ಮೊದಲಿಗೆ ರೋಹಿತ್ ಶರ್ಮಾ ನೋಡಿದಾಗ ಯುವಿಗೆ ಇಂಜಮಾಮ್‌ ಅವರಂತೆ ಕಂಡಿದ್ದರಂತೆ..!

By Suvarna NewsFirst Published Apr 6, 2020, 12:56 PM IST
Highlights

ರೋಹಿತ್ ಶರ್ಮಾ ಅವರ ಬ್ಯಾಟಿಂಗನ್ನು ಮೊದಲ ಬಾರಿಗೆ ನೋಡಿದಾಗ ಯುವರಾಜ್ ಸಿಂಗ್‌ಗೆ ಪಾಕ್ ದಿಗ್ಗಜ ಬ್ಯಾಟ್ಸ್‌ಮನ್ ಇಂಜಮಾಮ್ ಉಲ್ ಹಕ್ ಅವರನ್ನು ನೆನಪು ಮಾಡಿತಂತೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ನವದೆಹಲಿ(ಏ.06): ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ, ಅವರನ್ನು ಆರಂಭದಲ್ಲಿ ನೋಡಿದಾಗ ಪಾಕಿಸ್ತಾನದ ದಿಗ್ಗಜ ಆಟಗಾರ ಇಂಜಮಾಮ್‌ ಉಲ್‌ ಹಕ್‌ ಅವರಂತೆ ಕಂಡಿದ್ದರು ಎಂದು ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಹೇಳಿದ್ದಾರೆ. 

ಕೊರೋನಾ ಸಂಕಷ್ಟ: PM CARES Fund ಗೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ ಯುವರಾಜ್ ಸಿಂಗ್..!

2007ರ ಟಿ20 ವಿಶ್ವಕಪ್‌ನ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ರೋಹಿತ್‌ರನ್ನು ಕಂಡಾಗ ತಮಗೆ ಅನಿಸಿದ್ದನ್ನು ಯುವಿ ಈಗ ಬಹಿರಂಗಪಡಿಸಿದ್ದಾರೆ. ಆ ಪಂದ್ಯದಲ್ಲೇ ಯುವರಾಜ್ ಸಿಂಗ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಹೊಸ ಇತಿಹಾಸ ಬರೆದಿದ್ದರು. ಇದರ ಜತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕವನ್ನು ದಾಖಲಿಸಿದ್ದರು. ಇನ್ನು ಇದೇ ಟೂರ್ನಿಯಲ್ಲಿ ರೋಹಿತ್ ಆಡಿದ ಎರಡನೇ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಫಿಫ್ಟಿ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತಮ್ಮ ಎಂಟ್ರಿಯನ್ನು ಸಾರಿ ಹೇಳಿದ್ದರು.

ಧೋನಿ,ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಯುವರಾಜ್; ನಿಜವಾಗುತ್ತಿದೆ ಅಪ್ಪನ ಆರೋಪ!

ದಿಗ್ಗಜ ಬ್ಯಾಟ್ಸ್‌ಮನ್ ಇಂಜಮಾಮ್ ಉಲ್ ಹಕ್ ಪಾಕಿಸ್ತಾನ ಪರ 120 ಟೆಸ್ಟ್ ಹಾಗೂ 300ಕ್ಕೂ ಅಧಿಕ ಏಕದಿನ ಪಂದ್ಯಗಳನ್ನಾಡಿದ್ದು, ತಂಡಕ್ಕೆ ಏಕಾಂಗಿಯಾಗಿ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದಿಟ್ಟಿದ್ದಾರೆ. ಎಂತಹ ಒತ್ತಡದ ಸಂದರ್ಭದಲ್ಲೂ ಕೂಲ್ ಆಗಿ ಇರುತ್ತಿದ್ದ ಇಂಜಿ 2003ರಿಂದ 2007ರವರೆಗೆ ಪಾಕ್ ತಂಡದ ನಾಯಕರಾಗಿಯೂ ಸೈ ಎನಿಸಿಕೊಂಡಿದ್ದರು.

click me!