
ನಟ ಸಲ್ಮಾನ್ ಖಾನ್ ಸಹೋದರ, ನಟಿ ಮಲೈಕಾ ಶರಾವತ್ ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್ ಇನ್ ಪಾರ್ಟನರ್ ಅರ್ಬಾಜ್ ಖಾನ್ ಶುರಾ ಖಾನ್ ಎನ್ನುವವರನ್ನು ಕಳೆದ ಡಿಸೆಂಬರ್ನಲ್ಲಿ ಮದುವೆಯಾಗಿದ್ದು, ಲೈಫ್ ಎಂಜಾಯ್ ಮಾಡುತ್ತಿದ್ದಾರೆ. 56 ವರ್ಷದ ಅರ್ಬಾಜ್ ಖಾನ್, ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್ ಅವರ ಕೈಹಿಡಿದಿದ್ದಾರೆ. ಶುರಾ ಖಾನ್ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಶುರಾ ಖಾನ್ ಮತ್ತು ಅರ್ಬಾಜ್ ಖಾನ್ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ. ಶುರಾ ಖಾನ್ ಅವರು, ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.
ಇವರ ಮದುವೆಯಾಗಿ ವರ್ಷ ಆಗ್ತಾ ಬಂದರೂ ಇಂದಿಗೂ ವಯಸ್ಸಿನ ಅಂತರದ ಕಾರಣದಿಂದ ಟ್ರೋಲ್ ಎದುರಿಸುತ್ತಲೇ ಇದ್ದಾರೆ. ಇವರ ವಯಸ್ಸಿನ ಅಂತರ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್ ಟ್ರೋಲ್ ಕೂಡ ಆಗುತ್ತಿದೆ. ಮದುವೆ ಮನೆಗೆ ಬರುವಾಗಿನಿಂದಲೂ ಹಲವು ವಿಡಿಯೋಗಳಲ್ಲಿ ಶುರಾ ಖಾನ್ ಪಾಪರಾಜಿಗಳ ಕ್ಯಾಮೆರಾ ಎದುರು ನೇರವಾಗಿ ಮುಖಕೊಡದೇ ಮುಖ ಮುಚ್ಚಿಕೊಳ್ಳುತ್ತಲೇ ಇರುತ್ತಾರೆ. ಟ್ರೋಲ್ ಆಗುವುದನ್ನು ತಪ್ಪಿಸಲು ಅವರು ಹಾಗೆ ಮಾಡುತ್ತಾರೆ ಎನ್ನುವ ಮಾತಿದೆ. ಮದುವೆಯಾದ ಮೇಲೆ ಹನಿಮೂನ್ಗೆ ಹೋದಾಗ ಏರ್ಪೋರ್ಟ್ನಲ್ಲಿ ಜೋಡಿ ಕಾಣಿಸಿಕೊಂಡಾಗಲೂ ಶುರಾ ಅವರು, ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬೀಳದಂತೆ ಮುಖ ಮುಚ್ಚಿಕೊಂಡಿದ್ದರು. ಮುಖ ಕಾಣಿಸದಂತೆ ಮಾಡಲು ಕ್ಯಾಪ್ ಧರಿಸಿ ಬಂದಿದ್ದರು. ಆದರೆ ಇದೀಗ ಮೊದಲ ಬಾರಿಗೆ ಶುರಾ ಖಾನ್ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ. ಕ್ಯಾಮೆರಾ ನೋಡುತ್ತಲೇ ನೋ ನೋ ನೋ ಎನ್ನುತ್ತಾ ಅತ್ತ ಕಡೆ ಮುಖ ಹಾಕಿಕೊಂಡಿದ್ದಾರೆ. ಶುರಾ ಮತ್ತು ನಟಿ ರಿಧಿಮಾ ಪಂಡಿತ್ ಅವರು ಸಿನಿಮಾ ಒಂದರ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಾಗ ಹೀಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಇದನ್ನು