ಬೈಕ್‌ನಲ್ಲಿ 'ಹಿಂದೂ' ಸ್ಟಿಕ್ಕರ್ ಹಾಕಿದ್ದಕ್ಕೆ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಟಿಕ್ಕರ್‌ನ ಬಗ್ಗೆ ಮಹಿಳೆ ಮತ್ತು ಬೈಕ್ ಸವಾರನ ನಡುವಿನ ಮಾತಿನ ಚಕಮಕಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಅಸಂಖ್ಯಾತ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದು ವಿಡಿಯೋಗಳು ಸಾಕಷ್ಟು ಚರ್ಚಗೆ ಒಳಗಾಗುತ್ತವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋದಲ್ಲಿ ಬೈಕ್ ಮೇಲೆ 'ಹಿಂದೂ' ಎಂಬ ಸ್ಟ್ರಿಕ್ಕರ್ ಹಾಕಿಸಿದ್ದಕ್ಕೆ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆ ಅಭಿಪ್ರಾಯ ಎಷ್ಟು ತಪ್ಪು ಮತ್ತು ಸರಿ ಎಂಬುದರ ಬಗ್ಗೆ ನೆಟ್ಟಿಗರು ಕಮೆಂಟ್ ಮೂಲಕ ಚರ್ಚೆ ಮಾಡುತ್ತಿದ್ದಾರೆ.
ರಸ್ತೆ ಬದಿ ಇಬ್ಬರು ಮಹಿಳೆಯರು ನಿಂತಿರುತ್ತಾರೆ. ಅಲ್ಲಿಗೆ ಬೈಕ್ ಸವಾರನೋರ್ವ ಬಂದು ನಿಲ್ಲುತ್ತಾನೆ. ಈ ವೇಳೆ ಬೈಕ್ ಮೇಲಿನ ಸ್ಟಿಕ್ಕರ್ ನೋಡಿ ಸವಾರನ ಬಳಿ ಬರುವ ಮಹಿಳೆ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇಷ್ಟು ಮಾತ್ರವಲ್ಲ ಸವಾರನಿಗೆ ಮಹಿಳೆ ಪಾಠ ಮಾಡುವಂತೆ ಮಾತನಾಡುತ್ತಾರೆ. @theskindoctor13 ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, 4 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. 1 ಸಾವಿರಕ್ಕೂ ಅಧಿಕ ಕಮೆಂಟ್ ಬಂದಿದ್ದು, ಮಹಿಳೆ ಹೇಳಿಕೆ ಬಗ್ಗೆ ಪರ-ವಿರೋಧದ ಚರ್ಚೆ ನಡೆಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ವಿಡಿಯೋದಲ್ಲಿ ಸವಾರನ ಬಳಿಗೆ ಬರುವ ಮಹಿಳೆ ಬೈಕ್ ಮೇಲೆ ಯಾಕೆ ಹಿಂದೂ ಎಂದು ಬರೆಸಿದ್ದೀಯಾ ಅಂತ ಪ್ರಶ್ನೆ ಮಾಡೋದು ಸ್ಪಷ್ಟವಾಗಿ ಕೇಳುತ್ತದೆ. ಇದಕ್ಕೆ ಸವಾರ, ಮೇಡಮ್ ನೀವು ಎಲ್ಲಿಯವರು ಎಂದು ಪ್ರಶ್ನೆ ಮಾಡುತ್ತಾನೆ. ಆದ್ರೆ ಇದಕ್ಕೆ ಮಹಿಳೆ ಉತ್ತರ ನೀಡದೇ, ಹೇಳುತ್ತೇನೆ? ಯಾಕೆ ಈ ಸ್ಟಿಕ್ಕರ್ ಎಂದು ಮರು ಪ್ರಶ್ನೆ ಮಾಡುತ್ತಾರೆ.
