ಅಪ್ಪನ ಕೈ ಎಲ್ಲರ ಮುಂದೆ ಹಿಡ್ಕೊಂಡು ಹೋದ್ರೆ ಗ್ರೇಟ್ ಆಗೋದು ಹೇಗೆ, ಕರಿಶ್ಮಾ ಕಾಲೆಳೆದ ನೆಟ್ಟಿಗರು

Published : Dec 14, 2024, 11:30 AM ISTUpdated : Dec 14, 2024, 01:00 PM IST
ಅಪ್ಪನ ಕೈ ಎಲ್ಲರ ಮುಂದೆ ಹಿಡ್ಕೊಂಡು ಹೋದ್ರೆ ಗ್ರೇಟ್ ಆಗೋದು ಹೇಗೆ, ಕರಿಶ್ಮಾ ಕಾಲೆಳೆದ ನೆಟ್ಟಿಗರು

ಸಾರಾಂಶ

ರಾಜ್ ಕಪೂರ್‌ರ 100 ನೇ ಹುಟ್ಟುಹಬ್ಬವನ್ನು ಕಪೂರ್ ಕುಟುಂಬವು ಮುಂಬೈನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದೆ.  ಕಾರ್ಯಕ್ರಮಕ್ಕೆ ಕಪೂರ್‌ ಕಾಂದಾನ್‌ನ ಎಲ್ಲ ಸದಸ್ಯರು ಹಾಜರಾಗಿದ್ದಾರೆ.  ಕರಿಶ್ಮಾ ಕಪೂರ್ ತಂದೆ ರಣಧೀರ್‌ಗೆ ಸಹಾಯ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್‌ ಆಗಿದೆ. ಕರಿಶ್ಮಾ, ರಣಧೀರ್‌ ಕಪೂರ್‌ ಕೈ ಹಿಡಿದು ಬಂದಿದ್ದನ್ನು ಟ್ರೋಲ್‌ ಮಾಡಲಾಗಿದೆ. 

ಬಾಲಿವುಡ್ ದಿಗ್ಗಜ ರಾಜ್ ಕಪೂರ್ (Bollywood legend Raj Kapoor) 100ನೇ ಹುಟ್ಟುಹಬ್ಬವನ್ನು ಕಪೂರ್ ಕಾಂದಾನ್ (Kapoor Khandaan) ಸಂಭ್ರಮದಿಂದ ಆಚರಿಸುತ್ತಿದೆ. 1924 ಡಿಸೆಂಬರ್ 14ರಂದು ಜನಿಸಿದ್ದ ರಾಜ್ ಕಪೂರ್, ತಮ್ಮ ನಟನೆಯಿಂದ ಬಾಲಿವುಡ್ ಆಳಿದ್ದರು. ಅವರು ಜೂನ್ 2, 1988ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂದು ಅವರ 100ನೇ ಹುಟ್ಟುಹಬ್ಬ. ಕಪೂರ್ ಕುಟುಂಬಸ್ಥರು ಇದನ್ನು ವಿಜ್ರಂಭಣೆಯಿಂದ ಆಚರಿಸುತ್ತಿದ್ದಾರೆ. 

ಡಿಸೆಂಬರ್ 13 ರಿಂದ 15 ರವರೆಗೆ ಮುಂಬೈನ ಅಂಧೇರಿಯಲ್ಲಿರುವ ಪಿವಿಆರ್ ಇನ್ಫಿನಿಟಿ ಮಾಲ್‌ (PVR Infinity Mall)ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ರಾಜ್ ಕಪೂರ್ ಸಿನಿಮಾಗಳ ಸ್ಕ್ರೀನಿಂಗ್ ಕೂಡ ನಡೆಯುತ್ತಿದೆ.  ರಾಜ್ ಕಪೂರ್ ಅವರ 10 ಜನಪ್ರಿಯ ಚಿತ್ರಗಳು 40 ನಗರಗಳಲ್ಲಿ 135 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ. ಜನರು ಕೇವಲ 100 ರೂಪಾಯಿಗೆ ಈ ಚಿತ್ರಗಳನ್ನು ವೀಕ್ಷಿಸಬಹುದು. ಮೂರು ದಿನಗಳ ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಪೂರ್ ಕುಟುಂಬ ಆಹ್ವಾನಿಸಿದೆ. ಆದ್ರೆ ಮೋದಿ ಯಾವ ದಿನ ಕಾರ್ಯಕ್ರಮಕ್ಕೆ ಬರ್ತಾರೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ರಾಜ್ ಕಪೂರ್ ಬರ್ತ್ ಡೇ ಸಮಾರಂಭದ ಅನೇಕ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದ್ರಲ್ಲಿ ನಟಿ ಕರಿಶ್ಮಾ ಕಪೂರ್ (actress Karisma Kapoor) ವಿಡಿಯೋ ಒಂದು ಹೆಚ್ಚು ಸುದ್ದಿ ಮಾಡಿದೆ. ಈ ವಿಡಿಯೋದಲ್ಲಿ ಕರಿಶ್ಮಾ ಕಪೂರ್ ತಮ್ಮ ತಂದೆ ಬಾಲಿವುಡ್ ಹಿರಿಯ ನಟ ರಣಧೀರ್ ಕಪೂರ್ ಗೆ ಸಹಾಯ ಮಾಡ್ತಿದ್ದಾರೆ. 