ನೋಡಿದ ನೆಟ್ಟಿಗರು ಸುಮ್ನೇ ಇರ್ತಾರಾ? ಈಕೆಯ ಡ್ರೆಸ್ನತ್ತ ಎಲ್ಲರ ಚಿತ್ತ ಹರಿದಿದೆ. ಅಷ್ಟಕ್ಕೂ ಮಲೈಕಾ ಅರೋರಾ ಅವರಿಗೆ ಈಗ 51 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಫಿಟ್ ಆ್ಯಂಡ್ ಫೈನ್ ಆಗಿರುವುದು ಮಾತ್ರವಲ್ಲದೇ, ತಮ್ಮ ಧಾರಾಳವಾದ ಅಂಗಾಂಗ ಪ್ರದರ್ಶನದ ಮೂಲಕ ಎಲ್ಲರ ಹುಬ್ಬೇರಿಸುತ್ತಿರುತ್ತಾರೆ. ಇವರು ಫುಲ್ ಡ್ರೆಸ್ ಹಾಕುವುದು ತೀರಾ ಕಮ್ಮಿ. ಇದೇ ಕಾರಣಕ್ಕೆ ಫುಲ್ ಡ್ರೆಸ್ ಹಾಕಿದಾಗಲೂ ಟ್ರೋಲ್ ಆಗುವುದು ಇದೆ. ಅವರು ಅಷ್ಟೆಲ್ಲಾ ಪ್ರದರ್ಶನ ಮಾಡುವಾಗ ನಾನೇನು ಕಮ್ಮಿ ಎಂದು ಶುರಾ ಖಾನ್ ಇಷ್ಟು ಪ್ರದರ್ಶನ ಮಾಡ್ತಿದ್ದಾರೆ ಎಂದೆಲ್ಲಾ ಕಮೆಂಟಿಗರು ಹೇಳೋದಾ? ಒಟ್ಟಿನಲ್ಲಿ, ಬೇರೆ ಬೇರೆ ಧರ್ಮಿಯರು ಮದ್ವೆಯಾದರೆ, ವಯಸ್ಸಿನ ಅಂತರದಲ್ಲಿ ಮದ್ವೆಯಾದರೆ ಅಂಥ ಸೆಲೆಬ್ರಿಟಿಗಳಿಗೆ ಟ್ರೋಲಿಗರ ಕಾಟ ಅಂತೂ ತಪ್ಪಲ್ಲ.
ಅದೇನೇ ಇದ್ದರೂ ದಂಪತಿ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ ಟ್ರೋಲಿಗರು ಮಾತ್ರ ಇವರ ವಿಷಯವನ್ನು ಕೆದಕಿ ಕೆದಕಿ ಶೇರ್ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅರ್ಬಾಜ್ ಖಾನ್ ಅವರ ಮೊದಲ ಪತ್ನಿ ಮಲೈಕಾ ಅರೋರಾ ಅವರಿಂದ ಹುಟ್ಟಿದ ಮಗ ಅರ್ಹಾನ್ ಖಾನ್ಗೂ ಅರ್ಬಾಜ್ ಈಗಿನ ಪತ್ನಿ ಶುರಾ ಖಾನ್ಗೂ ಹನ್ನೆರಡು ವರ್ಷ ವಯಸ್ಸಿನ ಅಂತರವಿದೆ. ಹಾಗೆ ನೋಡಿದ್ರೆ ಸಂಬಂಧದಲ್ಲಿ ಇವರಿಬ್ಬರೂ ಅಮ್ಮ-ಮಗ ಆಗ್ಬೇಕು. ಅಮ್ಮ-ಮಗನಿಗೆ 12 ವರ್ಷ ಡಿಫರೆನ್ಸ್ ಎಂದು ತಮಾಷೆ ಮಾಡುತ್ತಿದ್ದಾರೆ. ದುಡ್ಡಿದ್ದರೆ ಎಲ್ಲವೂ ಸಾಧ್ಯ ಎಂದು ಹಲವರು ಹೇಳಿದರೆ, ಬಾಲಿವುಡ್ ಮಾತ್ರವಲ್ಲ ಇಲ್ಲಿ ಕೆಲವು ಕಡೆಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯವಾಗಿವೆ. ಅಜ್ಜಂದಿರ ಅಪ್ರಾಪ್ತೆಯರನ್ನು ಮದುವೆಯಾಗುವುದು ನಡೆದೇ ಇದೆ. ಅಂಥ ಸಂದರ್ಭದಲ್ಲಿ ಇದೇನೂ ದೊಡ್ಡ ವಿಷಯವಲ್ಲ ಎನ್ನುತ್ತಿದ್ದಾರೆ.
ಪ್ರೆಗ್ನೆಂಟ್ ಆಗ್ತಾಳೆ, ಮಗು ಬೀಳಿಸ್ತಾಳೆ, ಕಂಕುಳ ಕೂದ್ಲು ತೋರಿಸ್ತಾಳೆ... ಕಾರಣ ಕೇಳಿದ್ರೆ ಗಂಡಸ್ರು ಸುಸ್ತಾಗ್ತೀರಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.