ದಕ್ಷಿಣ ಭಾರತ ಉತ್ಸವ 2024.. ಚಾಲನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್

Jun 16, 2024, 11:14 AM IST

FKCCI ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಉತ್ಸವ -2024ಕ್ಕೆ ಚಾಲನೆ ಸಿಕ್ಕಿದೆ. ಇಂದು ಮತ್ತು ನಾಳೆ ನಡೆಯಲಿರುವ ಈ ಉತ್ಸವಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಭಾಗಿತ್ವ ನೀಡುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ದೀಪ ಬೆಳಗುವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ದಕ್ಷಿಣ ಭಾರತದ ಏಳು ರಾಜ್ಯಗಳ ಪ್ರವಾಸೋದ್ಯಮ ಇಲಾಖೆಯ ಪ್ರತಿನಿಧಿಗಳು ಸೇರಿದಂತೆ ದೇಶ ವಿದೇಶಗಳ ಗಣ್ಯರು, ಹೂಡಿಕೆದಾರರು ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ದಕ್ಷಿಣ ಭಾರತದ ಪ್ರವಾಸೋದ್ಯಮ ಕ್ಷೇತ್ರವನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಈ ಉತ್ಸವ ನಡೆಯುತ್ತಿದೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಹಲವಾರು ಜನ ಹೂಡಿಕೆದಾರರು ಪ್ರವಾಸೋದ್ಯಮಕ್ಕೆ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಅವರೆಲ್ಲರಿಗೂ ತೆರಿಗೆಯಲ್ಲಿ ವಿನಾಯಿತಿ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇವೆ. ಬೆಂಗಳೂರು ಅಂದಾಕ್ಷಣ ಬರೀ ವಿಧಾನಸೌಧ ನೋಡಿ ಹೋಗ್ತಾರೆ. ಆದರೆ ಬೆಂಗಳೂರಿನಲ್ಲಿ ಇನ್ನೂ ಅನೇಕ ಪ್ರವಾಸಿ ಸ್ಥಳಗಳಿವೆ. ಅದರ ಅಭಿವೃದ್ಧಿ ಆಗಬೇಕಿದೆ. ಇದಕ್ಕಾಗಿ ಬ್ರಾಂಡ್ ಬೆಂಗಳೂರು ಪ್ರಾಜೆಕ್ಟ್ ನಲ್ಲಿ ಪ್ಲಾನಿಂಗ್ ರೂಪಿಸಲಾಗಿದೆ ಎಂದರು. ಇನ್ನು ಇದೇ ವೇಳೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ನಾವು ಬರೀ ಸಿರಿವಂತರನ್ನು ಮಾತ್ರ ಇಟ್ಟುಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತಿಲ್ಲ. ಮಧ್ಯಮ ವರ್ಗ ಮತ್ತು ಬಡವರ್ಗದ ಜನರಿಗೂ ಪ್ರವಾಸ ಅನುಕೂಲಕರವಾಗಬೇಕು. ಹೊರ ದೇಶದ ಅಥವಾ ಹೊರ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸಬೇಕು ಅಂತ ಗ್ಯಾಂಬ್ಲಿಂಗ್, ಕೆಸಿನೋದಂತಹ ವಿಚಾರಗಳಿಗೂ ಪ್ರೋತ್ಸಾಹಿಸೋದು ಬೇಡ. ಸಾಮಾಜಿಕ ಕಾಳಜಿ ಜೊತೆ ಪ್ರವಾಸಿ ತಾಣಗಳನ್ನು ನಿರ್ಮಿಸೋಣ ಎಂದು ಹೂಡಿಕೆದಾರರಿಗೆ ಕಿವಿ ಮಾತು ಹೇಳಿದರು. 

ಇದನ್ನೂ ವೀಕ್ಷಿಸಿ:  ಫರ್ನಿಚರ್‌ ಹಾಗೂ ಲೈಫ್‌ ಸ್ಟೈಲ್‌ ಎಕ್ಸ್‌ ಪೋ..ಇಂದೇ ಭೇಟಿ ನೀಡಿ ನಿಮಗಿಷ್ಟವಾದ ಗೃಹಪಯೋಗಿ ವಸ್ತು ಖರೀದಿಸಿ