Latest Videos

ತಿರುಪತಿಯಲ್ಲಿ ತಲೆ ಬೋಳಿಸಿಕೊಂಡ ದಕ್ಷಿಣದ ಪ್ರಖ್ಯಾತ ನಟಿ!

By Santosh NaikFirst Published Jun 15, 2024, 9:36 PM IST
Highlights

Rachana Narayanankutty: ತಿರುಪತಿಯಲ್ಲಿ ದರ್ಶನದ ಭಾಗವಾಗಿ ನಟಿ ರಚನಾ ನಾರಾಯಣನ್‌ ಕುಟ್ಟಿ ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಅದರ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
 


ಪ್ರಖ್ಯಾತ ನಟಿ ಹಾಗೂ ಟಿವಿ ನಿರೂಪಕಿ ರಚನಾ ನಾರಾಯಣನ್‌ ಕುಟ್ಟಿ ಫುಲ್‌ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಟಿವಿ ಧಾರವಾಹಿಗಳ ಬಳಿಕ ನಟಿ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದರು. ಸೋಶಿಯಲ್‌ ಮೀಡಿಯಾದಲ್ಲೂ ಸಖತ್‌ ಆಕ್ಟೀವ್‌ ಆಗಿರುವ ರಚನಾ ನಾರಾಯಣನ್‌ ಕುಟ್ಟಿ, ಸಾಮಾಜಿಕ ವಿಚಾರಗಳ ಬಗ್ಗೆ ಬಹಳ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ಅವರು ತಮ್ಮ ಅಭಿಪ್ರಾಯದ ಸಲುವಾಗಿ ಸೈಬರ್‌ ದಾಳಿಗೂ ತುತ್ತಾಗುತ್ತಾರೆ. ಈಗ ರಚನಾ ನಾರಾಯಣನ್‌ ಕುಟ್ಟಿ ಅವರ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದಾರೆ. ಸಾಮಾನ್ಯವಾಗಿ ಸಿನಿಮಾ ತಾರೆಯರು ಹಾಗೂ ನಿರೂಪಕಿಯರಿಗೆ ಅವರ ಕೇಶರಾಶಿಯೇ ಮುಖ್ಯ. ಆದರೆ, ರಚನಾ, ತಮ್ಮ ತಲೆಕೂದಲನ್ನು ಬೋಳಿಸಿಕೊಂಡಿರುವ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಹೆಚ್ಚಿನವರು ಇದು ಎಡಿಟೆಡ್‌ ಫೋಟೋ ಆಗಿರಬಹುದು ಎಂದುಕೊಂಡಡಿದ್ದರು. ಆದರೆ, ಫೋಟೋಗೆ ನೀಡಲಾದ ಕ್ಯಾಪ್ಟನ್‌ಅನ್ನು ಓದಿದ ಬಳಿಕ ನಟಿ ನಿಜವಾಗಿಯೂ ತಲೆ ಬೋಳಿಸಿಕೊಂಡಿದ್ದಾರೆ ಎನ್ನುವುದು ಖಚಿತವಾಗಿದೆ.

ಇತ್ತೀಚೆಗೆ ತಿರುಪತಿ ದರ್ಶನಕ್ಕೆ ಹೋಗಿರುವ ನಟಿ ರಚನಾ ನಾರಾಯಣನ್‌ ಕುಟ್ಟಿ, ತಮ್ಮ ಕೇಶಮುಂಡನ ಸೇವೆಯನ್ನು ಮಾಡಿಸಿದ್ದಾರೆ. ಅದರೊಂದಿಗೆ 'ಎಲ್ಲಾ ಅಹಂಕಾರಗಳನ್ನು ಮತ್ತು ಅಂಧಕಾರಗಳನ್ನು ನಾಶಮಾಡುವ ಭಗವಂತನ ಸನ್ನಿಧಿಯಲ್ಲಿ " ಎಂದು ಬರೆದುಕೊಂಡಿದ್ದಾರೆ. ಇದನ್ನು ಓದಿದ ಬಳಿಕವೇ ಹೆಚ್ಚಿನವರಿಗೆ ಇದು ನಿಜವಾದ ಫೋಟೋ ಎನ್ನುವುದು ಗೊತ್ತಾಗಿದೆ. ಆ ಬಳಿಕ ಹಲವು ಆಕೆಗೆ ವಿಶ್‌ ಕೂಡ ಮಾಡಿದ್ದಾರೆ.

ಶ್ರೀದೇವಿ ಭೈರಪ್ಪ ವಿರುದ್ಧ 10 ಕೋಟಿಯ ಮಾನನಷ್ಟ ಕೇಸ್‌ ಹಾಕಿದ ಸಪ್ತಮಿ ಗೌಡ!

ಇನ್ನೂ ಕೆಲವರು ರಚನಾ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇಂಥ ಧೈರ್ಯ ಚಾರ್ಲ್ಸ್‌ ಶೋಭರಾಜ್‌ ಮಾತ್ರವೇ ಮಾಡಿದ್ದರು ಎಂದಿದ್ದಾರೆ. ಸಾಮಾನ್ಯವಾಗಿ ಆಕ್ಟೀವ್‌ ಆಗಿರುವ ನಟರಾಗಲಿ, ನಟಿಯರಾಗಲಿ ತಮ್ಮ ತಲೆಯನ್ನು ಶೇವ್‌ ಮಾಡಿಕೊಳ್ಳೋದಿಲ್ಲ. ಇದರಿಂದ ಅವರಿಗೆ ಆಫರ್‌ಗಳು ಕಡಿಮೆಯಾಗುತ್ತದೆ ಎನ್ನುವ ಭೀತಿಯಲ್ಲಿರುತ್ತಾರೆ. ಇತ್ತೀಚೆಗೆ ನಟಿ ಕೃಷ್ಣ ಪ್ರಭಾ ಕೂಡ ತಮ್ಮ ತಾಯಿಯ ಜೊತೆ ತಿರುಪತಿಯಲ್ಲಿ ಹೆಡ್‌ ಶೇವ್‌ ಮಾಡಿಕೊಂಡಿದ್ದರು.

ಯುವ ರಾಜ್‌ಕುಮಾರ್‌-ಸಪ್ತಮಿ ಗೌಡ ರೆಡ್‌ಹ್ಯಾಂಡ್‌ ಆಗಿ ಹೋಟೆಲ್‌ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ರು: ಶ್ರೀದೇವಿ ಭೈರಪ್ಪ

 

click me!