100 ಕೋಟಿ ಮೌಲ್ಯದ ಸಲ್ಮಾನ್ ಖಾನ್ ಫ್ಲಾಟ್ ಒಳಗೆ ಹೇಗಿದೆ? ಫೋಟೋ ನೋಡಿ

ರಣಧೀರ್ ಕಪೂರ್ (Randhir Kapoor) ಗೆ ಈಗ 77 ವರ್ಷ ವಯಸ್ಸು. ಸರಿಯಾಗಿ ಓಡಾಡಲು ರಣಧೀರ್ಗೆ ಸಾಧ್ಯವಾಗ್ತಿಲ್ಲ. ಅವರಿಗೆ ಬೇರೆಯವರ ಸಹಾಯ ಬೇಕು. ಕಾರ್ಯಕ್ರಮಕ್ಕೆ ಬಂದ ರಣಧೀರ್ ಕಪೂರ್ ಗೆ ಮಗಳು  ಕರಿಶ್ಮಾ ಸಹಾಯ ಮಾಡಿದ್ದಾರೆ. ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದ ನಟಿ ಸುಸಂಸ್ಕೃತ ಮಗಳಂತೆ ಅಪ್ಪನ ಕೈ ಹಿಡಿದು ಎಲ್ಲರ ಮನ ಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ನೋಟ ಹಾಗೂ ವರ್ತನೆಯನ್ನು ನೆಟ್ಟಿಗರು ಚರ್ಚಿಸಿದ್ದಾರೆ. 

ಗ್ರೇಟ್ ಆಗ್ಬೇಕು ಅಂದ್ರೆ ಹೀಗೆಲ್ಲ ಮಾಡ್ಬೇಕು ಎಂದು ಕೆಲವರು ಕರಿಶ್ಮಾ ಕಪೂರ್ ಕಾಲೆಳೆದಿದ್ದಾರೆ. ಅಪ್ಪನಿಗೆ ಸಹಾಯ ಮಾಡಿದ್ದ, ಇಲ್ಲ ಪ್ರಸಿದ್ಧಿ ಪಡೆಯೋಕೆ ಕ್ಯಾಮರಾ ಮುಂದೆ ಫೋಸ್ ನೀಡಿದ್ದಾ ಎಂಬುದು ಕೆಲ ನೆಟ್ಟಿಗರ ಪ್ರಶ್ನೆ. ಮತ್ತೆ ಕೆಲವರು ಕರಿಶ್ಮಾ ಕೆಲಸವನ್ನು ಮೆಚ್ಚಿದ್ದಾರೆ. ಇಳಿ ವಯಸ್ಸಿನಲ್ಲಿ ಮಕ್ಕಳ ಸಹಾಯ ಅವಶ್ಯಕ. ಎಲ್ಲ ಪಾಲಕರು, ಕರಿಶ್ಮಾರಂತ ಮಗಳನ್ನು ಬಯಸ್ತಾರೆ ಎಂದು ನೆಟ್ಟಿಗರು ಹೇಳಿದ್ದಾರೆ.

ಈವೆಂಟ್‌ನಲ್ಲಿ ರಣಧೀರ್ ಕಪೂರ್ ಸೇರಿದಂತೆ ಎಲ್ಲ ಕಪೂರ್ ಕುಟುಂಬಸ್ಥರು ಮಿಂಚಿದ್ದಾರೆ. ಕರಿಶ್ಮಾ ಕಪೂರ್ ತಮ್ಮ ಡ್ರೆಸ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಕಾಟನ್ ಸಿಲ್ಕ್ ಸೀರೆಯುಟ್ಟಿದ್ದರು. ಬಿಳಿಯ ಬೋಟ್ ನೆಕ್  ಬ್ಲೌಸ್ ಅವರ ಸೌಂದರ್ಯ ಹೆಚ್ಚಿಸಿತ್ತು. ಮುತ್ತಿನ ಚೋಕರ್, ಗೋಲ್ಡನ್ ಡ್ರಾಪ್ ಕಿವಿಯೋಲೆ ಹಾಕಿದ್ದ ಅವರು ಒಂದು ಕೈನಲ್ಲಿ ಬಿಳಿ ಕ್ಲಚ್ ಹಿಡಿದಿದ್ದರೆ. ಇನ್ನೊಂದು ಕೈನಲ್ಲಿ ತಂದೆ ರಣಧೀರ್ ಕಪೂರ್ ಕೈ ಹಿಡಿದಿದ್ದರು.

ಗಂಡ ಹೆಸರು ಯಶ್ ಬದಲು ನವೀನ್‌ ಎಂದು ಕರೆದಿದ್ದಕ್ಕೆ ಗರಂ ಆದ ರಾಧಿಕಾ ಪಂಡಿತ್;ವಿಡಿಯೋ

ಇನ್ನು ರಣಧೀರ್ ಕಪೂರ್ ಯಾರಿಗೇನು ಕಮ್ಮಿ ಇರಲಿಲ್ಲ. ಅವರು ಸಂಪೂರ್ಣ ಕಪ್ಪು ಉಡುಪಿನಲ್ಲಿದ್ದರು. ರಣಧೀರ್ ಕಪೂರ್, ಕಪ್ಪು ಕುರ್ತಾ-ಪೈಜಾಮಾದ ಮೇಲೆ ಗೋಲ್ಡನ್ ಬಟನ್‌ಗಳೊಂದಿಗೆ ಕಪ್ಪು ಜಾಕೆಟ್ ಧರಿಸಿದ್ದರು. ಅದರ ಮೇಲೆ ಕೆಂಪು ಬಣ್ಣದ ಸ್ಕಾರ್ಫ್ ಧರಿಸಿದ್ದರು. ಕರೀನಾ ಕಪೂರ್, ಸೈಫ್ ಅಲಿ ಖಾನ್, ಆಲಿಯಾ ಭಟ್, ರಣಬೀರ್ ಕಪೂರ್ ಸೇರಿದಂತೆ, ಕಪೂರ್ ಕುಟುಂಬಕ್ಕೆ ಸಂಬಂಧಿಸಿದ ಅನೇಕು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