ಮಾಜಿ ಪತಿ ಎ.ಆರ್. ರೆಹಮಾನ್‌ ಕುರಿತು ಮೌನ ಮುರಿದ ಸಾಯಿರಾ: ದನಿ ಸಂದೇಶದಲ್ಲಿ ಹೇಳಿದ್ದೇನು?

By Suchethana D  |  First Published Nov 25, 2024, 6:43 PM IST

ಮಾಜಿ ಪತಿ ಎ.ಆರ್‍‌.ರೆಹಮಾನ್‌ ಕುರಿತು ಮೌನ ಮುರಿದ ಸಾಯಿರಾ: ದನಿ ಸಂದೇಶದಲ್ಲಿ ಜನರಿಗೆ ಅವರು ಹೇಳಿದ್ದೇನು?
 


ಸಂಗೀತ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್‌ ರೆಹಮಾನ್ ಹಾಗೂ ಅವರ ಪತ್ನಿ ಸಾಯಿರಾ ಬಾನು ದೂರವಾಗಿದ್ದಾರೆ. 29 ವರ್ಷಗಳ ದಾಂಪತ್ಯ ಮುರಿದುಬಿದ್ದಿರುವ ಬಗ್ಗೆ ಸ್ವತಃ ಸಾಯಿರಾ ಬಾನು ತಮ್ಮ ವಕೀಲರ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ಇದರ ನಡುವೆ ಎಆರ್‌ ರೆಹಮಾನ್‌ ಕೂಡ 29 ವರ್ಷದ ದಾಂಪತ್ಯ ಬ್ರೇಕ್‌ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ವಿಚ್ಛೇದನದ ಸುದ್ದಿ ಹರಡುತ್ತಿದ್ದಂತೆಯೇ,   ಈ ಜೋಡಿ,  ತಮ್ಮ ಖಾಸಗಿ ಜೀವನವನ್ನು ಗೌರವಿಸುವಂತೆ ಅಭಿಮಾನಿಗಳಿಗೆ ವಿನಂತಿಸಿತ್ತು.  ಕುತೂಹಲದ ತಿರುವಿನಲ್ಲಿ, ಅದೇ ದಿನ ರೆಹಮಾನ್‌ ಅವರ ಬ್ಯಾಂಡ್‌ನಲ್ಲಿ ಬಾಸ್ ಪ್ಲೇಯರ್ ಮೋಹಿನಿ ಡೇ ಅವರು ತಮ್ಮ ಪತಿಯಿಂದ ವಿಚ್ಛೇದನವನ್ನು ಘೋಷಿಸಿದರು. ಹಾಗಾಗಿ, ರೆಹಮಾನ್ ವಿಚ್ಛೇದನದ ಜೊತೆ  ಮೋಹಿನಿ ವಿಚ್ಛೇದನವನ್ನೂ ಲಿಂಕ್ ಮಾಡಿ ಸುದ್ದಿಗಳು ಓಡಾಡುತ್ತಲೇ ಇವೆ. ಈ ಬಗ್ಗೆ ಈ ಜೋಡಿ ಈಗ ಖಡಕ್ ವಾರ್ನಿಂಗ್‌ ಕೂಡ ನೀಡಿದ್ದಾರೆ. 

ಇದರ ನಡುವೆಯೇ,  ಸಾಯಿರಾ ಬಾನು ಅವರು ಈಗ ವಾಯ್ಸ್‌ ಮೆಸೇಜ್‌ ಮೂಲಕ ತಮ್ಮ ಮಾಜಿ ಪತಿಯ ಗುಣಗಾನ ಮಾಡಿದ್ದು, ಸುಖಾಸುಮ್ಮನೆ ವದಂತಿ ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅನಾರೋಗ್ಯದ ನಿಮಿತ್ತ  ಮುಂಬೈನಲ್ಲಿ ಇರುವ ಅವರು, ಈ ಬಗ್ಗೆಯೂ ಹೇಳಿಕೊಂಡಿದ್ದಾರೆ.  ಚಿಕಿತ್ಸೆಗಾಗಿ ಮುಂಬೈನಲ್ಲಿಯೇ ಉಳಿದುಕೊಂಡಿರುವುದಾಗಿ ತಿಳಿಸಿದ ಸಾಯಿರಾ, ಎ.ಆರ್.ರೆಹಮಾನ್‌ ಅವರನ್ನು ಕೊಂಡಾಡಿದ್ದಾರೆ.  ರೆಹಮಾನ್ ಒಬ್ಬ ವ್ಯಕ್ತಿಯಾಗಿ ವಜ್ರ ಇದ್ದಂತೆ ಎಂದಿದ್ದಾರೆ. 

