ಹಾರ್ದಿಕ್ ಪಾಂಡ್ಯ ಪತ್ನಿಯ ಹಾಟ್ ಪೋಸ್; ಗೋಲ್ಡನ್ ಶೈನ್‌ ನತಾಶಾ ಹೊಸ ಫೋಟೋ ವೈರಲ್

First Published Mar 4, 2023, 12:39 PM IST

ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡೆ ಪತ್ನಿ ನತಾಶಾ ಸ್ಟಾಂಕೋವಿಕ್‌ ಹಾಟ್ ಫೋಟೋಶೂಟ್ ವೈರಲ್ ಆಗಿದೆ. 

ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡೆ ಮತ್ತು ನತಾಶಾ ಸ್ಟಾಂಕೋವಿಕ್‌ ಇತ್ತೀಚಿಗಷ್ಟೆ ಅದ್ದೂರಿಯಾಗಿ ಮದುವೆಯಾಗಿದ್ದರು. ಇಬ್ಬರೂ 2ನೇ ಬಾರಿ ಮದುವೆಯಾಗಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಮದುವೆಯಾದ ಬೆನ್ನಲ್ಲೇ  ನತಾಶಾ ಸ್ಟಾಂಕೋವಿಕ್‌ ಮತ್ತಷ್ಟು ಹಾಟ್ ಆಗಿದ್ದಾರೆ. ಇದೀಗ ನತಾಶಾ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋಲ್ಡ್ ಶೈನ್ ಮ್ಯಾಕ್ಸಿ ಧರಿಸಿರುವ ನತಾಶಾ ಮಸ್ತ್ ಪೋಸ್ ನೀಡಿದ್ದಾರೆ. 

Latest Videos


ನತಾಶಾ ತರಹೇವಾರಿ ಪೋಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಭಿಮಾನಿಗಳು ಲೈಕ್ಸ್ ಒತ್ತಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ಇನ್ನುಕೆಲವರು ಓವರ್ ಆಯ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಟ್ರೋಲ್ ಮಾಡಿ ನತಾಶಾ ಕಾಲೆಳೆಯುತ್ತಿದ್ದಾರೆ. 

ನತಾಶಾ ಮಾಡೆಲ್ ಆಗಿ ಖ್ಯಾತಿಗಳಿಸಿದ್ದರು. ಬಳಿಕ ಕೆಲವು ಸಿನಿಮಾಗಳಲ್ಲೂ ಮಿಂಚಿದ್ದರು. ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಕೆಲವೇ ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಜೊತೆ ಪ್ರೀತಿಯಲ್ಲಿ ಬಿದ್ದರು. ಇಬ್ಬರೂ ಲಾಕ್ ಡೌನ್ ಸಮಯದಲ್ಲಿ ಸರಳವಾಗಿ ವಿವಾಹವಾದರು. ಈ ಜೋಡಿ ಒಬ್ಬ ಮಗನಿದ್ದಾನೆ. 

ಈ ವರ್ಷ 2023ರಲ್ಲಿ ಇಬ್ಬರೂ ಅದ್ದೂರಿಯಾಗಿ ಮದುವೆಯಾದರು. ಹಾರ್ದಿಕ್ ಮತ್ತು ನತಾಶಾ ಜೋಡಿ ಎರಡು ಸಾಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ಪಾಶ್ಚಿಮಾತ್ಯ ಶೈಲಿಯಲ್ಲಿ ಒಮ್ಮೆ ಮದುವೆಯಾದರೆ ಮತ್ತೊಮ್ಮೆ ಹಿಂದೂ ಸಾಂಪ್ರದಾಯದ ಪ್ರಕಾರ ಸಪ್ತಪದಿ ತುಳಿದರು. 

ಹಾರ್ದಿಕ್ ಮತ್ತು ನತಾಶಾ ಮದುವೆಯಲ್ಲಿ ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದರು. ಮೂರು ವರ್ಷಗಳ ಹಿಂದೆ ನತಾಶಾ ಸ್ಟಾಂಕೋವಿಕ್‌ರನ್ನು ಹಾರ್ದಿಕ್‌ ಪಾಂಡ್ಯ ರಿಜಿಸ್ಟರ್‌ ಮದುವೆ ಆಗಿದ್ದರು.
 

ಮೂರು ವರ್ಷದ ಹಿಂದೆ ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್‌ ನಿಶ್ಚಿತಾರ್ಥ ಮಾಡಿಕೊಂಡ 6 ತಿಂಗಳಿಗೆ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ಅಗಸ್ತ್ಯ ಎಂದು ಹೆಸರಿಟ್ಟಿದ್ದಾರೆ. 

click me!