ಪ್ರಜ್ವಲ್ ರೇವಣ್ಣನ ಪ್ರಕರಣದಲ್ಲಿ ಜೋಶಿಯವರ ನಿಲವು ಏನು..?, ಮೋದಿ ಮತ್ತು ಶಾ ಅವರಿಗೆ ಮೊದಲೇ ಈ ವಿಷಯ ಗೊತ್ತಿತ್ತು. ಗೊತ್ತಿದ್ದರೂ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ, ಅವರ ಪರವಾಗಿ ಮೋದಿ ಬಂದು ಪ್ರಚಾರ ಮಾಡಿದರು. ಅಮಿತ್ ಶಾ ನೇಹಾಳ ಮನೆಗೆ ಭೇಟಿ ಕೊಟ್ಟರೇ ಅದು ರಾಜಕೀಯ ಲಾಭಕ್ಕಾಗಿ ಎಂದು ಕಿಡಿ ಕಾರಿದ ಸಚಿವ ದಿನೇಶ್ ಗುಂಡೂರಾವ್
ಹುಬ್ಬಳ್ಳಿ(ಏ.30): ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಪ್ರಜ್ವಲ್ ರೇವಣ್ಣವರ ವಿಷಯದಲ್ಲಿ ಬಿಜೆಪಿ ಏನು ಮಾಡುತ್ತಿದೆ?. ನಿನ್ನೆ ಮೋದಿಯವರು, ಇಂದು ಅಮಿತ್ ಶಾ ಅವರು ಕರ್ನಾಟಕದಲ್ಲೇ ಇದ್ದಾರೆ. ಈ ಪ್ರಕರಣವನ್ನ ಅವರು ಏಕೆ ಖಂಡಿಸುತ್ತಿಲ್ಲ. ರಣಹದ್ದಿನ ಹಾಗೆ ನೇಹಾಳ ವಿಷಯದಲ್ಲಿ ರಾಜಕೀಯ ಲಾಭ ತೆಗೆದುಕೊಳ್ಳುತ್ತಿವೆ. ನೇಹಾ ಹತ್ಯೆ ವಿಷಯದಲ್ಲಿ ಇವರಿಗೆ ಮತಗಳು ಬರ್ತಾವೆ, ಹೀಗಾಗಿ ರಾಜಕಾರಣ ಮಾಡುತ್ತಿದೆ. ತಮಗೆ ಅನುಕೂಲಕರವಾದ್ರೆ ಮಾತ್ರ ಪ್ರತಿಭಟನೆ ಮಾಡುತ್ತಾರೆ. ತುಮಕೂರಿನಲ್ಲಿ ನಡೆದ ಮುಸ್ಲಿಂ ಯುವತಿಯ ಕೊಲೆ ಬಗ್ಗೆ ಏಕೆ ಬಿಜೆಪಿಯವರು ಹೋರಾಟ ಮಾಡಲಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಬಿಜೆಪಿ ಗಿಲ್ಟಿ ಪಾರ್ಟಿ, ಬಿಜೆಪಿಯವರಿಗೆ ಮಾನವೀಯತೆ ಇಲ್ಲ. ಬಸವರಾಜ ಬೊಮ್ಮಾಯಿ ಫೇಕ್ ವಿಡಿಯೋ ಎಂದು ಹೇಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣನ ಪ್ರಕರಣದಲ್ಲಿ ಜೋಶಿಯವರ ನಿಲವು ಏನು..?, ಮೋದಿ ಮತ್ತು ಶಾ ಅವರಿಗೆ ಮೊದಲೇ ಈ ವಿಷಯ ಗೊತ್ತಿತ್ತು. ಗೊತ್ತಿದ್ದರೂ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ, ಅವರ ಪರವಾಗಿ ಮೋದಿ ಬಂದು ಪ್ರಚಾರ ಮಾಡಿದರು. ಅಮಿತ್ ಶಾ ನೇಹಾಳ ಮನೆಗೆ ಭೇಟಿ ಕೊಟ್ಟರೇ ಅದು ರಾಜಕೀಯ ಲಾಭಕ್ಕಾಗಿ ಎಂದು ಕಿಡಿ ಕಾರಿದ್ದಾರೆ.
undefined
ದೇಶ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ಸಿಗುತ್ತಿದೆ. ನೇಹಾ ಹಿರೇಮಠ ಮನೆಗೆ ಭೇಟಿ ಏಕೆ ಡೋಂಗಿತನ ಮಾಡುತ್ತಿದ್ದೀರಿ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಬುದ್ಧರೆಂದು ಅಂದುಕೊಂಡಿದ್ದಾರೆ ಮನಸೋ ಇಚ್ಛೆ ಹೇಳಿಕೆ ನೀಡುತ್ತಾ ಹೊರಟಿದ್ದಾರೆ. ಅಧಿಕಾರದ ಪ್ರಬುದ್ಧತೆಯನ್ನ ಅಧಿಕಾರದ ಅಹಮ್ಮಿನಲ್ಲಿ ಕಳೆದುಕೊಂಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಣ್ಣು ಮುಚ್ಚಿಕೊಂಡು ಬಿಜೆಪಿಯವರು ಗೆಲ್ಲುತ್ತೆವೆಂದು ಅಂದಕೊಂಡಿದ್ದರು. ಈಗ ಇಲ್ಲಿ ಬಿಜೆಪಿಯವರು ಹರಸಾಹಸ ಪಡಬೇಕಿದೆ ಎಂದು ಹೇಳಿದ್ದಾರೆ.