ಸೆಪ್ಟೆಂಬರ್ 20 ರಂದು ರಾಷ್ಟ್ರೀಯ ಸಿನಿಮಾ ದಿನಾಚರಣೆ ಅಂಗವಾಗಿ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ದೇಶಾದ್ಯಂತ ಕೇವಲ ₹99 ರೂಗಳಿಗೆ ಸಿನಿಮಾ ಟಿಕೆಟ್ಗಳನ್ನು ನೀಡುತ್ತಿದೆ. ಈ ಕೊಡುಗೆ PVR, INOX, CINEPOLIS ಸೇರಿದಂತೆ 4000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಲಭ್ಯವಿದೆ.
ನವದೆಹಲಿ/ಬೆಂಗಳೂರು (ಸೆ.20): ರಾಷ್ಟ್ರೀಯ ಚಲನಚಿತ್ರ ದಿನಾಚರಣೆ ಅಂಗವಾಗಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ವತಿಯಿಂದ ಇಂದು (ಸೆ.20 ರಂದು) ಕೇವಲ 99 ರೂ.ಗೆ ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಣೆ ಮಾಡಬಹುದು ಎಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಈಗಾಗಲೇ ಮಧ್ಯಾಹ್ನವಾಗಿದ್ದು, ಮೊದಲೆರಡು ಶೋಗಳು ಟಿಕೆಟ್ ಸೇಲ್ ಆಗಿವೆ. ಇದೀಗ ಇನ್ನೂ ಎರಡು ಶೋಗಳನ್ನು ನೋಡಲು ಇಚ್ಛಿಸುವವರು ಕೂಡಲೇ ಹೋಗಿ ಕೇವಲ 99 ರೂ.ನಲ್ಲಿ ಸಿನಿಮಾ ನೋಡಿಕೊಂಡು ಬರಬಹುದು.
ಸಾಮಾನ್ಯವಾಗಿ ಎಲ್ಲರೂ ಸಿನಿಮಾ ನೋಡಲು ಇಷ್ಟಪಡುತ್ತಾರೆ. ಆದರೆ, ಮನೆಗಿಂತ ದೊಡ್ಡ ಪರದೆಯಲ್ಲಿ ಅದರಲ್ಲಿಯೂ ಮಲ್ಟಿಪ್ಲೆಕ್ಸ್‌ಗಳನ್ನು ಸಿನಿಮಾ ನೋಡುವುದಕ್ಕೆ ಅವಕಾಶ ಸಿಕ್ಕರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಸೆ.20ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಾಗುತ್ತಿದ್ದು, ಈ ವೇಳೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ದೇಶಾದ್ಯಂತ ಚಲನಚಿತ್ರ ಪ್ರೇಮಿಗಳಿಗೆ ಉತ್ತಮ ಕೊಡುಗೆಯನ್ನು ಘೋಷಿಸಿದೆ. ಸಿನಿಮಾ ಪ್ರಿಯರು ಕೇವಲ 99 ರೂ.ಗಳಲ್ಲಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ನೋಡಬಹುದು. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡಲು 400-500 ರೂ. ಇದ್ದ ಟಿಕೆಟ್ ಸೆ.20ರ ಶುಕ್ರವಾರ ಕೇವಲ 99 ರೂಪಾಯಿಗೆ ಲಭ್ಯವಾಗಲಿದೆ.
undefined
ಶಿವಣ್ಣನ ಕಾಲಿಗೆರಗಿದ ಐಶ್ವರ್ಯಾ ರೈ ಮಗಳು! ಐಶ್ ಬೇಬಿ ಕಲಿಸಿಕೊಟ್ಟ ಸಂಸ್ಕಾರಕ್ಕೆ ಶಬ್ಬಾಸ್ ಅಂತಿದ್ದಾರೆ ನೆಟ್ಟಿಗರು!
ಯಾವಾವ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಆಫರ್ ಇದೆ?
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಪತ್ರಿಕಾ ಪ್ರಕಟಣೆಯ ಮಾಹಿತಿ ಪ್ರಕಾರ PVR, INOX, CINEPOLIS, MIRAJ, CITY PRIDE, ASIAN, MUKTA A2, MOVIE TIME, WAVE, MOVIEMAX, M2K, DELITE ಮೂವೀ ಸೇರಿದಂತೆ ಒಟ್ಟು 4000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಕೇವಲ 99 ರೂ.ಗಳಿಗೆ ಟಿಕೆಟ್‌ಗಳು ಲಭ್ಯವಿವೆ. ಈ ಕೊಡುಗೆ ಸೆಪ್ಟೆಂಬರ್ 20ಕ್ಕೆ ಮಾತ್ರ ಅನ್ವಯವಾಗಲಿದೆ. ನೀವು 99 ರೂ.ಗೆ ಟಿಕೆಟ್ ಬುಕ್ ಮಾಡಲು ಬಯಸಿದರೆ, ನಿಮಗೆ ಆಫ್‌ಲೈನ್ ಮತ್ತು ಆನ್‌ಲೈನ್ ಆಯ್ಕೆ ಮಾಡಿಕೊಳ್ಳಬಹುದು. ನೀವು ನೇರವಾಗಿ ಮಲ್ಟಿಪ್ಲೆಕ್ಸ್ ಹಾಲ್‌ಗೆ ಆಫ್‌ಲೈನ್ ಮೂಲಕ ಹೋಗಿ ಟಿಕೆಟ್ ಖರೀದಿ ಮಾಡಬೇಕು. ನಾವು ಆನ್‌ಲೈನ್ ಬುಕ್ ಮಾಡುತ್ತೇವೆಂದರೆ ಬುಕ್‌ಮೈಶೋ, ಪಿವಿಆರ್ ಸಿನಿಮಾ, ಪೇಟಿಎಂನಂತಹ ಅಪ್ಲಿಕೇಶನ್‌ಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ರೂ 99 ರ ಟಿಕೆಟ್ ಅನ್ನು ಬುಕ್ ಮಾಡಲು, ನೀವು ಯಾವುದೇ ವಿಶೇಷ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯವಿಲ್ಲ.
ಅಪ್ಪುವಿನ 'ಓಪನ್ ದ ಬಾಟಲ್' ಹಾಡಿನ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಗೋವಾದಲ್ಲಿ ಅರೆಸ್ಟ್!
ವಿಶೇಷ ಕೋಡ್ ಅಗತ್ಯವಿಲ್ಲ: ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ ಇಲ್ಲಿ ಸೂಚಿಸಲಾಗಿರುವ ಯಾವುದೇ ಸಿನಿಮಾ ಹಾಲ್‌ಗಳಿಗೆ ನೀವು ಬರಬಹುದು. ನಿಮ್ಮ ನೆಚ್ಚಿನ ಚಲನಚಿತ್ರಕ್ಕಾಗಿ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಕೇವಲ 99 ರೂ. ಟಿಕೆಟ್ ಪಡೆಯಲು ಯಾವುದೇ ವಿಶೇಷ ಕೋಡ್ ಅಥವಾ ವೋಚರ್ ಅಗತ್ಯವಿಲ್ಲ. ಬನ್ನಿ, ನಿಮ್ಮ ಚಲನಚಿತ್ರವನ್ನು ಆಯ್ಕೆ ಮಾಡಿ ಮತ್ತು ಕೇವಲ 99 ರೂಗಳಲ್ಲಿ ಪ್ರದರ್ಶನವನ್ನು ಆನಂದಿಸಿ ಎಂದು ತಿಳಿಸಿದೆ.