ಇಷ್ಟದ ನಾಟಿ ಕೋಳಿ, ಮೀನು ಸಾರಿದ್ದರೆ ಮೆಗಾಸ್ಟಾರ್ ಚಿರು ಯಾವ ಡಯೆಟ್ ಫಾಲೋ ಮಾಡಲ್ಲ!

Published : Oct 03, 2024, 04:56 PM ISTUpdated : Oct 03, 2024, 05:06 PM IST
ಇಷ್ಟದ ನಾಟಿ ಕೋಳಿ, ಮೀನು ಸಾರಿದ್ದರೆ ಮೆಗಾಸ್ಟಾರ್ ಚಿರು ಯಾವ ಡಯೆಟ್ ಫಾಲೋ ಮಾಡಲ್ಲ!

ಸಾರಾಂಶ

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ಫುಡ್ ಡಯಟ್ ಕೂಡ ಫಾಲೋ ಮಾಡುತ್ತಾರೆ. ಆದರೆ ಚಿರಂಜೀವಿಗೆ ನಾಟಿ ಕೋಳಿ ಹಾಗೂ ಮೀನು ಸಾರು ಅಂದರೆ ಪಂಚಪ್ರಾಣ. ಇವೆರಡು ಇದ್ದರೆ ಯಾವ ಡಯೆಟ್ ಕೂಡ ಫಾಲೋ ಮಾಡಲ್ಲ. 

ಹೈದರಾಬಾದ್(ಅ.03) ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅತ್ಯಂತ ಜನಪ್ರಿಯ ನಟ. ತಮ್ಮ ನಟನೆ, ಡ್ಯಾನ್ಸ್ ಹಾಗೂ ವ್ಯಕ್ತಿತ್ವದ ಮೂಲಕ ಚಿರಂಜೀವಿ ಅಪಾರ ಅಭಿಮಾನಿ ಬಳಗವನ್ನೇ ಗಳಿಸಿದ್ದಾರೆ. ಇದೀಗ ಚಿರಂಜೀವಿ ಹುಟ್ಟು ಹಬ್ಬ ಸಮೀಪಿಸುತ್ತಿದೆ. 70ರ ವಸಂತಕ್ಕೆ ಕಾಲಿಡಲು ಸಜ್ಜಾಗಿರುವ ಚಿರಂಜೀವಿ ಈಗಲೂ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಯುವಕರನ್ನು ನಾಚಿಸುವಂತೆ ಡ್ಯಾನ್ಸ್ ಮಾಡುತ್ತಾರೆ. ಆರೋಗ್ಯದಲ್ಲೂ ಫಿಟ್ ಅಂಡ್ ಫೈನ್ ಆಗಿದ್ದಾರೆ. ಇದಕ್ಕಾಗಿ ಡಯೆಟ್ ಫುಡ್ ಫಾಲೋ ಮಾಡುತ್ತಾರೆ. ಆದರೆ ಚಿರಂಜೀವಿ ಮುಂದೆ ನಾಟಿ ಕೊಳಿ, ಮೀನು ಸಾರು ಇದ್ದರೆ ಯಾವ ಡಯೆಟ್ ಕೂಡ ಫಾಲೋ ಮಾಡಲ್ಲ. ಇವೆರಡು ಚಿರಂಜೀವಿ ಪಂಚಪ್ರಾಣ.

