ಜೈಲಿನಿಂದ ಮನೆಗೆ ಬಂದ ಅಲ್ಲು ಅರ್ಜುನ್ ಭಾವುಕ! ನಟನ ಫಸ್ಟ್‌ ರಿಯಾಕ್ಷನ್

Dec 14, 2024, 12:26 PM IST

ಪುಷ್ಪಾ 2 ಸಿನಿಮಾ ಪ್ರಿಮೀಯರ್ ನಲ್ಲಿಸಂಧ್ಯಾ ಥೇಟರ್ ಬಳಿ ನಡೆದ ಕಾಲ್ತುಳಿತಕ್ಕೆ ರೇವತಿ ಹೆಸರಿನ ಮಹಿಳೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾಹ್ನ ಅರೆಸ್ಟ್ ಅಗಿದ್ದ ತೆಲುಗು ನಟ ಅಲ್ಲು ಅರ್ಜುನ್ ಅವರು ಇಂದು ಶನಿವಾರ ಬೆಳಗ್ಗೆ ಬಿಡುಗಡೆಯಾಗಿದ್ದಾರೆ.4 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇನ್ನು ಪೋಲೀಸ್ ಠಾಣೆಯಿಂದ ಬಿಡುಗಡೆಯಾಗಿ  ಮನೆಗೆ ಬಂದಾಗ ಅತ್ಯಂತ ಭಾವುಕ ಸನ್ನಿವೇಶವೊಂದು ನಿರ್ಮಾಣವಾಗಿತ್ತು. ಬಿಡುಗಡೆಗೊಂಡ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ನಟ, ಪ್ರೀತಿ ಹಾಗೂ ಬಂಬಲ ತೋರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನ್ನ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಆರಾಮಗಿದ್ದೇನೆ. ಆ ಬಗ್ಗೆ ಚಿಂತಿಸುವುದು ಬೇಡ. ನಾನು ಕಾನೂನನ್ನು ಗೌರವಿಸುತ್ತೇನೆ ಹಾಗೂ ತನಿಖೆಗೆ ಸಹಕರಿಸುತ್ತೇನೆ ಎಂದು ಹೇಳಿದರು.