ಕಾರ್ತಿಕ್ ಆರ್ಯನ್ ಹಾಗೂ ಆಲಿಯಾ ಭಟ್ ಒಟ್ಟಿಗೆ ಕಾಣಿಸಿಕೊಂಡು ಮತ್ತೆ ಸುದ್ದಿ ಮಾಡಿದ್ದಾರೆ. ರಾಜ್ ಕಪೂರ್ ಬರ್ತ್ ಡೇ ಸಮಾರಂಭದಲ್ಲಿ ಇವರನ್ನು ನೋಡಿದ ಅಭಿಮಾನಿಗಳು ಸಿನಿಮಾ ನಿರೀಕ್ಷೆ ಮಾಡ್ತಿದ್ದಾರೆ.
ಬಾಲಿವುಡ್ (Bollywood) ಪ್ರಸಿದ್ಧ ನಟಿ ಆಲಿಯಾ ಭಟ್ (actress Alia Bhatt ) ಹಾಗೂ ನಟ ಕಾರ್ತಿಕ್ ಆರ್ಯನ್ (Kartik Aaryan) ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಲ್ಲಿ ಇಲ್ಲಿ ಸಮಾರಂಭಗಳಲ್ಲಿ ಅವರಿಬ್ಬರು ಒಟ್ಟಿಗೆ ನೋಡಿದಾಗೆಲ್ಲ ಹೊಸ ಸಿನಿಮಾ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದೇ ಫ್ಯಾನ್ಸ್ ಭಾವಿಸ್ತಾರೆ. ಭೂಲ್ ಭೂಲೈಯಾ 3 ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಕಾರ್ತಿಕ್ ಆರ್ಯನ್ ನಟನೆ ಅಧ್ಬುತವಾಗಿದೆ. ಇತ್ತ ಆಲಿಯಾ ಭಟ್ ಯಾರಿಗೂ ಕಡಿಮೆ ಏನಿಲ್ಲ. ಅವರಿಬ್ಬರ ಕೆಮೆಸ್ಟ್ರಿ ಮ್ಯಾಚ್ ಆಗುತ್ತೆ, ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ಬೇಕು ಎಂಬುದು ಫ್ಯಾನ್ಸ್ ಆಶಯ. ಈ ಮಧ್ಯೆ ಮತ್ತೊಮ್ಮೆ ಆಲಿಯಾ ಭಟ್ ಹಾಗೂ ಕಾರ್ತಿಕ್ ಆರ್ಯನ್ ಒಟ್ಟಿಗೆ ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ.
ರಾಜ್ ಕಪೂರ್ (Raj Kapoor) 100ನೇ ವರ್ಷದ ಹುಟ್ಟುಹಬ್ಬ ಸಮಾರಂಭದಲ್ಲಿ ಆಲಿಯಾ ಭಟ್ ಹಾಗೂ ಕಾರ್ತಿಕ್ ಆರ್ಯನ್ ನಿಂತು ಮಾತನಾಡ್ತಿರೋದನ್ನು ನೋಡ್ಬಹುದು. ಅವರಿಬ್ಬರ ಮಧ್ಯೆ ಆಳವಾದ ಮಾತುಕತೆ ನಡೆಯುತ್ತಿದೆ. ಆದ್ರೆ ಮಾತನಾಡ್ತಾ ಆಲಿಯಾ, ಕಾರ್ತಿಕ್ ಅವರನ್ನು ನೋಡುವ ನೋಟ ನೆಟ್ಟಿಗರಿಗೆ ಸ್ವಲ್ಪ ಭಿನ್ನವಾಗಿ ಕಾಣಿಸಿದೆ. ಕಾರ್ತಿಕ್ ಅವರ ಹತ್ತಿರಕ್ಕೆ ಹೋಗುವ ಆಲಿಯಾ, ತುಟಿ ಸವರುತ್ತಾರೆ. ಇದು ಮಾತಿನ ಮಧ್ಯೆ ನಡೆದಿದ್ದಾದ್ರೂ ಫ್ಯಾನ್ಸ್ ಮಾತ್ರ ಅದಕ್ಕೆ ಬೇರೆ ಅರ್ಥ ನೀಡ್ತಿದ್ದಾರೆ. ಆಲಿಯಾ, ಕಾರ್ತಿಕ್ ಜೊತೆ ಮಾತನಾಡ್ತಿರೋದನ್ನು ನೋಡಿದ್ರೆ, ಈಗ್ಲೇ ಕಿಸ್ ಕೊಡ್ತಾರೇನೋ ಅನ್ನಿಸುತ್ತಿದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಅವರ ವರ್ತನೆ ಹಾಗೇ ಇದೆ ಎಂದು ಇನ್ನೊಬ್ಬರು ಕಮೆಂಟ್ ಗೆ ಬೆಂಬಲ ನೀಡಿದ್ದಾರೆ. ಇದನ್ನು ರಣಬೀರ್ ಕಪೂರ್ ನೋಡಿದ್ರೆ ಕಥೆ ಮುಗಿತು ಎಂದು ಕಾಲೆಳೆದಿದ್ದಾರೆ ಫ್ಯಾನ್ಸ್.
