ಬಿಷ್ಣೋಯಿಯನ್ನು ನಿಮ್ಮ ಬಳಿಗೂ ಕಳುಹಿಸಬೇಕಾ? ಸಲ್ಮಾನ್ ಖಾನ್ ತಂದೆಗೆ ಜೀವ ಬೆದರಿಕೆ

By Kannadaprabha News  |  First Published Sep 20, 2024, 10:21 AM IST

ಸಲ್ಮಾನ್ ಖಾನ್ ತಂದೆ ಸಲೀಂ ಬಳಿ ಬಂದ ಬುರ್ಖಾ  ಧರಿಸಿದಗ್ದ ಮಹಿಳೆ ಬಿಷ್ಣೋಯಿಯನ್ನು ನಿಮ್ಮ ಬಳಿಗೂ ಕಳುಹಿಸಬೇಕಾ? ಎಂದು ಬೆದರಿಕೆ ಹಾಕಿದ್ದಾಳೆ.


ಮುಂಬೈ: ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ ಎದುರಿಸುತ್ತಿರುವ ನಟ ಸಲ್ಮಾನ್‌ ಕುಟುಂಬ ಬುಧವಾರ ಎರಡು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ.

ಸಲ್ಮಾನ್‌ರ ತಂದೆ ಸಲೀಂ ಖಾನ್‌ ಅವರಿಗೆ ಜೋಡಿಯೊಂದು ಬೆದರಿಕೆ ಹಾಕಿದ ಘಟನೆ ಗುರುವಾರ ಬೆಳಗ್ಗೆ ಮುಂಬೈನಲ್ಲಿ ನಡೆದಿದೆ. ಸಲೀಂ ಅವರು ವಾಯುವಿಹಾರ ಮುಗಿಸಿ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಓರ್ವ ವ್ಯಕ್ತಿ ಮತ್ತು ಬುರ್ಖಾಧಾರಿ ಮಹಿಳೆ ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಸಲೀಂ ಅವರ ಬಳಿ ಬಂದು ‘ಲಾರೆನ್ಸ್‌ ಬಿಷ್ಣೋಯಿಯನ್ನು ನಿಮ್ಮ ಬಳಿಗೂ ಕಳುಹಿಸಬೇಕಾ!’ ಎಂದು ಬೆದರಿಕೆ ಹಾಕಿ ಪರಾರಿಯಾಗಿದೆ. ಬಳಿಕ ಬೈಕ್‌ ನಂಬರ್‌ ಆಧರಿಸಿ ಇಬ್ಬರನ್ನೂ ಬಂಧಿಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಬಿಷ್ಣೋಯ್‌ ಗ್ಯಾಂಗ್‌ಗೂ ಇವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಗೊತ್ತಾಗಿದೆ.

Tap to resize

Latest Videos

undefined

ಸಲ್ಲೂ ಭಾಯ್ ಮಾಜಿ ಗರ್ಲ್’ಫ್ರೆಂಡ್, ಸ್ಟಾರ್ ಕ್ರಿಕೆಟಿಗನ ಮಾಜಿ ಪತ್ನಿಯಾಗಿದ್ದ ಈ ನಟಿ ವಯಸ್ಸು 64 ಆದ್ರೂ ಹೇಗಿದ್ದಾರೆ ನೋಡಿ

2022ರಲ್ಲೂ ಇದೇ ಸ್ಥಳದಲ್ಲಿ ಸಲೀಂ ಅವರು ಕುಳಿತಿದ್ದಾಗ ವ್ಯಕ್ತಿಯೊಬ್ಬ ಬಂದು ನಿಮ್ಮನ್ನು ಹಾಗೂ ನಿಮ್ಮ ಪುತ್ರ ಸಲ್ಮಾನ್‌ನನ್ನು ಹತ್ಯೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ ಪತ್ರವೊಂದನ್ನು ನೀಡಿ ತೆರಳಿದ್ದ.

ಇನ್ನೊಂದು ಘಟನೆಯಲ್ಲಿ ಸಲ್ಮಾನ್‌ ಮೆಹಬೂಬ್‌ ಸ್ಟುಡಿಯೋದಿಂದ ತಮ್ಮ ಮನೆಗೆ ಪೊಲಿಸರ ಬೆಂಗಾವಲಿನಲ್ಲಿ ಬರುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಭದ್ರತೆಯನ್ನು ಭೇದಿಸಿ ಬೈಕ್‌ ಅನ್ನು ಕಾರಿನ ಸಮೀಪವೇ ತಂದು ಆತಂಕ ಸೃಷ್ಟಿಸಿದ್ದಾನೆ.

ಸೋಮಿ ಜೊತೆ ಸಿಕ್ಕಿಬಿದ್ದ ಸಲ್ಮಾನ್ ಖಾನ್: ಸಂಗೀತಾ ಜೊತೆ ಬ್ರೇಕಪ್‌ಗೆ ಆಯ್ತು ಕಾರಣ!

click me!