ರೇಖಾ, ದೀಪಿಕಾ, ಕತ್ರೀನಾ, ಕರೀನಾಗೆ ಸಿಕ್ಕ ಎಕ್ಸ್ ಬಾಯ್ ಫ್ರೆಂಡ್ಸ್, ಕಣ್ಣಲ್ಲಿ ಕಣ್ಣಿಟ್ಟು ನೋಡಲೇ ಇಲ್ಲ!

First Published Sep 4, 2023, 5:40 PM IST

ಬಾಲಿವುಡ್‌ನ ಕೆಲವು ಅಪೂರ್ಣ ಪ್ರೇಮಕಥೆಗಳು ಹಲವು ವರ್ಷಗಳ ನಂತರವೂ ಚರ್ಚೆಯಲ್ಲಿದೆ. ಇದಕ್ಕೆ ಸಂಬಂಧಿಸಿದ ವರದಿ, ಫೋಟೋಗಳು ಹಾಗೂ ವಿಡಿಯೋಗಳು ಆಗಾಗ ಮುನ್ನಲೆಗೆ ಬರತ್ತಲೇ ಇರುತ್ತವೆ. ಅಷ್ಟೇ ಅಲ್ಲ ಈ ಮಾಜಿ ಪ್ರೇಮಿಗಳು ತಮ್ಮ ಜೀವನದಲ್ಲಿ ಮೂವ್‌ ಆನ್‌ ಆಗಿದ್ದರೂ ಪರಸ್ಪರ ಮುಖಮುಖಿಯಾದಾಗ ಮುಖ ತಿರುಗಿಸುತ್ತಾರೆ. ಇವರ ಈ ರೀತಿಯ ವರ್ತನೆಗಳು ಹಲವು ಬಾರಿ ಕ್ಯಾಮೆರದಲ್ಲಿ ಸಹ ಸೆರೆಹಿಡಿಯಲಾಗಿದೆ. 

ಎಪ್ಪತ್ತರ ದಶಕದಲ್ಲಿಂದಲೂ ರೇಖಾ ಮತ್ತು ಅಮಿತಾಬ್ ಬಚ್ಚನ್ ಸಂಬಂಧದಲ್ಲಿದ್ದಾರೆ ಎಂದು ವದಂತಿಗಳಿದ್ದವು. ಆದಾಗ್ಯೂ, ಅದೇ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಆದರೆ ಅದರ ನಂತರ ಇದುವರೆಗೂ ಇವರಿಬ್ಬರು ಯಾವುದೇ ಸಿನಿಮಾ ಅಥವಾ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಅಮಿತಾಬ್‌ ಬಚ್ಚನ್‌ ಎದುರಾದಾಗ ರೇಖೆ ಅವರ ಕಣ್ಣು ತಪ್ಪಿಸಿದ ವಿಡಿಯೋಗಳು ಸಹ ಇವೆ. 

ರಣಬೀರ್ ಕಪೂರ್ ಜೊತೆಗಿನ ದೀಪಿಕಾ ಪಡುಕೋಣೆ ಸಂಬಂಧದ ಬಗ್ಗೆ ಸಾಕಷ್ಟು ಬಾರಿ ಮಾತನಾಡಲಾಗಿದೆ. ಈ ಜೋಡಿಯ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಕೆಮಿಸ್ಟ್ರಿ ಚರ್ಚೆಯಾಗಿತ್ತು. ಕೆಲವು ವರ್ಷಗಳ ನಂತರ ಅವರು ಬೇರ್ಪಟ್ಟರೂ, ಅವರ ಪ್ರೇಮಕಥೆಯು ಅಪೂರ್ಣವಾಗಿದ್ದರೂ ಇಂದಿಗೂ ಇವರಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ.

Latest Videos


ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ದೀರ್ಘಕಾಲ ಸಂಬಂಧದಲ್ಲಿದ್ದರು. ಅವರ ಬ್ರೇಕಪ್‌ ದೀರ್ಘಕಾಲದವರೆಗೆ ಮುಖ್ಯಾಂಶಗಳಲ್ಲಿ ಉಳಿಯಿತು.

ಕರೀನಾ ಕಪೂರ್ ಅವರು ಮೊದಲ ಬಾರಿಗೆ ಭೇಟಿಯಾದಾಗಿನಿಂದ ಶಾಹಿದ್ ಕಪೂರ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಇವರ ಜೋಡಿ ಬಾಲಿವುಡ್‌ನ ಫೇಮಸ್‌ ಜೋಡಿಗಳಲ್ಲಿ ಒಂದಾಗಿತ್ತು. ಆದರೆ ಇವರ ಸಂಬಂಧ ಹೆಚ್ಚುಕಾಲ ಉಳಿಯಲಿಲ್ಲ . ಬ್ರೇಕಪ್‌ ನಂತರ ಬೇಟಿಯಾದಾಗ ಇಬ್ಬರೂ ಪರಸ್ಪರ ಕಣ್ಣು ತಪ್ಪಿಸಿಕೊಂಡಿರುವುದು ಗಮನಿಸಲಾಗಿದೆ.

ಹಿಂದೊಮ್ಮೆ ಪ್ರಿಯಾಂಕಾ ಚೋಪ್ರಾ ಮತ್ತು ಶಾಹಿದ್‌ ಕಪೂರ್‌ ಅವರ ಲವ್‌ಸ್ಟೋರಿ  ಎಲ್ಲರ ಗಮನ ಸೆಳೆದಿತ್ತು. ಆದರೆ ಇದು ಹೆಚ್ಚು ಕಾಲ ನಡೆಯಲಿಲ್ಲ. ಅಷ್ಟೇ ಅಲ್ಲ ಬ್ರೇಕಪ್‌ ನಂತರ ಇವೆಂಟ್‌ವೊಂದರಲ್ಲಿ ಶಾಹಿದ್‌ ಕಪೂರ್‌ ಅವರು ತಮ್ಮ ಮಾಜಿ ಗರ್ಲ್‌ಫ್ರೆಂಡ್‌ ಪ್ರಿಯಾಂಕರನ್ನು ಇಗ್ನೋರ್‌ ಮಾಡಿದ ವಿಡಿಯೋ ಸಹ ವೈರಲ್‌ ಆಗಿದೆ.

click me!