71.01 ಲಕ್ಷ ಕೋಟಿಯ ಕೃಷಿ ವಿಕಾಸ ಯೋಜನೆ, ಕೃಷೋನ್ನತಿ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಆ ಮೂಲಕ ರೈತರ ಆದಾಯ ಹೆಚ್ಚಳ ಹಾಗೂ ಆಹಾರ ಭದ್ರತೆಗೆ ಎರಡು ಸ್ಕೀಂ ರೂಪಿಸಿದೆ.
ನವದೆಹಲಿ (ಅ.4): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಗುರುವಾರ ರೈತರ ಆದಾಯವನ್ನು ಸುಧಾರಿಸುವುದು ಮತ್ತು ಮಧ್ಯಮ ವರ್ಗದವರಿಗೆ ಆಹಾರ ಭದ್ರತೆಯನ್ನು ಕಾಪಾಡುವುದುಸೇರಿದಂತೆಹಲವುಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. 'ಪ್ರಧಾನಮಂತ್ರಿ ರಾಷ್ಟ್ರೀಯಕೃಷಿವಿಕಾಸ್ ಯೋಜನೆ' ಮತ್ತು 'ಕೃಷೋನ್ನತಿ ಯೋಜನೆ ಗಳ ಅನುಷ್ಠಾನಕ್ಕೆ ಅದುನಿರ್ಧರಿಸಿದ್ದು, ರೈತರ ಆದಾಯ ಹೆಚ್ಚಳ ಮತ್ತು ಆಹಾರ ಭದ್ರತೆಗೆ 1,01,321 ಕೋಟಿ ರು.ಗಳ ಬಜೆಟ್ ಅನ್ನು ನಿಗದಿಪಡಿಸಿದೆ. ಈ ಉಪಕ್ರಮಗಳು ಕೃಷಿ ಉತ್ಪಾದಕತೆ, ಸಾವಯವ ಕೃಷಿ, ಮಣ್ಣಿನ ಆರೋಗ್ಯ ಮತ್ತು ಸುಧಾರಿತ ಕೃಷಿ ತಂತ್ರಗಳನ್ನು ಒತ್ತಿ ಹೇಳುತ್ತವೆ. ಇದರಿಂದ ಆಹಾರ ಉತ್ಪಾದನೆ ಹೆಚ್ಚಳ ಆಗಿ ಜನರಿಗೆ ಆಹಾರ ಭದ್ರತೆ ಸಿಗುತ್ತದೆ ಎಂದು ಸರ್ಕಾರ ಹೇಳಿದೆ. ಪಿಎಂ ಕೃಷಿ ವಿಕಾಸ ಯೋಜನೆ: ಇದರ ಅಡಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ, ಮಳೆಯಾಧಾರಿತ ಪ್ರದೇಶ ಅಭಿವೃದ್ಧಿ ಮತ್ತು ಕೃಷಿ ಯಾಂತ್ರೀಕರಣದಂತಹ ವಿವಿಧ ಕ್ರಮಗಳ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿದೆ. ಸಾವಯವ ಕೃಷಿ ಹಾಗೂ ತಂತ್ರಜ್ಞಾನ ಅಧರಿತ ಕೃಷಿಗೆ ಆದ್ಯತೆ ನೀಡಿರೈತರಆದಾಯ ಹೆಚ್ಚಳಕ್ಕೆ ಕ್ರಮ ಜರುಗಿಸಲಾಗುತ್ತದೆ.
ಖಾದ್ಯತೈಲದಲ್ಲಿ ಸ್ವಾವಲಂಬನೆ: ಖಾದ್ಯತೈಲ ವಲಯದಲ್ಲಿ ಸ್ವಾಲವಂಬನೆ ಸಾಧಿಸಲು ಖಾದ್ಯತೈಲ ರಾಷ್ಟ್ರೀಯ ಮಿಷನ್‌ಗೆ ಅನುಮೋದನೆ ನೀಡಲಾಗಿದೆ. 7 ವರ್ಷದ ಅವಧಿಯಲ್ಲಿ 10,103 ಕೋಟಿ ರೂಪಾಯಿ ನೀಡಲಾಗುತ್ತದೆ. 2022-23ರಲ್ಲಿ ಖಾದ್ಯತೈಲ ಉತ್ಪಾದನೆ 39 ದಶಲಕ್ಷ ಟನ್ ಇತ್ತು. ಅದನ್ನು ಈಗ 69 ಲಕ್ಷ ಟನ್‌ಗೆ ಏರಿಸುವ ಗುರಿ ಹೊಂದಲಾಗಿದೆ.