ಇದನ್ನೂ ಓದಿ: ತನ್ನನ್ನು ಬೈಯ್ಯುವಂತೆ ಹೇಳಿದ ಪುಟಾಣಿಗೆ Alexa ಕೊಟ್ಟ ಉತ್ತರದ ವಿಡಿಯೋಗೆ 1 ಕೋಟಿ ವ್ಯೂವ್
undefined
ಸವಾರ ನಾನು ಹಿಂದೂ. ಅದಕ್ಕಾಗಿ ಈ ರೀತಿ ಬರೆಸಿಕೊಂಡಿದ್ದೇನೆ ಎನ್ನುತ್ತಾನೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ, ಯಾಕೆ ನಿಮ್ಮನ್ನು ನೀವು ಇಷ್ಟು ಸಂಕೋಚಿತಗೊಳಿಸುತ್ತಿರಿ. ಇದನ್ನು ಅಳಿಸಿ ಹಾಕಿ ಮೊದಲು ಒಳ್ಳೆಯ ಮನುಷ್ಯರಾಗಲು ಕಲಿತುಕೊಳ್ಳಿ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲವೂ ರಾಜಕೀಯಕ್ಕಾಗಿ ಮಾಡಲಾಗಿದೆ. ಇಷ್ಟೊಂದು ಹಿಂದೂ ಅಂತ ಕೂಗಿ ಹೇಳುವ ಅವಶ್ಯಕತೆ ಏನು? ದೇವರು ಇಷ್ಟು ಅಚ್ಚುಕಟ್ಟಾಗಿ ಎಲ್ಲವನ್ನು ಸೃಷ್ಟಿ ಮಾಡಿರುವಾಗ ನಿಮ್ಮ ಹಣೆ ಮೇಲೆ ಓಂ ಎಂದು ಬರೆಯೋದನ್ನು ಮರೆತನಾ? ನಿಮ್ಮನ್ನು ನೀವು ಸಂಕೋಚಿತಗೊಳಿಸುತ್ತಿದ್ದೀರಿ. ಯಾಕೆ ಈ ಸಂಕುಚಿತ ಭಾವನೆ. ನೀವು ಇಡೀ ವಿಶ್ವದ ಭಾಗವಾಗಿದ್ದೀರಿ ಎಂದು ಹೇಳುತ್ತಾರೆ.
ಮತ್ತೆ ಬೈಕ್ ಸವಾರ, ಮೇಡಮ್ ನೀವು ಎಲ್ಲಿಯವರು ಎಂದು ಕೇಳಿದಾಗ ಮಹಿಳೆ, ನಾನು ಸಹ ಹಿಂದೂ ಎಂದು ಕಾರ್ ಹತ್ತುತ್ತಾರೆ. ಬೈಕ್ ಸವಾರ ನಗುತ್ತಾ, ನೀವು ನನ್ನನ್ನು ಮತ್ತೊಮ್ಮೆ ಭೇಟಿಯಾದಾಗ ಈ ಸ್ಟಿಕ್ಕರ್ ಇರಲ್ಲ ಎಂದು ಹೇಳುತ್ತಾನೆ.
ಇದನ್ನೂ ಓದಿ: ಹೂ ಮಾರ್ತಿದ್ದ ಬಾಲಕನಿಗೆ ಸರ್ಪ್ರೈಸ್ ಕೊಟ್ಟ ಅಪರಿಚಿತ; ಮುಗಳ್ನಕ್ಕು ಭಾವುಕರಾದ ನೆಟ್ಟಿಗರು, ವಿಡಿಯೋ ನೋಡಿ
How would you have responded to this woman? pic.twitter.com/KdFiEmlpSf
— THE SKIN DOCTOR (@theskindoctor13)“ॐ is rich in meaning. The 3 curves represent the waking, dreaming and deep sleep states. The crescent signifies maya (illusion). It represents the essence of the universe and the interconnectedness of all existence.
Now Aunty plz mind your own business and get outta my face”