ಗಾಯತ್ರಿಗೂ ಮೊದಲು ಅನಂತ್‌ ನಾಗ್ ಲವ್ ಮಾಡಿದ್ದು ಪ್ರಿಯಾ ತೆಂಡೂಲ್ಕರ್; ಏನ್ ಪ್ರಾಬ್ಲಂ ಆಯ್ತು..?

By Shriram Bhat  |  First Published Jun 16, 2024, 11:52 AM IST

ನಟ ಅನಂತ್‌ ನಾಗ್ ಅವರು ಕರ್ನಾಟಕಕ್ಕೆ ಬಂದು ಇಲ್ಲಿ ಕನ್ನಡ ಸಿನಿಮಾಗಳಲ್ಲಿ ಬಹಳಷ್ಟು ಬ್ಯುಸಿಯಾಗಿಬಿಟ್ಟರು. ಆಗಾಗ ಮರಾಠಿ ಹಾಗೂ ಹಿಂದಿಯ ಧಾರಾವಾಹಿಗಳು ಹಾಗೂ ಸಿನಿಮಾದಲ್ಲಿ ಅನಂತ್‌ ನಾಗ್ ಅವರು ಕಲಾವಿದರಾಗಿ..


ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅನಂತ್‌ ನಾಗ್ (Anant Nag) ಅವರು ನಟಿ ಗಾಯತ್ರಿ (Gayathri Anant Nag) ಅವರನ್ನು ಮದುವೆಯಾಗಿರುವುದು ಗೊತ್ತೇ ಇದೆ. ಆದರೆ, ಗಾಯತ್ರಿ ಅನಂತ್‌ ನಾಗ್ ಅವರ ಬಾಳಲ್ಲಿ ಬರುವುದಕ್ಕಿಂತ ಮೊದಲು ಪ್ರಿಯಾ ತೆಂಡೂಲ್ಕರ್ ಅವರು ನಟ ಅನಂತ್‌ ನಾಗ್ ಅವರ ಮನಸ್ಸನ್ನು ಗೆದ್ದಿದ್ದರು ಎನ್ನಲಾಗಿದೆ. ಹಾಗಿದ್ದರೆ ಈ ಪ್ರಿಯಾ ತೆಂಡೂಲ್ಕರ್ (Priya Tendulkar) ಯಾರು ಗೊತ್ತೇ? ಮರಾಠಿಯ ಸುಪ್ರಸಿದ್ಧ ನಾಟಕಕಾರ ವಿಜಯ್ ತೆಂಡೂಲ್ಕರ್ ಅವರ ಮಗಳು. ಅದಕ್ಕೂ ಮೊದಲು ನಟ ಅನಂತ್‌ ನಾಗ್ ಯಾರನ್ನೂ ಲವ್ ಮಾಡಿರಲಿಲ್ಲವಂತೆ. 

ಅನಂತ್‌ ನಾಗ್ ಪರಿಚಯ ಆಗುವುದಕ್ಕಿಂತಲೂ ಮೊದಲೇ ಪ್ರಿಯಾ ತೆಂಡೂಲ್ಕರ್‌ ಅವರು 'ರಜನಿ' ಎನ್ನುವ ಸೀರಿಯಲ್‌ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಬಳಿಕ ಪ್ರಿಯಾ, ಶಂಕರ್‌ ನಾಗ್ ನಿರ್ದೇಶನದ 'ಮಿಂಚಿನ ಓಟ' ಸಿನಿಮಾದಲ್ಲಿ ಸಹ ನಟಿಸಿದ್ದರು. ಆ ಸಮಯದಲ್ಲಿ ಪ್ರಿಯಾ ತೆಂಡೂಲ್ಕರ್‌ ಹಾಗು ಅನಂತ್‌ ನಾಗ್ ಸಂಬಂಧ ಪ್ರೇಮಕ್ಕೆ ತಿರುಗಬಹುದಾದಷ್ಟು ಹತ್ತಿರವಾಗಿತ್ತು. ಆದರೆ, ಆಗ ಇಬ್ಬರಲ್ಲೂ ಮೂಡಿದ ಕೆಲವು ಭಿನ್ನಾಭಿಪ್ರಾಯಗಳು ಅವರಿಬ್ಬರೂ ಪ್ರೀತಿಗೆ  ಬೀಳದೇ ಕೇವಲ ಸ್ನೇಹಿತರಾಗಿ ಉಳಿಯುವಂತೆ ಮಾಡಿತು. 

Tap to resize

Latest Videos

ಕೊಲೆ ಕೇಸ್‌ನಿಂದ ಮುಕ್ತಿ ಸಿಗಲೆಂದು ಕೈಗಾದಲ್ಲಿ ದರ್ಶನ್ ಬಾವ ಮಂಜುನಾಥ್ ಮಾಡಿದ್ದೇನು?
 