ಮೆಗಾಸ್ಟಾರ್ ಕುರಿತು ಹಲವು ಮಾಹಿತಿಗಳು ಬಹುತೇಕರಿಗೆ ತಿಳಿದಿದೆ. ಆದರೆ ಅವರ ಇಷ್ಟದ ಆಹಾರದ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಇದೀಗ ಚಿರು ನೆಚ್ಚಿನ ಫುಡ್ ಕುರಿತು ನೀಡಿದ ಹೇಳಿಕೆ ಬಾರಿ ಸದ್ದು ಮಾಡುತ್ತಿದೆ. ಚಿರಂಜೀವಿ ಆರೋಗ್ಯ ಕಾಪಾಡಿಕೊಳ್ಳಲು, ಫಿಟ್ ಆಗಿರಲು ನಿಯಮಿತಿ ಆಹಾರ ಸೇವಿಸುತ್ತಾರೆ. ಆಹಾರ ಪದ್ಧತಿಯಲ್ಲಿ ಶಿಸ್ತು ಕಾಪಾಡಿಕೊಂಡಿದ್ದಾರೆ. ಆದರೆ ನಾಟಿ ಕೋಳಿ ಮೀನು ಸಾರಿದ್ದರೆ ಚಿರಂಜೀವಿ ಡಯೆಟ್ ಕಡೆ ಹೆಚ್ಚು ಗಮನ ನೀಡಲ್ಲ. ತಮ್ಮ ಇಷ್ಟದ ಫುಡ್ ಕುರಿತು ಖುದ್ದು ಚಿರಂಜೀವಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಈ ಗುಣದಿಂದಲೇ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ಟಾಪ್ ಹೀರೋಗಳಾಗಿ ಬೆಳೆದಿದ್ದು!

ಸಿನಿಮಾ ಕಾರ್ಯಕ್ರಮದಲ್ಲಿ ನಿರೂಪಕಿ ಸುಮಾ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಚಿರಂಜೀವಿ ಈ ವಯಸ್ಸಿನಲ್ಲೂ ಫಿಟ್ ಆಗಿದ್ದಾರೆ.ಯುವಕರನ್ನು ನಾಚಿಸುವಂತೆ ಡ್ಯಾನ್ಸ್ ಮಾಡುತ್ತಾರೆ. ಹೀಗಾಗಿ ಅಭಿಮಾನಿಗಳ ಈ ಪ್ರಶ್ನೆಯನ್ನು ಕಳುಹಿಸಿದ್ದಾರೆ. ನಿಮ್ಮ ನೆಚ್ಚಿನ ಆಹಾರ ಯಾವುದು ಎಂದು ಪ್ರಶ್ನಿಸಿಸಿದ್ದಾರೆ. ಈ ಪ್ರಶ್ನೆ ಕೇಳುತ್ತಿದ್ದಂತೆ ಸೆಲೆಬ್ರೆಟಿಗಳು ಚಪ್ಪಾಳೆ ಮೂಲಕ ಉತ್ತರಿಸಲೇಬೇಕು ಎಂದು ಸೂಚಿಸಿದ್ದಾರೆ. ಚಿರು ನೆಚ್ಚಿನ ಫುಡ್ ಕುರಿತು ಚಿರಂಜೀವಿ ಅತೀ ದೊಡ್ಡ ಅಭಿಮಾನಿ ನಿರ್ದೇಶಕ ರಾಜಮೌಳಿ ಈ ಪ್ರಶ್ನೆ ಕೇಳಲು ಸೂಚಿಸಿದ್ದಾರೆ ಎಂದು ನಿರೂಪಕಿ ಚಿರಂಜೀವಿ ಮುಂದೆ ಹೇಳಿದ್ದಾರೆ.

ಉತ್ತರಿಸಲು ಹಿಂದೇಟು ಹಾಕಿದ ಚಿರಂಜೀವಿಗೆ ನಿರೂಪಕಿ, ನಿಮ್ಮ ಹಲವು ಇಷ್ಟದ ಆಹಾರ ಕುರಿತು ನಿರ್ದೇಶಕರು, ನಟರು ತಿಳಿಸಿದ್ದಾರೆ. ಈ ಪೈಕಿ ನಾಟಿ ಕೊಳಿ, ಮೀನು ಸಾರು ಇದು ಇಷ್ಟದ ಆಹಾರವೇ? ಇದರಲ್ಲಿ ಯಾವುದು ತುಂಬಾ ಇಷ್ಟ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಚಿರಂಜೀವಿ, ನಾಟಿ ಕೋಳಿ, ಮೀನು ಸಾರು ಎರಡೂ ಪಂಚಪ್ರಾಣ ಎಂದಿದ್ದಾರೆ. ಇವರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದರೆ ಯಾವುದು ಎಂದಾಗ ನಾಟಿ ಕೊಳಿ ಎಂದಿದ್ದಾರೆ. 