ಅಪ್ಪನ ಕೈ ಎಲ್ಲರ ಮುಂದೆ ಹಿಡ್ಕೊಂಡು ಹೋದ್ರೆ ಗ್ರೇಟ್ ಆಗೋದು ಹೇಗೆ, ಕರಿಶ್ಮಾ ಕಾಲೆಳೆದ
ಬಹುತೇಕ ಬಳಕೆದಾರರು ಕಾರ್ತಿಕ್ ಹಾಗೂ ಆಲಿಯಾರನ್ನು ಒಟ್ಟಿಗೆ ಸಿನಿಮಾದಲ್ಲಿ ನೋಡಲು ಬಯಸಿದ್ದಾರೆ. ಕಾರ್ತಿಕ್ ಮಾತಿಗೆ ಆಲಿಯಾ ಮನಸ್ಪೂರ್ವಕವಾಗಿ ನಗ್ತಾರೆ. ಇದನ್ನು ನೋಡಿದ ಅಭಿಮಾನಿಗಳು, ಆನ್ ಸ್ಕ್ರೀನ್ ನಲ್ಲಿ ಇವರ ರೋಮ್ಯಾನ್ಸ್ ನೋಡುವ ಬಯಕೆ ಇದೆ ಎಂದಿದ್ದಾರೆ. ವಿಡಿಯೋ ಹಿಂದೆ ಕುಚ್ ಕುಚ್ ಹೋತಾ ಹೈ ಸಾಂಗ್ ಬರ್ತಿದ್ದು, ಕುಚ್ ಕುಚ್ ಹೋತಾ ಹೈ 2 ಗೆ ಇವರಿಬ್ಬರು ಪರ್ಫೆಕ್ಟ್ ಎನ್ನುತ್ತಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಆಲಿಯಾ ಮತ್ತು ಕಾರ್ತಿಕ್ ಒಟ್ಟಿಗೆ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಇತ್ತು. ಸಂದರ್ಶನವೊಂದರಲ್ಲಿ ಕಾರ್ತಿಕ್, ಆಲಿಯಾರನ್ನು ಹೊಗಳಿದ್ದಲ್ಲದೆ, ಅವರ ಜೊತೆ ನಟನೆ ಮಾಡುವ ಆಸೆ ಕೂಡ ವ್ಯಕ್ತಪಡಿಸಿದ್ದರು. ಗಂಗೂಬಾಯಿ ಸಿನಿಮಾದಲ್ಲಿ ಆಲಿಯಾ ನಟನೆಯನ್ನು ಮೆಚ್ಚಿಕೊಂಡಿರುವ ಕಾರ್ತಿಕ್ ಆರ್ಯನ್, ಗಂಗೂಬಾಯಿ ಕಾಠಿವಾಡಿ ನೋಡಿದ ನಂತರ ನಾನು ಆಲಿಯಾ ಭಟ್ ಅವರ ಅಭಿಮಾನಿಯಾಗಿದ್ದೇನೆ ಎಂದಿದ್ದರು.
undefined
ಸಕ್ಸಸ್ ಸಂಭ್ರಮದಲ್ಲಿದ್ದ ಅಲ್ಲು ಅರ್ಜುನ್ಗೆ ಖಾಕಿ ಶಾಕ್: ಮಧ್ಯಂತರ ಬೇಲ್ ಸಿಕ್ಕಿದ್ದಕ್ಕೆ ಪುಷ್ಪರಾಜ್ ಬಚಾವ್!
ಕಾರ್ತಿಕ್ ಆರ್ಯನ್ ಈ ವರ್ಷ ಎರಡು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಭೂಲ್ ಭೂಲೈಯಾ 3 ಹಾಗೂ ಚಂದು ಚಾಂಪಿಯನ್ ಯಶಸ್ಸಿನ ನಂತ್ರ ಕಾರ್ತಿಕ್ ಆರ್ಯನ್ ಗೆ ಬೇಡಿಕೆ ಹೆಚ್ಚಾಗಿದೆ. ಐದೇ ವರ್ಷದಲ್ಲಿ ಕಾರ್ತಿಕ್ ಆರ್ಯನ್ ಯಶಸ್ಸಿನ ತುತ್ತ ತುದಿಯಲ್ಲಿದ್ದಾರೆ. ಇನ್ನು ಆಲಿಯಾ ಭಟ್ ಮಗುವಾದ್ಮೇಲೂ ಸಿನಿಮಾಕ್ಕೆ ಬ್ರೇಕ್ ಪಡೆದಿಲ್ಲ. ಒಂದಾದ್ಮೇಲೆ ಒಂದು ಸಿನಿಮಾ ಬರ್ತಾನೇ ಇದೆ. ಈ ವರ್ಷ ಅವರ ಜಿಗರ್ ತೆರೆಗೆ ಬಂದಿದೆ. ಆಲಿಯಾ ಕೈನಲ್ಲಿ ಇನ್ನೊಂದಿಷ್ಟು ಆಫರ್ ಇದೆ.ಸದ್ಯ ಆಲಿಯಾ, ರಾಜ್ ಕಪೂರ್ ಬರ್ತ್ ಡೇ ಸಮಾರಂಭದಲ್ಲಿ ಬ್ಯುಸಿಯಿದ್ದಾರೆ. ರಣಬೀರ್ ಕಪೂರ್ ಜೊತೆ ಆಲಿಯಾ ಸೀರೆಯಲ್ಲಿ ಮಿಂಚಿದ್ದಾರೆ. ಅವರ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.