ಆಮೇಲೆ ನಟ ಅನಂತ್‌ ನಾಗ್ ಅವರು ಕರ್ನಾಟಕಕ್ಕೆ ಬಂದು ಇಲ್ಲಿ ಕನ್ನಡ ಸಿನಿಮಾಗಳಲ್ಲಿ ಬಹಳಷ್ಟು ಬ್ಯುಸಿಯಾಗಿಬಿಟ್ಟರು. ಆಗಾಗ ಮರಾಠಿ ಹಾಗೂ ಹಿಂದಿಯ ಧಾರಾವಾಹಿಗಳು ಹಾಗೂ ಸಿನಿಮಾದಲ್ಲಿ ಅನಂತ್‌ ನಾಗ್ ಅವರು ಕಲಾವಿದರಾಗಿ ಕಾಣಿಸಿಕೊಂಡರೂ ಸಹ, ಅವರು ಹೆಚ್ಚಾಗಿ ಕನ್ನಡ ನಟರಾಗಿಯೇ ಉಳಿದುಕೊಂಡರು. ಹೀಗೇ ಸಿನಿಮಾದಲ್ಲ ನಟಿಸುತ್ತಿದ್ದಾಗ ಸಹನಟಿಯಾಗಿ ಪರಿಚಯವಾದವರು ನಟಿ ಗಾಯತ್ರಿ. 

ಚಿತ್ರರಂಗದ 'ಮರ್ಯಾದೆ ಪ್ರಶ್ನೆ' ಇಲ್ಲಿಗೆ ಬಂದು ನಿಂತಿದೆ; ಸಖತ್ ಸದ್ದು ಮಾಡ್ತಿರೋ ಆಲ್ ಓಕೆ!

ಅವರಿಬ್ಬರೂ ಒಟ್ಟಾಗಿ ನಟಿಸಿದ 'ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು' ಸಿನಿಮಾ ಶೂಟಿಂಗ್‌ ವೇಳೆ ಅನಂತ್‌ ನಾಗ್ ಹಾಗು ಗಾಯತ್ರಿ ಅವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟು ಪ್ರೀತಿಸಿತೊಡಗಿದರು ಎನ್ನಲಾಗಿದೆ. ನಂತರ, ಅವರಿಬ್ಬರೂ ಮದುವೆಯಾಗಿ ನಿಜ ಜೀವನದಲ್ಲಿಯೂ 'ಸುಖ ಸಂಸಾರ' ಶುರುವಿಟ್ಟುಕೊಂಡರು. ಆದರೆ, ಅವರಿಬ್ಬರ ಸಂಸಾರಕ್ಕೆ ಹನ್ನೆರಡು ಸೂತ್ರವೋ ಅಥವಾ ಎರಡೇ ಸೂತ್ರವೋ ಗೊತ್ತಿಲ್ಲ. 

ಹುಡ್ಗಿ ಇಂಪ್ರೆಸ್ ಮಾಡೋಕೋ, ವೀಡಿಯೋ ಮಾಡೋಕೋ ಹೋಗಿ ಹಾಳಾಗ್ಬೇಡಿ: ರಾಕಿಂಗ್ ಸ್ಟಾರ್ ಯಶ್!

ಅನಂತ್‌ ನಾಗ್-ಗಾಯತ್ರಿ ಜೋಡಿಯೇ ಅದನ್ನು ಹೊರಜಗತ್ತಿಗೆ ಹೇಳಬೇಕು. ಸಿನಿಮಾ ಬಳಿಕ ನಟಿ ಹಾಗು ಅನಂತ್‌ ನಾಗ್ ಪತ್ನಿಯಾದ ಗಾಯತ್ರಿ ಅವರು ಮೊದಲೇ ಒಪ್ಪಿಕೊಂಡಿದ್ದ ಕೆಲವು ಸಿನಿಮಾಗಳನ್ನು ಮಗಿಸಿಕೊಟ್ಟರು ಅಷ್ಟೇ, ನಂತರ ಯಾವುದೇ ಸಿನಿಮಾದಲ್ಲಿ ನಟಿಸದೇ ಸಿನಿಮಾ ನಟನೆಯಿಂದ ದೂರವೇ ಉಳಿದುಬಿಟ್ಟರು. 

ಕೊಲೆ ಕೇಸ್‌ ಆರೋಪಿ ದರ್ಶನ್‌ ಬಗ್ಗೆ ಬಾವ ಮಂಜುನಾಥ್ ಹೇಳಿದ್ದೇನು? ಜನ ಏನಂತ ರಿಯಾಕ್ಟ್ ಮಾಡ್ಬಹುದು?

ಆದರೆ, ನಟ ಅನಂತ್‌ನಾಗ್ ಅವರು ಇಂದಿಗೂ ನಟಿಸುತ್ತಲೇ ಇದ್ದಾರೆ. ಕನ್ನಡದ ಪ್ರತಿಭಾವಂತ ನಟರ ಸಾಲಿನಲ್ಲಿ ಮೇಲ್ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಅನಂನ್‌ನಾಗ್. ಒಮ್ಮೆ ರಾಜಕೀಯರಂಗ ಪ್ರವೇಶಿಸಿದ್ದರೂ ನಟ ಅನಂತ್‌ ನಾಗ್ ಅವರು ಬಳಿಕ ಆ ಕ್ಷೇತ್ರದಿಂದ ಸಂಪೂರ್ಣ ಹೊರಗೆ ಬಂದುಬಿಟ್ಟಿದ್ದಾರೆ. 

ದುಬಾರಿ ಕಾರು ಪವಿತ್ರಾ ಗೌಡಗೂ ಬಂದಿದ್ದು ಹೇಗೆ; ದರ್ಶನ್ ಪತ್ನಿ 'ರೇಂಜ್‌' ತಲುಪಿದ್ರಾ ಪವಿತ್ರಾ ಗೌಡ!

click me!