯ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಆಧ್ಯಾತ್ಮಿಕತೆಗೆ ಮನಸೋತವಳು. ಅವರ ಬೋಧನೆಗಳಲ್ಲಿ ಸ್ಫೂರ್ತಿಯನ್ನು ಪಡೆದವಳು. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ನೀಮ್ ಕರೋಲಿ ಬಾಬಾ ಅವರ ಆಶ್ರಮಕ್ಕೆ ಹೋಗುತ್ತಿರುತ್ತಾರೆ. ಹಿಂದೂ ಧರ್ಮ ಮತ್ತು ಭಾರತೀಯ ಆಧ್ಯಾತ್ಮಿಕತೆಯೊಂದಿಗೆ ಈಕೆ ಆಳವಾದ ವೈಯಕ್ತಿಕ ಸಂಪರ್ಕ ಹೊಂದಿದ್ದಾಳೆ.
ಜೂಲಿಯಾ ಸಾಮಾನ್ಯವಾಗಿ ತನ್ನ ವೈಯಕ್ತಿಕ ನಂಬಿಕೆಗಳ ಬಗ್ಗೆ ಚರ್ಚಿಸುವುದಿಲ್ಲ. ಆದರೆ ತಾನು ಹಿಂದೂ ಧರ್ಮದ ಪ್ರಾಕ್ಟಿಷನರ್ ಎಂದು ಸಾಂದರ್ಭಿಕವಾಗಿ ಹೇಳಿದ್ದಾಳೆ. ಈಟ್, ಪ್ರೇ, ಲವ್ ಗಾಗಿ ಪ್ರಚಾರದ ಅವಧಿಯಲ್ಲಿ, ಜೂಲಿಯಾ ತಾನು ಹಿಂದೂ ಧರ್ಮದತ್ತ ಹೇಗೆ ಆಕರ್ಷಿತಳಾದೆ ಎಂಬುದನ್ನು ಬಹಿರಂಗಪಡಿಸಿದಳು. ಪೂಜ್ಯ ಹಿಂದೂ ಗುರು ನೀಮ್ ಕರೋಲಿ ಬಾಬಾ ಅವರ ಚಿತ್ರವನ್ನು ನೋಡಿದ ನಂತರ ತಮ್ಮ ಒಳಗೆ ಸಂಚಲನ ಪ್ರಾರಂಭವಾಯಿತು ಎಂದಳು.
“ನೀಮ್ ಕರೋಲಿ ಬಾಬಾ ಎಂಬ ಯೋಗಿಯ ಚಿತ್ರವನ್ನು ನೋಡಿದಾಗ ನನ್ನಲ್ಲಿ ಒಂದು ಕಂಪನ ಮೂಡಿತು. ಈ ವ್ಯಕ್ತಿಯ ಚಿತ್ರಕ್ಕೆ ನಾನು ತುಂಬಾ ಆಕರ್ಷಿತಳಾಗಿದ್ದೆ. ಅವರು ಯಾರೆಂದು ನನಗೆ ತಿಳಿದಿರಲಿಲ್ಲ. ಆದರೆ ಅವರಲ್ಲಿ ನಾನು ತುಂಬಾ ಬಲವಾದ ಆಕರ್ಷಣೆ ಅನುಭವಿಸಿದೆ. ನಾನು ನೀಮ್ ಕರೋಲಿ ಬಾಬಾ ಅವರ ಛಾಯಾಚಿತ್ರವನ್ನು ನೋಡುವ ಮೊದಲೇ ಅವರು ನಿಧನರಾಗಿದ್ದರು. ಆದರೆ ನನಗೆ ಆದ ಆ ಅನುಭವ ಮಹತ್ವದ್ದಾಗಿತ್ತು" ಎಂದು ವಿವರಿಸಿದರು.
ಹೀರೋಯಿನ್ ಕೈಗೆ ಉಗಿದು ಓಡುತ್ತಿದ್ದ ಅಮೀರ್‌ಖಾನ್! ಇದ್ಯಾಕಂತೆ ಗೊತ್ತಾ?
2011ರಲ್ಲಿ ರಾಬರ್ಟ್ಸ್ ತನ್ನ ಹಿಂದೂ ಧರ್ಮದ ಆಚರಣೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಳು. “ನಾನು ಖಂಡಿತವಾಗಿಯೂ ಹಿಂದೂ ಧರ್ಮವನ್ನು ಅನುಸರಿಸುತ್ತೇನೆ. ಈ ಜೀವನದಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಾನು ತುಂಬಾ ಹಾಳಾಗಿದ್ದೇನೆ. ನಾನು ಶಾಂತವಾಗಿರಲು ಬಯಸುತ್ತೇನೆ. ಜಪ ಮಾಡಲು, ಪ್ರಾರ್ಥನೆ ಮಾಡಲು ಮತ್ತು ಧ್ಯಾನ ಆಚರಿಸಲು ನಿಯಮಿತವಾಗಿ ದೇವಸ್ಥಾನಕ್ಕೆ ಹಾಜರಾಗುತ್ತೇನೆ" ಎಂದು ಅವರು ಉಲ್ಲೇಖಿಸಿದ್ದಾರೆ.
ಈಟ್, ಪ್ರೇ, ಲವ್ ಬಗ್ಗೆ ಹೇಳಿದ್ದು ಹೀಗೆ- "ನಾನು ಈ ಚಲನಚಿತ್ರವನ್ನು ದಿಡೀರ್ ಆಗಿ ನಿರ್ಮಿಸಲಿಲ್ಲ. ಮತ್ತು ಹಿಂದೂ ಧರ್ಮವನ್ನು ನಾನು ಅಭ್ಯಾಸ ಮಾಡಲು ಪ್ರಾರಂಭಿಸಿದೆ. ಅದು ಬಹಳ ಸಮಯದವರೆಗೆ ನನ್ನ ಜೀವನದ ಒಂದು ಭಾಗವಾಗಿತ್ತು." ಜೂಲಿಯಾ ರಾಬರ್ಟ್ಸ್ ಆಧ್ಯಾತ್ಮಿಕ ನಂಬಿಕೆ ಅವಳ ಸ್ಟಾರ್ ವೃತ್ತಿಜೀವನವನ್ನು ಮಸುಕು ಮಾಡಲಿಲ್ಲ. ಈಟ್, ಪ್ರೇ, ಲವ್ 2010ರಲ್ಲಿ ಭಾರಿ ಹಿಟ್ ಆಯ್ತು. ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರ ತಾರೆಯರಲ್ಲಿ ಅವರ ಸ್ಥಾನಮಾನವನ್ನು ಗಟ್ಟಿಗೊಳಿಸಿತು. ಅದಕ್ಕೆ ಅಕಾಡೆಮಿ ಪ್ರಶಸ್ತಿ, BAFTA ಮತ್ತು ಮೂರು ಗೋಲ್ಡನ್ ಗ್ಲೋಬ್‌ಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಳು.
ಮಾಜಿ ಪತಿ ಎ.ಆರ್. ರೆಹಮಾನ್ ಕುರಿತು ಮೌನ ಮುರಿದ ಸಾಯಿರಾ: ದನಿ ಸಂದೇಶದಲ್ಲಿ ಹೇಳಿದ್ದೇನು?