ಚಿರಂಜೀವಿ ಕೆಲ ವೇದಿಕೆಗಳಲ್ಲಿ ಅಂಜನಾದೇವಿ ಮಾಡುವ ಮೀನು ಸಾರು ಹೆಚ್ಚು ಇಷ್ಟ, ಕೆಲವು ಬಾರಿ ಮೀನು ಫ್ರೈ ಮಾಡಲು ಅಮ್ಮನಿಗೆ ಸಹಾಯ ಮಾಡಿದ್ದೇನೆ. ಮೀನು ಫ್ರೈ ಮಾಡಿ ತಿಂದಿದ್ದೇನೆ ಎಂದಿದ್ದಾರೆ. 

ಮುಂದಿನ ವರ್ಷದ ಆರಂಭದಲ್ಲಿ ಚಿರಂಜೀವಿ 70ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಚಿರಂಜೀವಿ ಎಂದರೆ ಅಭಿಮಾನಿಗಳಲ್ಲಿರುವ ಕ್ರೇಜ್ ಹಾಗೇ ಇದೆ. ಈಗಲೂ ಸಿನಿಮಾದಲ್ಲಿ ಬ್ಯೂಸಿಯಾಗಿರುವ ಚಿರಂಜೀವಿ ಸ್ಟಂಟ್, ಡ್ಯಾನ್ಸ್ ಎಲ್ಲವನ್ನೂ ಮಾಡುತ್ತಾ ಯುವಕರಂತೆ ನಟಿಸುತ್ತಿದ್ದಾರೆ. ಹೊಸ ಪ್ರಯೋಗ, ಹೊಸ ಪಾತ್ರ, ಭಿನ್ನ ಪಾತ್ರಗಳ ಮೂಲಕ ಚಿರಂಜೀವಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 
 

ಗಿನ್ನಿಸ್ ಬುಕ್‌ನಲ್ಲಿ ದಾಖಲೆ 

ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಪಡೆದ ಚಿರುಗೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕೂಡ ಸಂದಿದೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಚಿರುಗೆ ಪ್ರಶಸ್ತಿ ಪ್ರದಾನ ಮಾಡಿದರು. 156ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಚಿರು ಮಾಡಿರೋ ಡ್ಯಾನ್ಸ್, ಅದ್ರಲ್ಲೂ ಅವರು ತಂದಿರೋ ಹೊಸ ಶೈಲಿಗೆ ಈ ಪ್ರಶಸ್ತಿ ಸಂದಿದೆ.  45 ವರ್ಷಗಳ ಸಿನಿ ಜೀವನದಲ್ಲಿ 156 ಸಿನಿಮಾಗಳಲ್ಲಿ ನಟಿಸಿರೋ ಚಿರು, 537 ಹಾಡುಗಳಿಗೆ 24 ಸಾವಿರಕ್ಕೂ ಹೆಚ್ಚು ಡ್ಯಾನ್ಸ್ ಮೂಮೆಂಟ್ಸ್ ಮಾಡಿದ್ದಕ್ಕೆ ಈ ಪ್ರಶಸ್ತಿ ಸಂದಿದೆ. ಟಾಲಿವುಡ್‌ನಲ್ಲಿ ಡ್ಯಾನ್ಸ್ ಅಂದ್ರೆ ಚಿರು, ಚಿರು ಅಂದ್ರೆ ಡ್ಯಾನ್ಸ್ ಅನ್ನೋ ಹಾಗೆ ಮಾಡಿದ್ದಾರೆ. 

ಡ್ಯಾನ್ಸ್ ಮಾಸ್ಟರ್ ಇಲ್ಲದಾಗ ತಾನೇ ನೃತ್ಯ ಸಂಯೋಜನೆ ಮಾಡಿದ್ದ ಮೆಗಾಸ್ಟಾರ್ ಚಿರಂಜೀವಿ! ಕನ್ನಡದಲ್ಲಿ ಯಾರು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಉಸಿರು ಬಿಗಿದಿಟ್ಟುಕೊಂಡು ನೋಡುವಂತಹ Serial Killer ಚಿತ್ರಗಳು Don't Miss It