ಕಲಬುರ್ಗಿ ಹತ್ಯೆ ತನಿಖೆ ಪೂರ್ಣ: ಗೌರಿ ಹತ್ಯೆ ಮಾಡಿದವನೇ A1 ಆರೋಪಿ
ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆಯ ತನಿಖೆ ಪೂರ್ಣ| ನ್ಯಾಯಾಲಯಕ್ಕೆ 1600 ಕ್ಕೂ ಹೆಚ್ಚು ಪುಟಗಳ ಚಾರ್ಚ್ ಶೀಟ್ ಸಲ್ಲಿಸಿದ ಎಸ್‌ಐಟಿ ಅಧಿಕಾರಿಗಳು| ಆರು ಜನ ಆರೋಪಿಗಳ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಕೆ.
ಧಾರವಾಡ, (ಆ.17): ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ತನಿಖೆ ಪೂರ್ಣವಾಗಿದ್ದು, 1600ಕ್ಕೂ ಹೆಚ್ಚು ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಸಂಶೋಧಕ ಕಲ್ಬುರ್ಗಿ ಹಂತಕನ ಗುರುತು ಪತ್ತೆ, ಗೌರಿ ಹತ್ಯೆಗೂ ಲಿಂಕ್
ಎಸ್‌ಐಟಿ ಅಧಿಕಾರಿಗಳು ಇಂದು (ಶನಿವಾರ) ಧಾರವಾಡ 3ನೇ ಹೆಚ್ಚುವರಿ ಜೆಎಂಎಸಿ ನ್ಯಾಯಾಲಯಕ್ಕೆ 600ಕ್ಕೂ ಹೆಚ್ಚು ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಮೊದಲ ಆರೋಪಿಯಾಗಿದ್ದ ಅಮೋಲ್ ಕಾಳೆ, ಕಲಬುರ್ಗಿ ಹತ್ಯೆಯಲ್ಲೂ ಎ1 ಆರೋಪಿ ಎಂದು ಜಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಗೌರಿ ಹಂತಕರ ಪೈಕಿ ನಾಲ್ವರು ಕಲ್ಬುರ್ಗಿ ಹಂತಕರು
ಅಮೋಲ್ ಕಾಳೆ ಸೇರಿದಂತೆ 6 ಜನ ಆರೋಪಿಗಳ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಕಲ್ಬುರ್ಗಿ ಹತ್ಯೆಯಲ್ಲಿ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ಪ್ರವೀಣ್ ಚತುರ್, ಅಮಿತ್ ಬದ್ದಿ, ವಾಸುದೇವ್, ಶರದ್ ಆರು ಮಂದಿ ಆರೋಪಿಗಳ ಪಾತ್ರದ ಬಗ್ಗೆ ಸಾಬೀತಾಗಿದ್ದು, ಇವರ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ದೇವರ ಮೇಲೆ ಮೂತ್ರ ಮಾಡುವುದಾಗಿ ಕಲ್ಬುರ್ಗಿ ನೀಡಿದ್ದ ಹೇಳಿಕೆಯೇ ಹತ್ಯೆಗೆ ಕಾರಣ ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ.
ಒಳಸಂಚು ಮತ್ತು ಹತ್ಯೆ
2015 ರಲ್ಲಿ ಧರ್ಮ ರಕ್ಷಿಸುವ ಕೆಲಸ ಮಾಡುವ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರಮುಖ ಸಭೆ ನಡೆದಿತ್ತು. ಆ ಸಭೆಯಲ್ಲಿ ಅಮೋಲ್ ಕಾಳೆ, ಪ್ರವೀಣ್, ಗಣೇಶ್ ಮಿಸ್ಕಿನ್, ಅಮಿತ್ ಬುದ್ಧಿ ಸೇರಿದ್ದರು. ಈ ವೇಳೆ ಸಾಹಿತಿ ಕಲ್ಬುರ್ಗಿ ದೇವರ ಮೇಲೆ ಮೂತ್ರ ಮಾಡುವ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದ ಗಣೇಶ್ ಮಿಸ್ಕಿನ್. ಕಲ್ಬುರ್ಗಿ ಪೂರ್ವಾಪರ , ಚಲನವಲನ, ಹೇಳಿಕೆ ಸಂಗ್ರಹಿಸುವಂತೆ ಸೂಚನೆ ನೀಡಲಾಗಿದೆ. 3 ತಿಂಗಳು ಎಂ.ಎಂ.ಕಲ್ಬುರ್ಗಿ ಬಗ್ಗೆ ಸರ್ವೆ ಮಾಡಿ ರಿಪೋರ್ಟ್ ಕೊಟ್ಟಿದ್ದ ಗಣೇಶ್. ಬಳಿಕ ಅಮೋಲ್ ಕಾಳೆ ಕೂಡ ಕಲ್ಬುರ್ಗಿ ಹೇಳಿಕೆಗಳನ್ನು ಸಂಗ್ರಹಿಸಿದ್ದ. ನಂತರ ಸೂರ್ಯ ವಂಶಿಗೆ ಬೈಕ್ ಕದ್ದು ತರುವಂತೆ ಹೇಳಿದ್ದ. ಅದರಂತೆ ಸೂರ್ಯವಂಶಿ ಹುಬ್ಬಳಿಯಲ್ಲಿ ಬೈಕ್ ಕದ್ದು ತಂದಿದ್ದ. ಅದೇ ಬೈಕ್ ಬಳಸಿದ ಹಂತಕರು ಕಲ್ಬುರ್ಗಿ ಹತ್ಯೆ ಮಾಡಿದ್ದರು. ಈ ಎಲ್ಲಾ ವಿಷಯಗಳನ್ನು ಎಸ್‌ಐಟಿ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
2015ರ ಆಗಸ್ಟ್ 30ರಂದು ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ಮನೆಗೆ ಆಗಮಿಸಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಪ್ರಕರಣದ ತನಿಖೆಯನ್ನು ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಐಟಿಗೆ ವಹಿಸಲಾಗಿತ್ತು.