
ಹೈದರಾಬಾದ್(ಡಿ.13) ಪುಷ್ಪಾ2 ಚಿತ್ರದ ಯಶಸ್ಸಿನಲ್ಲೇ ಅಲ್ಲು ಅರ್ಜುನ್ ಬಂಧನ ಹಾಗೂ ಜಾಮೀನು ಪ್ರಕರಣ ತೆಲಂಗಾಣದಲ್ಲಿ ಭಾರಿ ಕೋಲಾಹಲ ಸೃಷ್ಟಿದೆ. ಕಾಲ್ತುಳಿತಕ್ಕೆ ಬಲಿಯಾದ ಮಹಿಳಾ ಅಭಿಮಾನಿ ಪ್ರಕರಣದಡಿ ಅರೆಸ್ಟ್ ಆಗಿದ್ದ ಅಲ್ಲು ಅರ್ಜುನ್‌ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ ಸಂಪೂರ್ಣ ಘಟನೆ ಅಲ್ಲು ಅರ್ಜುನ್ ಪುಷ್ಪಾ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣಗೆ ತೀವ್ರ ಆಘಾತ ತಂದಿದೆ. ಘಟನೆ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಹಾರ್ಟ್ ಬ್ರೇಕ್ ಆಗಿದೆ ಎಂದಿದ್ದಾರೆ.
ಅಲ್ಲು ಅರ್ಜುನ್ ಬಂಧನ ಪ್ರಕರಣದ ಕುರಿತು ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಘಟನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನೀನು ನೋಡುತ್ತಿರುವ ದೃಶ್ಯ ಹಾಗೂ ಘಟನೆಯನ್ನು ನಂಬಲು ಸಾಧ್ಯವಾಗುತ್ತಿಲ್ಲ.ಥಿಯೇಟರ್ ಬಳಿ ನಡೆದಿರುವ ಘಟನೆ ದುರದೃಷ್ಟಕರ, ಜೊತೆಗೆ ತೀವ್ರ ನೋವು ತರಿಸಿದ ಘಟನೆಯಾಗಿದೆ. ಆದರೆ ಇಡೀ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ, ಆರೋಪ ಮಾಡುತ್ತಿರುವುದು ತೀವ್ರ ಬೇಸರ ತರಿಸಿದೆ. ಎರಡೂ ಘಟನೆಗಳು ನಂಬಲು ಸಾಧ್ಯವಾಗದ ಹಾಗೂ ಹೃದಯವಿದ್ರಾವಕ ಘಟನೆಯಾಗಿದೆ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್ ಹಾಕಿದ್ದಾರೆ.
ನಟ ಅಲ್ಲು ಅರ್ಜುನ್‌ಗೆ ಜಾಮೀನು ಮಂಜೂರು,ಪುಷ್ಪಾ2 ಹೀರೋಗೆ ರಿಲೀಫ್ ಕೊಟ್ಟ ಹೈಕೋರ್ಟ್!
ರಶ್ಮಿಕಾ ಮಂದಣ್ಣ ಎರಡು ಘಟನೆಗಳ ಕುರಿತು ಆಘಾತ ಹಾಗೂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಎರಡು ಘಟನೆಗಳ ಪೈಕಿ ಮೊದಲ ಘಟನೆ ಥಿಯೇಟರ್‌ನಲ್ಲಿ ನಡೆದ ಮಹಿಳಾ ಅಭಿಮಾನಿ ಸಾವು ಪ್ರಕರಣ. ಹೈದರಾಬಾದ್ ನಗರದ ಸಂಧ್ಯಾ ಚಲನಚಿತ್ರ ಮಂದಿರದಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ಈ ಘಟನೆ ನಡೆದಿತ್ತು. ಡಿಸೆಂಬರ್ 4ರಂದು ಪುಷ್ಪಾ 2 ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಮಧ್ಯರಾತ್ರಿ ಈ ಶೋ ಏರ್ಪಡಿಸಲಾಗಿತ್ತು. ಆದರೆ ಶೋ ನಡೆಯುತ್ತಿದ್ದ ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ದಿಢೀರ್ ಭೇಟಿ ನೀಡಿದ್ದು ಅಭಿಮಾನಿಗಳ ನೂಕು ನುಗ್ಗಲಿಗೆ ಕಾರಣವಾಗಿತ್ತು. ಅಲ್ಲು ಅರ್ಜುನ್ ಭೇಟಿಯಿಂದ ಅಭಿಮಾನಿಗಳು ನಟನ ನೋಡಲು ಮುಗಿಬಿದ್ದಿದ್ದರು. ಇದರಿಂದ ಕಾಲ್ತುಳಿತ ಸಂಭವಿಸಿತ್ತು. ಈ ವೇಳೆ ಕುಟುಂಬ ಸಮೇತ ಚಿತ್ರ ನೋಡಲು ಆಗಮಿಸಿದ ಮಹಿಳಾ ಅಭಿಮಾನಿ ರವತಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದರು. ರೇವತಿ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು.
ರಶ್ಮಿಕಾ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ ಎರಡನೇ ಘಟನೆ, ಅಲ್ಲು ಅರ್ಜುನ್ ಬಂಧನ ಪ್ರಕರಣ. ಹೈದರಾಬಾದ್ ಪೊಲೀಸರು ಅಭಿಮಾನಿ ಸಾವು ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅರೆಸ್ಟ್ ಮಾಡಿದ್ದರು. ವಿಚಾರಣೆಗಾಗಿ ಪೊಲೀಸರು ನೇರವಾಗಿ ಅಲ್ಲು ಅರ್ಜುನ್ ಮನೆಗೆ ಆಗಮಿಸಿ ಬಂಧಿಸಿದ್ದರು. ಈ ಎರಡು ಘಟನೆಗಳು ತೀವ್ರ ನೋವುಂಟು ಮಾಡಿದೆ ಎಂದು ರಶ್ಮಿಕಾ ಮಂದಣ್ಣ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಬಂಧನ ಹಾಗೂ ನಡೆದುಕೊಂಡ ರೀತಿ ಕುರಿತು ಸ್ವತಃ ಅಲ್ಲು ಅರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಪೊಲೀಸರಿಗೆ ಬಂಧಿಸುವ ಅಧಿಕಾರವಿದೆ. ಕಾನೂನು ರೀತಿಯ ಕ್ರಮಕೈಗೊಳ್ಳಲಿ. ಆದರೆ ಪೊಲೀಸರು ನೇರವಾಗಿ ನನ್ನ ಬೆಡ್‌ರೂಂಗೆ ನುಗ್ಗಿ ಬಂಧಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ಬಟ್ಟೆ ಬದಲಿಸಲು ಅವಕಾಶ ನೀಡಲಿಲ್ಲ. ಇದು ಸರಿಯಲ್ಲ. ಪೊಲೀಸರ ತನಿಖೆಗೆ ನಾನು ಸಹಕರಿಸುತ್ತೇನೆ. ಘಟನೆಯ ವಿಚಾರಣೆ, ತನಿಖೆಗೆ ಎಲ್ಲಾ ಸಹಕಾರ ನೀಡುತ್ತೇನೆ. ಆದರೆ ಬಂಧನದ ವೇಳೆ ಪೊಲೀಸರು ತೋರಿದ ನಡೆ ಸರಿಯಲ್ಲ ಎಂದು ಅಲ್ಲು ಅರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲು ಅರ್ಜುನ್ ಬಂಧನ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ರಾಜಕೀಯ ಪ್ರೇರಿತ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಬಂಧನ ಹಿಂದೆ ರಾಜಕೀಯವಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.