ನಾಗಮಂಗಲ ಕೋಮುಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕನೋರ್ವ ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟ ಘಟನೆ ನಾಗಮಂಗಲದಲ್ಲಿ ನಡೆದಿದೆ.
ಮಂಡ್ಯ (ಸೆ.21): ನಾಗಮಂಗಲ ಕೋಮುಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕನೋರ್ವ ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟ ಘಟನೆ ನಡೆದಿದೆ.
ಕಿರಣ್ (23) ಮೃತ ದುರ್ದೈವಿ. ಸೆಪ್ಟೆಂಬರ್ 11 ರ ರಾತ್ರಿ ಘಟನೆ ನಡೆದ ನಂತರ ಗ್ರಾಮ ತೊರೆದಿದ್ದ ಯುವಕ. ಯುವಕನಿಗೆ ಬ್ರೈನ್ ಸ್ಟ್ರೋಕ್ ಆಗಿತ್ತು. ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಗೆ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿರುವ ಯುವಕ. ಈಗಾಗಲೇ ಪ್ರಕರಣ ಸಂಬಂಧ ಎ17 ಆರೋಪಿಯಾಗಿ ಮಂಡ್ಯ ಕಾರಾಗೃಹದಲ್ಲಿರುವ ಮೃತ ಕಿರಣ್ ತಂದೆ ಕುಮಾರ್. ತಂದೆ ಜೈಲಿನಲ್ಲಿರುವಾಗಲೇ ಇತ್ತ ಮಗ ಕಿರಣ್ ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟಿರುವುದು ಕುಟುಂಬಸ್ಥರ ಸಂಕಟ ಹೇಳತೀರದಾಗಿದೆ.
undefined
ನಾಗಮಂಗಲದ ಗಲಭೆ ಪೂರ್ವಯೋಜಿತ: ಬಿಜೆಪಿ ಸತ್ಯಶೋಧನೆ ಸಮಿತಿ ವರದಿ
ನಾಗಮಂಗಲ ಗಲಭೆ ಪ್ರಕರಣ ಸಂಬಂಧ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯವಾಳಿ ಪರಿಶೀಲನೆ ನಡೆಸುತ್ತಿರುವ ತಿಳಿದು ಊರು ತೊರೆದಿರುವ ಯುವಕರು. ಇತ್ತ ಪೊಲೀಸರು ಯುವಕರು ಊರಿಗೆ ಬರುವುದನ್ನೆ ಕಾಯುತ್ತಿದ್ದಾರೆ. ಬದರಿಕೊಪ್ಪಲಿನ ಯುವಕರು ಹಾಗೂ ಮುಸ್ಲಿಂ ಪ್ರದೇಶದ ಯುವಕರು ಗಂಡಸರು ಊರಿಗೆ ಬರುವುದಕ್ಕೆ ಹೆದರುತ್ತಿದ್ದಾರೆ. ಪೊಲೀಸರು ಆರೋಪಿಗಳನ್ನು ಹುಡುಕಿಕೊಂಡು ಹೋಗಿ ಬಂಧಿಸುತ್ತಿದ್ದಾರೆ ಇದರಿಂದ ಬಂಧನ ಭೀತಿಗೆ ಒಳಗಾಗಿರುವ ಯುವಕರು.