
ಬೆಂಗಳೂರು(ಏ.26): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ಎದುರು 35 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದು 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ದಾಖಲಿಸಿದ ಎರಡನೇ ಗೆಲುವು ಎನಿಸಿಕೊಂಡಿತು.ಕಳೆದೊಂದು ತಿಂಗಳಿನಿಂದ ಸತತ ಆರು ಸೋಲು ಕಂಡಿದ್ದ ಫಾಫ್ ಡು ಪ್ಲೆಸಿಸ್ ಪಡೆ ಕೊನೆಗೂ ಆರೆಂಜ್ ಆರ್ಮಿ ಎದುರು ಅವರದ್ದೇ ನೆಲದಲ್ಲಿ ಗೆಲುವಿನ ಕೇಕೆ ಹಾಕುವಲ್ಲಿ ಯಶಸ್ವಿಯಾಗಿದೆ. ಗೆಲ್ಲಲು 207 ರನ್ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು 8 ವಿಕೆಟ್ ಕಳೆದುಕೊಂಡು 171 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಹಿಂದೆ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ದಾಖಲೆಯ 287 ರನ್ ಚಚ್ಚಿತ್ತು. ಸನ್‌ರೈಸರ್ಸ್ ಹೈದರಾಬಾದ್‌ಗೆ ಕಠಿಣ ಪೈಪೋಟಿ ನೀಡಿದ ಆರ್‌ಸಿಬಿ ತಂಡವು 25 ರನ್ ಅಂತರದ ರೋಚಕ ಸೋಲು ಅನುಭವಿಸಿತು. ಆರ್‌ಸಿಬಿ ಸೋಲುತ್ತಿದ್ದಂತೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳು ಹಾಗೂ ಆಟಗಾರರು ಸೈಲೆಂಟ್ ಸೆಲಿಬ್ರೇಷನ್ ಮಾಡಿ ಆರ್‌ಸಿಬಿಯನ್ನು ಕಾಲೆಳೆದಿದ್ದರು.
ಇದೀಗ ಅದಕ್ಕೆ ತಿರುಗೇಟು ನೀಡುವ ಸಮಯ ಆರ್‌ಸಿಬಿಯದ್ದಾಗಿತ್ತು. ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅವರದ್ದೇ ನೆಲದಲ್ಲಿ ಬಗ್ಗುಬಡಿದ ಆರ್‌ಸಿಬಿ ಕಳೆದ ಸೋಲಿನ ಲೆಕ್ಕಚುಕ್ತಾ ಮಾಡಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳು ಹೈದರಾಬಾದ್‌ನಲ್ಲಿ ಎದುರಾಳಿ ಪಡೆ ಮುಟ್ಟಿನೋಡಿಕೊಳ್ಳುವಂತೆ ಸೈಲೆಂಟ್ ಸೆಲಿಬ್ರೇಷನ್ ಮಾಡಿ ತಿರುಗೇಟು ನೀಡಿದ್ದಾರೆ.
RCB ಅಭಿಮಾನಿಗಳ ಹಾವಳಿ ಹೇಗಿತ್ತೆಂದರೇ, ಹೈದರಾಬಾದ್ ಮೆಟ್ರೋದಲ್ಲೂ ಆರ್‌ಸಿಬಿ ಫ್ಯಾನ್ಸ್ ಆರ್‌ಸಿಬಿ.. ಆರ್‌ಸಿಬಿ ಎಂದು ಕೂಗುವ ಮೂಲಕ ಸೆಲಿಬ್ರೇಷನ್ ಮಾಡಿದರು.
ಇನ್ನು ಆರ್‌ಸಿಬಿ ತಂಡವು ಈ ಗೆಲುವಿನ ಹೊರತಾಗಿಯೂ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದಿದೆ. ಇನ್ನೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈ ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೇ ಉಳಿದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.