Tap to resize

Latest Videos

ಮೋದಿಯೊಟ್ಟಿಗೆ ರಾಮಾಯಣದ ಸೀತೆ, ಥ್ರೋ ಬ್ಯಾಕ್ ಇಮೇಜ್ ಶೇರ್ ಮಾಡಿಕೊಂಡ ದೀಪಿಕಾ

ಅವರು ಈ ಜಗತ್ತಿನಲ್ಲಿ ಅತ್ಯುತ್ತಮ ವ್ಯಕ್ತಿ. ನನ್ನ ಆರೋಗ್ಯ ಸಮಸ್ಯೆಯಿಂದಾಗಿ ನಾನು ಚೆನ್ನೈ ಬಿಟ್ಟು ಹೋಗಬೇಕಾಯಿತು. ದಯವಿಟ್ಟು ಅವರ ವಿರುದ್ಧ ಕೆಟ್ಟದ್ದನ್ನು ಹೇಳಿ ಮನಸ್ಸನ್ನು ನೋಯಿಡಬೇಡಿ. ನಾನು ಎಲ್ಲಾ ಸೋಷಿಯಲ್ ಮೀಡಿಯಾದವರನ್ನು , ಯೂಟ್ಯೂಬರ್‍‌ಗಳು ಮತ್ತು ತಮಿಳು ಮಾಧ್ಯಮಗಳಲ್ಲಿ ವಿನಂತಿಸುತ್ತೇನೆ. ನನ್ನ ಜೀವನದಲ್ಲಿ ನಾನು ಅತಿ ಹೆಚ್ಚು ನಂಬಿದ ವ್ಯಕ್ತಿ ಅವರು. ಈಗಲೂ ಅವರನ್ನು  ತುಂಬಾ ಪ್ರೀತಿಸುತ್ತೇನೆ, ಅವು ಕೂಡ. ಹಾಗಾಗಿ  ಸುಳ್ಳು ಆರೋಪ ಮಾಡಬೇಡಿ ಎಂದು ಹೇಳಿದ್ದಾರೆ.
 
ನಾನು ಮುಂಬೈನಲ್ಲಿಇದ್ದು, ಚಿಕಿತ್ಸೆ ಮುಗಿಸಿ ಚೆನ್ನೈಗೆ ಮರಳುವವರೆಗೂ ಸ್ವಲ್ಪ ಕಾಯಿರಿ. ಸದ್ಯ ಇನ್ನೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಅವರ ಹೆಸರನ್ನು ಹಾಳು ಮಾಡಬೇಡಿ. ಹೀಗೆ ಮಾಡುವ ವರ್ತನೆ ಸರಿಯಲ್ಲ. ಇದೆಲ್ಲ ತುಂಬಾ ಮೂರ್ಖತನ ಎನ್ನಿಸುತ್ತದೆ ಎಂದಿದ್ದಾರೆ. ಅಂದಹಾಗೆ ಈ ಜೋಡಿ,  ವಕೀಲ ವಂದನಾ ಶಾ ಮೂಲಕ ವಿಚ್ಛೇದನವನ್ನು ಘೋಷಿಸಿದ್ದರು. ಈ ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ  ಸಾಯಿರಾ ಬಾನು ಅವರ ವಕೀಲರಾಗಿರುವ ವಂದನಾ ಶಾ ಅವರು ತಮ್ಮ ಕಕ್ಷಿದಾರರಾದ ಸಾಯಿರಾ ಬಾನು ಅವರ ವಾಯ್ಸ್ ನೋಟ್ ರೂಪದಲ್ಲಿ ಮಾಧ್ಯಮ ಟಿಪ್ಪಣಿಯನ್ನು ಬಿಡುಗಡೆ ಮಾಡಿದ್ದಾರೆ.

ಸಿಂಗಲ್ಲೂ ಅಲ್ಲ, ರಿಲೇಷನ್‌ನಲ್ಲೂ ಇಲ್ಲ! ಮಲೈಕಾ ಅರೋರಾ ಹೊಸ ಪೋಸ್ಟ್‌ಗೆ ಫ್ಯಾನ್ಸ್‌ ಸುಸ್ತು...

click me!