ಮಹದೇವ್ ಬೆಟ್ಟಿಂಗ್ ಆ್ಯಪ್‌ನ ಅಂಗಸಂಸ್ಥೆ ಫೇರ್‌ಪ್ಲೇ ಆ್ಯಪ್‌ನಲ್ಲಿ 2023ರ ಐಪಿಎಲ್ ಪಂದ್ಯ ಪ್ರಸಾರ ಮಾಡಲಾಗಿತ್ತು. ಇದರ ವಿರುದ್ದ ವಯೋಕಾಮ್ 18 ಸಂಸ್ಥೆ ದೂರು ಸಲ್ಲಿಸಿತ್ತು. ಹೀಗಾಗಿ ಫೇರ್‌ಪ್ಲೇ ಸಂಸ್ಥೆಗೆ ರಾಯಭಾರಿಯಾಗಿರುವ ತಮನ್ನಾಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಫೇರ್‌ಪ್ಲೇ ಸಂಸ್ಥೆ ಜೊತೆ ನಂಟು ಹೊಂದಿರುವ ಸಂಜಯ್ ದತ್‌ರನ್ನೂ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈ: 2023ರ ಐಪಿಎಲ್ ಪಂದ್ಯ ಅಕ್ರಮವಾಗಿ ಪ್ರಸಾರ ಮಾಡಿ, ಪ್ರಸಾರಕರಾದ ವಯೋಕಾಮ್ 18 ಸಂಸ್ಥೆಗೆ 100 ಕೋಟಿ ರುಪಾಯಿ ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ತಮನ್ನಾಗೆ ಮಹಾರಾಷ್ಟ್ರ ಸೈಬರ್ ಕ್ರೈಮ್ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ಏ.29ಕ್ಕೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
ಮಹದೇವ್ ಬೆಟ್ಟಿಂಗ್ ಆ್ಯಪ್‌ನ ಅಂಗಸಂಸ್ಥೆ ಫೇರ್‌ಪ್ಲೇ ಆ್ಯಪ್‌ನಲ್ಲಿ 2023ರ ಐಪಿಎಲ್ ಪಂದ್ಯ ಪ್ರಸಾರ ಮಾಡಲಾಗಿತ್ತು. ಇದರ ವಿರುದ್ದ ವಯೋಕಾಮ್ 18 ಸಂಸ್ಥೆ ದೂರು ಸಲ್ಲಿಸಿತ್ತು. ಹೀಗಾಗಿ ಫೇರ್‌ಪ್ಲೇ ಸಂಸ್ಥೆಗೆ ರಾಯಭಾರಿಯಾಗಿರುವ ತಮನ್ನಾಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಫೇರ್‌ಪ್ಲೇ ಸಂಸ್ಥೆ ಜೊತೆ ನಂಟು ಹೊಂದಿರುವ ಸಂಜಯ್ ದತ್‌ರನ್ನೂ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.
undefined
IPL 2024 ಈಡನ್ ಗಾರ್ಡನ್ಸ್‌ನಲ್ಲಿಂದು ಕೋಲ್ಕತಾಗೆ ಪಂಜಾಬ್ ಕಿಂಗ್ಸ್ ಚಾಲೆಂಜ್
ಬಾಲಿವುಡ್ ನಟ ಸಂಜಯ್ ದತ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮಹದೇವ್ ಬೆಟ್ಟಿಂಗ್ ಆ್ಯಪ್‌ನ ಅಂಗಸಂಸ್ಥೆ ಫೇರ್‌ಪ್ಲೇ ಆ್ಯಪ್ ಅನ್ನು ಪ್ರಮೋಟ್ ಮಾಡಿದ್ದರು. ಈ ಸಂಬಂಧ ಸಮನ್ಸ್ ಜಾರಿ ಮಾಡಲಾಗಿದೆ.
ನಿವೃತ್ತಿ ಹಿಂಪಡೆಯಲ್ಲ: ಟಿ20 ವಿಶ್ವಕಪ್‌ಗೆ ನೋ ಎಂದ ವಿಂಡೀಸ್‌ನ ನರೈನ್
ಕೋಲ್ಕತಾ: ವೆಸ್ಟ್‌ಇಂಡೀಸ್ ಮಾಜಿ ಕ್ರಿಕೆಟಿಗ ಸುನಿಲ್ ನರೈನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಘೋಷಿಸಿರುವ ನಿವೃತ್ತಿ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಟಿ20 ವಿಶ್ವಕಪ್‌ನಲ್ಲೂ ಆಡಲ್ಲ ಎಂದಿದ್ದಾರೆ. ಐಪಿಎಲ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿರುವ ನರೈನ್‌ರನ್ನು ವಿಶ್ವಕಪ್‌ನಲ್ಲಿ ಆಡಿಸಲು ವಿಂಡೀಸ್ ತಂಡ ಪ್ರಯತ್ನಿಸುತ್ತಿದೆ.
ಆರೆಂಜ್ ಆರ್ಮಿಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ RCB..! ಸೋಲಿನ ಲೆಕ್ಕಚುಕ್ತಾ
ಆದರೆ ಇದನ್ನು ನಿರಾಕರಿಸಿರುವ ನರೈನ್, ಸಾಮಾಜಿಕ ತಾಣಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ನಿವೃತ್ತಿ ಹಿಂಪಡೆದು ಟಿ20 ವಿಶ್ವಕಪ್ ಆಡಲು ಹಲವರು ಒತ್ತಾಯಿಸುತ್ತಿದ್ದಾರೆ. ಆದರೆ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಆ ಬಾಗಿಲು ನನ್ನ ಪಾಲಿಗೆ ಈಗ ಮುಚ್ಚಿದೆ. ವಿಶ್ವಕಪ್‌ಗಾಗಿ ವಿಂಡೀಸ್ ಆಟಗಾರರು ಕಷ್ಟಪಡುತ್ತಿದ್ದಾರೆ. ಅವರ ಅವಕಾಶವನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಅವರು ಪ್ರಶಸ್ತಿ ಗೆಲ್ಲಲು ಸಮರ್ಥರಾಗಿದ್ದಾರೆ’ ಎಂದು ತಿಳಿಸಿದ್ದಾರೆ.