ಹಾಟ್ ಚೆಲುವೆ ಅಮೀಶಾ ವಿರುದ್ಧ ವಂಚನೆ ಅರೋಪ

First Published | Feb 27, 2021, 4:58 PM IST

ಕಹೋನೋ ಪ್ಯಾರ್ ಹೇ ಸಿನಿಮಾದ ಮೂಲಕ ರಾತ್ರೋರಾತ್ರಿ ಸ್ಟಾರ್‌ ಆದ ಹೃತಿಕ್‌ ರೋಷನ್‌ ನಾಯಕಿ  ಅಮೀಶಾ ಪಟೇಲ್‌ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಇವರ ಯಾವುದೇ ಸಿನಿಮಾ ಅಲ್ಲ. ನಟಿಯ ಮೇಲೆ ವಂಚನೆ ಅರೋಪ ಕೇಳಿಬರುತ್ತಿದೆ ಹಾಗೂ ಇವರ ಮೇಲೆ ಕೇಸ್‌ ಕೂಡ ಫೈಲ್‌ ಮಾಡಲಾಗಿದೆ. ಅಮೀಷಾ ಪಟೇಲ್ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶ ಆನಂದ್ ಸೇನ್  ವಿಡಿಯೋ ಮೂಲಕ ವಿಚಾರಣೆ ನಡೆಸಿದ್ದಾರೆ. ಇಲ್ಲಿದೆ ವಿವರ.

ಬಾಲಿವುಡ್ ನಟಿ ಅಮೀಷಾ ಪಟೇಲ್ ತೊಂದರೆಯಲ್ಲಿದ್ದಾರೆ.
undefined
ನಟಿಯ ಮೇಲೆ 2.5 ಕೋಟಿಯ ಚೆಕ್‌ ಬೌನ್ಸ್‌ ಅರೋಪ ಕೇಳಿಬಂದಿದೆ.
undefined
Tap to resize

ಗದರ್: ಏಕ್ ಪ್ರೇಮ್ ಕಥಾ ನಟಿಯ ಮೇಲೆ 2.5 ಕೋಟಿ ರೂ.ಗಳ ಮೌಲ್ಯದ ಚೆಕ್ ಬೌನ್ಸ್ ವಂಚನೆ ಆರೋಪ ಹೊರಿಸಿದ್ದಾರೆ.
undefined
ವರದಿಗಳ ಪ್ರಕಾರ, ಅಮೀಷಾ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಜಂಡ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶ ಆನಂದ್ ಸೇನ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿದ್ದಾರೆ.
undefined
ಅರ್ಜಿಯ ಪ್ರಕಾರ, ದೂರುದಾರ ಅಜಯ್ ಕುಮಾರ್ ಸಿಂಗ್ ಅವರು 2017 ರಲ್ಲಿ ಹರ್ಮು ಹೌಸಿಂಗ್ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀಷಾರನ್ನು ಭೇಟಿಯಾದರು ಮತ್ತು ಚಲನಚಿತ್ರಗಳಲ್ಲಿ ಹೂಡಿಕೆ ಮಾಡುವ ಆಫರ್‌ ಪಡೆದರು ಎಂದು ಹೇಳಿದ್ದಾರೆ.
undefined
ಅಮೀಷಾ ಅವರ ದೇಸಿ ಮ್ಯಾಜಿಕ್ ಚಿತ್ರದಲ್ಲಿ ಹೂಡಿಕೆ ಮಾಡಲು ಅಜಯ್‌ ಕುಮಾರ್‌ ನಟಿಯ ಬ್ಯಾಂಕ್ ಖಾತೆಗೆ 2.5 ಕೋಟಿ ರೂ. ನೀಡಿದ್ದಾರೆ ಎಂದು ಹೇಳಲಾಗಿದೆ.
undefined
ಆದರೆ ನಟಿ ಒಪ್ಪಿದಂತೆ ಚಿತ್ರದಲ್ಲಿ ಮುಂದುವರಿಯಲಿಲ್ಲ ಮತ್ತು ಹಣವನ್ನು ಹಿಂದಿರುಗಿಸಲಿಲ್ಲ ಎಂದು ಅಜಯ್ ಕುಮಾರ್ ಸಿಂಗ್ ಹೇಳಿದರು.
undefined
ದೇಸಿ ಮ್ಯಾಜಿಕ್ ಅನ್ನು ನಿಲ್ಲಿಸಿದ್ದರಿಂದ ಅವರು ತಮ್ಮ ಹಣವನ್ನು ಕೇಳಿದಾಗ, ಅಮೀಷಾ ಪರವಾಗಿ ನೀಡಲಾದ ಚೆಕ್ ಬ್ಯಾಂಕಿನಲ್ಲಿ ಬೌನ್ಸ್‌ ಆಗಿದೆ ಎಂದು ಅಜಯ್ ಹೇಳಿದ್ದಾರೆ.
undefined
ತಾನು ನಟಿಯಿಂದ ಮೋಸ ಹೋಗಿದ್ದೇನೆ ಎಂದು ಹೇಳಿದ ಅಜಯ್ ತನ್ನ ಹಣವನ್ನು ವಾಪಸ್ಸು ಪಡೆಯಲು ಮನವಿ ಸಲ್ಲಿಸಿದ್ದಾರೆ.
undefined
ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಎರಡೂ ಪಕ್ಷಗಳ ಹೇಳಿಕೆಗಳನ್ನು ಕೇಳಿ ಮುಂದಿನ ಎರಡು ವಾರಗಳಲ್ಲಿ ಲಿಖಿತ ಸ್ಪಷ್ಟೀಕರಣವನ್ನು ನೀಡುವಂತೆ ಕೇಳಿದೆ.
undefined

Latest Videos

click me!