ಕೃಷೋನ್ನತಿ ಯೋಜನೆ: ಕೃಷ್ಣನ್ನತಿ ಯೋಜನೆಯು ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೋಷಣೆ ಮಿಷನ್, ತೋಟಗಾರಿಕೆಗೆ ಆದ್ಯತೆ ನೀಡುತ್ತದೆ. ಇದರಿಂದ ಕೃಷಿ ಉತ್ಪನ್ನ ಹೆಚ್ಚಳ ಮೂಲಕ ಆಹಾರ ಭದ್ರತೆಗೆ ಆದ್ಯತೆ ನೀಡುತ್ತದೆ.
ಇನ್ನೂ 5 ಭಾಷೆಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನ: ಭಾರತದ ಇನ್ನೂ 5 ಭಾಷೆಗಳಿಗೆ ಶಾಸ್ತ್ರೀಯ ಭಾಷೆಗಳ ಸ್ಥಾನಮಾನನೀಡಲುಕೇಂದ್ರ ಸಚಿವಸಂಪುಟಗುರುವಾರಅನುಮೋದಿಸಿದೆ. ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳು ಹೊಸದಾಗಿ ಸೇರ್ಪಡೆಯಾಗಿದ್ದು, ಈ ಮೂಲಕ ಒಟ್ಟು ಶಾಸ್ತ್ರೀಯ ಭಾಷೆಗಳ ಸಂಖ್ಯೆ 11ಕ್ಕೆ ಎರಿಕೆಯಾಗಿದೆ. ಈ ಮೊದಲು ತಮಿಳು, ಸಂಸ್ಕೃತ (2005), ತೆಲುಗು (2008), ಕನ್ನಡ (2008), ಮಲಯಾಳಂ (2013) ಮತ್ತು ಒಡಿಯಾ (2014) ಶಾಸ್ತ್ರೀಯ ಭಾಷೆಗಳಾಗಿದ್ದವು.
ಚಂದ್ರಯಾನ-4ಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್, 2040ರ ವೇಳೆಗ ಚಂದ್ರನ ಮೇಲೆ ಭಾರತೀಯ ಲ್ಯಾಂಡ್!
ಈಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿನರೇಂದ್ರಮೋದಿ, 'ಸ್ಥಳೀಯ ಭಾಷೆಗಳ ಅಭಿವೃದ್ಧಿ ಹಾಗೂ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಹೊಂದಿರುವ ಬದ್ಧತೆಯ ಸಂಕೇತ ಇದು' ಎಂದು ಹೇಳಿದ್ದಾರೆ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ರಾಜಕಾರಣಿಗಳೂ ಹರ್ಷಿಸಿದ್ದಾರೆ.
Greater Bengaluru ಬೆಂಗಳೂರು ವಿಭಜಿಸುವ ವಿಧೇಯಕಕ್ಕೆ ಸಂಪುಟ ಅನುಮೋದನೆ
ರೈಲ್ವೆ ನೌಕರರಿಗೆ ಬೋನಸ್: ನಾನ್ ಗೆಜೆಟೆಟ್ ರೈಲ್ವೆ ನೌಕರರಿಗೆ ದಸರಾ ಹಬ್ಬದ ಕೊಡುಗೆಯನ್ನು ಕೇಂದ್ರ ನೀಡಿದ್ದು, 78 ದಿನಗಳ ಉತ್ಪಾದನಾ ಆಧರಿತ ಬೋನಸ್ ನೀಡಲು ತೀರ್ಮಾನಿಸಿದೆ. ಇದರಂದ 11.72 ಲಕ್ಷ ರೈಲ್ವೆ ನೌಕರರಿಗೆ ಅನುಕೂಲ ಆಗಲಿದೆ ಹಾಗೂ ಸರ್ಕಾರವು ಇದಕ್ಕಾಗಿ 2028 ಕೋಟಿ ರು. ವೆಚ್ಚ ಮಾಡಲಿದೆ. ಚಾಲಕರು, ಗಾರ್ಡ್, ಹಳಿನಿರ್ವಾಹಕರು,ಸೂಪರ್‌ವೈಸರ್, ತಂತ್ರಜ್ಞರುಹೀಗೆ ಮಧ್ಯಮ ಹಾಗೂ ಕೆಳಸ್ತರದ ನೌಕರಿಗೆ ಇದರ ಲಾಭ ದೊರಕಲಿದೆ.