Kannappa Teaser: ‘ಬೇಡರ ಕಣ್ಣಪ್ಪ’ನ ಕತೆಯನ್ನೇ ತಿರುಚಿದ್ರಾ? ಸಿನಿಮಾ ಟೀಸರ್‌ ಬಿಡುಗಡೆ..ಸಿನಿಮಾಭಿಮಾನಿಗಳು ಹೇಳಿದ್ದೇನು?

Jun 16, 2024, 10:13 AM IST

ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೊಮ್ಮೆ ಕಣ್ಣಪ್ಪ ಸಿನಿಮಾ(Kannappa Movie) ಬರುತ್ತಿದೆ. ತೆಲುಗಿನಲ್ಲಿ(Telugu) ಮಂಚು ವಿಷ್ಣು ಹೀರೊ ಆಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೋಹನ್ ಲಾಲ್, ಪ್ರಭಾಸ್, ಅಕ್ಷಯ್‌ಕುಮಾರ್ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈಗ ಕಣ್ಣಪ್ಪ ಟೀಸರ್ ರಿಲೀಸ್ ಆಗಿದೆ. ಕನ್ನಡ(Kannada) ಸೇರಿದಂತೆ 5 ಭಾಷೆಗಳಲ್ಲಿ 'ಕಣ್ಣಪ್ಪ' ಸಿನಿಮಾ ನಿರ್ಮಾಣವಾಗಿದೆ. ಸದ್ಯ ಬಿಡುಗಡೆ ಆಗಿರುವ ಟೀಸರ್‌ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಭಕ್ತಿ ಪ್ರಧಾನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಮುಖೇಶ್ ಕುಮಾರ್ ಸಿಂಗ್, ನೈಜತೆಗಿಂತ ಬಹಳ ದೂರವಾಗಿ ಕಥೆಯನ್ನು ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಈ ಟೀಸರ್ ನೋಡುತ್ತಿದ್ರೆ ಬೇಡರ ಕಣ್ಣಪ್ಪ ಸಿನಿಮಾದ ಮೂಲ ಕಥೆಯನ್ನೇ ತಿರುಚಿದಂತೆ ಕಾಣುತ್ತಿದೆ. ಕಣ್ಣಪ್ಪ ತನ್ನ ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಕೃಪೆಗೆ ಪಾತ್ರನಾದವನು. ಶ್ರೀಕಾಳಹಸ್ತಿಯಲ್ಲಿ ಕಣ್ಣಪ್ಪ ಜೀವನ ಸಾಗಿಸಿದ್ದನು ಎಂದು ಕಾವ್ಯಗಳಲ್ಲಿ ಹೇಳಲಾಗಿದೆ. ನಾಸ್ತಿಕನೂ ಆಗಿದ್ದ ಮುಗ್ಧ ಬೇಡ ದಿಣ್ಣ ಮುಂದೆ ಮಹಾನ್ ಶಿವಭಕ್ತನಾದ ಕಥೆಯಿತು. ಆದರೆ ಕಣ್ಣಪ್ಪ ಚಿತ್ರವನ್ನು ಸಂಪೂರ್ಣವಾಗಿ ನ್ಯೂಜಿಲೆಂಡ್ ಕಾಡುಗಳಲ್ಲಿ ಚಿತ್ರೀಕರಿಸಲಾಗಿದೆ. ಹಾಗಾಗಿ ವಾಸ್ತವ ಕಥೆಗೆ ಸಿನಿಮಾ ಬಹಳ ದೂರ ಇರುವಂತೆ ಕಾಣುತ್ತಿದೆ. ಇದಕ್ಕೆಲ್ಲಾ ಉತ್ತರ ಕಣ್ಣಪ್ಪ ಸಿನಿಮಾ ರಿಲೀಸ್ ಆದ ಮೇಲೆ ತಿಳಿಯಲಿದೆ.

ಇದನ್ನೂ ವೀಕ್ಷಿಸಿ:  Nayanthara: ಯಶ್ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್..! ಟಾಕ್ಸಿಕ್ ಟೀಂ ಸೇರಿದ ಲೇಡಿ ಸೂಪರ್ ಸ್ಟಾರ್!