Latest Videos

ಟ್ಯಾಲೆಂಟ್ ಇದ್ದಿದ್ರೆ ಹೀಗೆಲ್ಲ ತೋರಿಸುವ ಆಗತ್ಯ ಇರ್ಲಿಲ್ಲ; ಹಾಟ್ ಅದ ದಿಶಾ ಪಟಾನಿಗೆ ನೆಟ್ಟಿಗರ ತರಾಟೆ

First Published Feb 15, 2023, 1:40 PM IST

ದಿಶಾ ಪಟಾನಿ ಹೊಸ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಟ್ಯಾಲೆಂಟ್ ಇದ್ದಿದ್ರೆ ಹೀಗೆಲ್ಲ ತೋರಿಸುವ  ಅಗತ್ಯ ಇರಲಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಬಾಲಿವುಡ್ ನಟಿ ದಿಶಾ ಪಟಾನಿ ಸದಾ ಹಾಟ್ ಅಂಡ್ ಬೋಲ್ಡ್ ಅವತಾರದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇಂಟರ್ನೆಟ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಬಾಲಿವುಡ್ ಸ್ಟಾರ್‌ಗಳಲ್ಲಿ ದಿಶಾ ಕೂಡ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ಸದಾ ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆಗೆಡಿಸುತ್ತಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ದಿಶಾ ಹಾಟ್ ಫೋಟೋಶೂಟ್ ಮೂಲಕವೇ ಸುದ್ದಿಯಲ್ಲಿರುತ್ತಾರೆ. 
 

ಸ್ಟೈಲ್ ಐಕಾನ್ ದಿಶಾ ತನ್ನ ಫ್ಯಾಷನ್ ಉಡುಗೆಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಮಾದಕ ವ್ಯಕ್ತಿತ್ವ ಎಂಥವರ ಕಣ್ಣು ಕುಕ್ಕುವಂತೆ ಮಾಡುತ್ತೆ. ಸದಾ ಹಾಟ್ ಆಗಿ ಕಾಣಿಸಿಕೊಳ್ಳುವ ದಿಶಾ ಇದೀಗ ಮತ್ತಷ್ಟು ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ. 

ದಿಶಾ ಸದ್ಯ ಶೇರ್ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  ದಿಶಾ ನೀಲಿ ಬಣ್ಣದ ಮಿನಿ ಧರಿಸಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಕ್ಯಾಮರಾ ಮುಂದೆ ತರಹೇವಾರಿ ಪೋಸ್ ನೀಡಿರುವ ದಿಶಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 
ಫಿಟ್ ಅಂಡ್ ಫೈನ್ ದಿಶಾ ಫೋಟೋಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ದಿಶಾ ಯಾವುದೇ ಫೋಟೋ ಶೇರ್ ಮಾಡಿದ್ರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ. ದಿಶಾ ಹೊಸ ಫೋಟೋಗಳು ಸಹ ಟ್ರೋಲ್ ಆಗಿವೆ. ಅನೇಕರು ದಿಶಾ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಸಿನಿಮಾ ಬಿಟ್ಟು ಇದೆಲ್ಲ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 
 

ದಿಶಾ ಪಟಾನಿ ಫೋಟೋಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.  ಟ್ಯಾಲೆಂಟ್ ಇದ್ದಿದ್ರೆ ಹೀಗೆಲ್ಲ ತೋರಿಸುವ ಆಗತ್ಯ ಇರ್ಲಿಲ್ಲ ಎಂದು ಹೇಳುತ್ತಿದ್ದಾರೆ. ಎಂಎಸ್ ದೋನಿ ಸಿನಿಮಾದಲ್ಲಿ ಎಷ್ಟು ಸುಂದರವಾಗಿ ನಟಿಸಿದರು. ಆದರೆ ಈಗ ಸಿನಿಮಾಗಿಂತ ಹೆಚ್ಚಾಗಿ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. 

ದಿಶಾ ಎಷ್ಟೇ ಟ್ರೋಲ್ ಆದರೂ ಫೋಟೋಗಳನ್ನು ಶೇರ್ ಮಾಡುವುದನ್ನು ಬಿಡಲ್ಲ. ಸದಾ ಹಾಟ್ ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಬೋಲ್ಡ್ ಫೋಟೋಗಳನ್ನು ಹರಿಬಿಡುತ್ತಾರೆ. ಟ್ರೋಲ್ ಆಗುವ ಜೊತೆಗೆ ದಿಶಾ ಹಾಟ್ ನೆಸ್‌ಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. 

ದಿಶಾ ಕೊನೆಯದಾಗಿ ಏಕ್ ವಿಲನ್ ರಿಟರ್ನ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಹಿಂದಿ ಸಿನಿಮಾಗಳ ಬಳಿಕ ದಿಶಾ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ದಿಶಾ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಯೋಧ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 

click me!