
ಹುಬ್ಬಳ್ಳಿ(ಏ.28): ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಒಬಿಸಿಗೆ ಸೇರಿಸುವ ಮೂಲಕ ಅತ್ಯಂತ ಹಿಂದುಳಿದ ಜಾತಿಗಳಿಗೆ ಚಿಪ್ಪು ಕೊಡಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯ ಜಾತಿ ಅಲ್ಲ ಧರ್ಮವೂ ಅಲ್ಲ ಎಂದು ಬರೆದಿದ್ದಾರೆ. ಹಾಗಿದ್ದರೆ ಏನು? ಈ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳಿಗೆ ಪರಮ ಅನ್ಯಾಯ ಮಾಡುತ್ತಿದೆ ಎಂದರು.
ಏನು ಮಾಡಿದೆ ತಿಳಿಸಲಿ:
ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಹಣ ಸಂದಾಯವಾಗಿದೆ. ಆದರೆ, ಕಾಂಗ್ರೆಸ್ಸಿನವರು ಸುಳ್ಳು ಹೇಳಿ ಜನರನ್ನು ಕರ್ನಾಟಕ- ಕನ್ನಡಿಗ ತಾರತಮ್ಯ ಎಂದು ಮಾಡಲು ಹೊರಟಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷವು ದೇಶದಲ್ಲಿರುವ ಹಿಂದೂಗಳಿಗೆ ಏನು ಮಾಡಲು ಹೊರಟಿದೆ ಎಂಬುದನ್ನು ಹೇಳಲಿ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಂರಿಗೆ ಒಬಿಸಿ ಮೀಸಲಾತಿ ಸತ್ಯ: ದಾಖಲೆ ಇದೆ ಎಂದ ಪ್ರಲ್ಹಾದ್ ಜೋಶಿ
ಸಂಪೂರ್ಣ ದಿವಾಳಿ:
ನರೇಂದ್ರ ಮೋದಿ ಎಂದಿಗೂ ಕನ್ನಡಿಗರ ಪರವಾಗಿದ್ದಾರೆ. ಬರ ಅನುದಾನ ವಿಚಾರದಲ್ಲಿ ರಾಜಕೀಯ ಕಾರಣಕ್ಕೆ ಕಾಂಗ್ರೆಸ್ಸಿನವರು ಕೋರ್ಟಿಗೆ ಹೋಗಿದ್ದಾರೆ. ಇಂಡಿಯಾ ಅಲೈನ್ಸ್‌ನವರು ಕೋರ್ಟಿಗೆ ಹೋಗಿ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಸಂಪೂರ್ಣ ದಿವಾಳಿಯಾಗಿದೆ ಎಂದರು.
ಬ್ಲಾಕ್ ಮೇಲ್ ನಿಲ್ಲಿಸಿ:
ಮಲ್ಲಿಕಾರ್ಜುನ ಖರ್ಗೆ ತಾವು ಮಾಡಿದ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳಬೇಕು. ಅದನ್ನು ಬಿಟ್ಟು ನನ್ನ ಮಣ್ಣಿಗೆ ಬನ್ನಿ ಎಂದು ಜನರನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಕಳೆದ 50 ವರ್ಷಗಳಲ್ಲಿ ಬಹುತೇಕ ಸಮಯ ಅಧಿಕಾರದಲ್ಲಿದ್ದಾರೆ, ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ ಪಕ್ಷ, ಖರ್ಗೆ ಅವರು ಆ ಭಾಗವನ್ನು ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ಈ ರೀತಿಯ ಭಾವನಾತ್ಮಕ ದಾಳ ಬಳಸುತ್ತಿದ್ದಾರೆ. ಜನರು ಇದಕ್ಕೆ ಮರುಳಾಗುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.