ಪ್ರೀತಿ ನೆಪದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯನ್ನ ಪುಸಲಾಯಿಸಿ ಓಡಿಬಂದಿದ್ದ ಅನ್ಯಕೋಮಿನ ಯುವಕನಿಗೆ ಹಿಂದೂ ಪರ ಸಂಘಟನೆಯವರು ಹಿಡಿದು ಧರ್ಮದೇಟು ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ (ಏ.29): ಪ್ರೀತಿ ನೆಪದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯನ್ನ ಪುಸಲಾಯಿಸಿ ಓಡಿಬಂದಿದ್ದ ಅನ್ಯಕೋಮಿನ ಯುವಕನಿಗೆ ಹಿಂದೂ ಪರ ಸಂಘಟನೆಯವರು ಹಿಡಿದು ಧರ್ಮದೇಟು ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಿಂದ ಅಪ್ರಾಪ್ತ ಬಾಲಕಿಯನ್ನ ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದ ಮುಸ್ಲಿಂ ಯುವಕ. ಹುಬ್ಬಳ್ಳಿ ಗಬ್ಬೂರಿನ ಹೋಟೆಲ್ಲೊಂದರಲ್ಲಿ ಬಾಲಕಿಯೊಂದಿಗೆ ಅನುಮಾನಾಸ್ಪದವಾಗಿ ಓಡಾಡುವುದು ಗಮನಿಸಿದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತರು. ಜೋಡಿಯನ್ನ ಹಿಡಿದು ವಿಚಾರಿಸಿದಾಗ ಬೆಳಕಿಗೆ ಬಂದಿದೆ.
ಅನಾಮಧೇಯ ವ್ಯಕ್ತಿಗಳು ನಮ್ಮ ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ; ನೇಹಾ ತಂದೆ ನಿರಂಜನ ಹಿರೇಮಠ ಆತಂಕ
ಇದೇ ವೇಳೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಬಗ್ಗೆ ಕೇಸ್ ದಾಖಲಾಗಿದ್ದು ಗೊತ್ತಾಗಿದೆ. ಜೋಡಿಗೆ ಧರ್ಮದೇಟು ನೀಡಿ ಬೇಂಡಿಗೇರಿ ಪೊಲೀಸ್ ಠಾಣೆಗೆ ಕರೆತಂದ ಹಿಂದೂ ಜಾಗರಣಾ ವೇದಿಕೆ ಮುಖಂಡರು. ಇಬ್ಬರು ಜೋಡಿಯನ್ನ ಪೊಲೀಸ್ ಠಾಣೆಗೆ ಕರೆತಂದು ಠಾಣೆಯಲ್ಲೇ ಜೈಶ್ರೀರಾಮ್ ಘೋಷಣೆ ಕೂಗಿದ ಕಾರ್ಯಕರ್ತರು. ಸದ್ಯ ಜೋಡಿ ವಿಚಾರಣೆ ನಡೆಸುತ್ತಿರುವ ಪೊಲೀಸರು.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಬೂದಿ ಮುಚ್ಚಿದ ಕೆಂಡಂತಿದೆ. ಹಿಂದೂಪರ ಸಂಘಟನೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಇನ್ನೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮತ್ತೊಂದು ಅಪ್ರಾಪ್ತ ಬಾಲಕಿಯನ್ನ ಕರೆತಂದಿರುವುದು ಕಂಡು ಯುವಕನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.