MM ಕಲ್ಬುರ್ಗಿ ಹತ್ಯೆ : ಆರೋಪಿಗಳು ಕೋರ್ಟ್‌ಗೆ ಹಾಜರು, ಓರ್ವ ಗೈರು

By Web DeskFirst Published Oct 17, 2019, 3:21 PM IST
Highlights

ಸಂಶೋಧಕ ಡಾ‌. ಎಂ.ಎಂ‌. ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳು ಕೋರ್ಟ್‌ಗೆ| ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಇದೇ ಮೊದಲ ಬಾರಿಗೆ ಆರೋಪಿಗಳು ಧಾರವಾಡ ಜಿಲ್ಲಾ ಕೋರ್ಟ್‌ಗೆ ಹಾಜರು| ಆರು ಆರೋಪಿಗಳ ಪೈಕಿ ಐವರನ್ನು ಕೋರ್ಟ್‌ಗೆ ಕರೆತಂದ ಪೊಲೀಸರು| ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ| ಆಗಸ್ಟ್ 17ರಂದು ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದ ಎಸ್.ಐ.ಟಿ.

ಧಾರವಾಡ, (ಅ.17):  ಸಂಶೋಧಕ ಡಾ‌. ಎಂ.ಎಂ‌. ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗಳಾದ ಗಣೇಶ ಮಿಸ್ಕಿನ್, ಅಮಿತ್ ಬದ್ದಿ, ಪ್ರವೀಣ ಚತುರ, ವಾಸುದೇವ ಸೂರ್ಯವಂಶಿ, ಶರದ ಕಳಾಸ್ಕರ್ ಎನ್ನುವರನ್ನು ಪೊಲೀಸರು ಇಂದು (ಗುರುವಾರ) ನ್ಯಾಯಾಲಕ್ಕೆ ಹಾಜರುಪಡಿಸಿದರು.

ಕಲಬುರ್ಗಿ ಹತ್ಯೆ ತನಿಖೆ ಪೂರ್ಣ: ಗೌರಿ ಹತ್ಯೆ ಮಾಡಿದವನೇ A1 ಆರೋಪಿ

ಎಂ.ಎಂ‌. ಕಲಬುರ್ಗಿ ಹತ್ಯೆ ಪ್ರಕರಣದ ಚಾರ್ಜ್ ಶೀಟ್  ಸಲ್ಲಿಕೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

ಆಗಸ್ಟ್ 17ರಂದು ಎಸ್.ಐ.ಟಿ. ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಈ ಹಿನ್ನೆಲೆ ಚಾರ್ಜ್‌ಶೀಟ್‌ ಸಲ್ಲಿಕೆ ಬಳಿಕ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಗೌರಿ ಹಂತಕರ ಪೈಕಿ ನಾಲ್ವರು ಕಲ್ಬುರ್ಗಿ ಹಂತಕರು

 ಮುಂಬೈ ಮತ್ತು ಧಾರವಾಡ ಜೈಲಿನಲ್ಲಿದ್ದ ಆರು ಆರೋಪಿಗಳ ಪೈಕಿ ಐವರನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಒಬ್ಬ ಆರೋಪಿ ಗೈರಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿರೋ ಆರೋಪಿ ಅಮೋಲ್ ಕಾಳೆ ಗೈರು ಹಾಜರಾಗಿದ್ದಾನೆ.

2015ರ ಆ.30 ರಂದು ಧಾರವಾಡ ಕಲ್ಬುರ್ಗಿ ಅವರ ನಿವಾಸಕ್ಕೆ ವಿದ್ಯಾರ್ಥಿಗಳ ಸೋಗಿನಲ್ಲಿ ಬಂದ ಇಬ್ಬರು ಅವರ ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಬಳಿಕ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. 

click me!