ಮಾಧ್ಯಮಗಳಲ್ಲಿ ಬರುವ ಹೇಳಿಕೆಗಳ ವಿರುದ್ಧ ಕಿಡಿ ಕಾರುವ ಭರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ನಟರಾದ ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.
ಲೋಕಸಭೆ ಚುನಾವಣೆ ಶುರುವಾಗಿದೆ. ಮುಂದಿನ ಹಂತದ ಚುನಾವಣಾ ಪ್ರಚಾರದಲ್ಲಿ ಎಲ್ಲಾ ಪಕ್ಷಗಳ ನಾಯಕರು ನಿರತರಾಗಿದ್ದಾರೆ. ರಾಜಕಾರಣಿಗಳು ಮಾತಿನ ಭರದಲ್ಲಿ ಏನೇನೋ ಹೇಳಿ ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಇದೇ ಕಾರಣಕ್ಕೆ ಅರ್ಹ ರಾಜಕಾರಣಿ ಎನಿಸಿಕೊಳ್ಳಬೇಕಾದರೆ ಅವರಿಗೆ ತಾವು ಏನು ಹೇಳುತ್ತೇವೆ ಎನ್ನುವ ಬಗ್ಗೆ ಮೈಮೇಲೆ ಅರಿವು ಇರಬೇಕಾದ ಅಗತ್ಯವಿರುತ್ತದೆ. ಇದಾಗಲೇ ಹಲವು ರಾಜಕಾರಣಿಗಳು ಏನೋ ಹೇಳಲು ಹೋಗಿ ಇನ್ನೇನೋ ಹೇಳಿ ಟ್ರೋಲ್ಗೆ ಒಳಗಾಗುವುದು ಸಾಮಾನ್ಯ. ತಮ್ಮ ಪಕ್ಷದ ಹೆಸರನ್ನೇ ಮರೆತು ಬೇರೆ ಪಕ್ಷವನ್ನು ಹೊಗಳುವುದು, ಆ ಪಕ್ಷಕ್ಕೆ ಮತ ನೀಡಿ ಎನ್ನುವುದು ಇವೆಲ್ಲ ಟ್ರೋಲ್ಗಳು ಸಕತ್ ವೈರಲ್ ಆಗುವುದು ಉಂಟು. ಆದರೆ ಇದನ್ನು ತಮಾಷೆಯ ರೂಪದಲ್ಲಿ ಎಲ್ಲರೂ ತೆಗೆದುಕೊಳ್ಳುತ್ತಾರಷ್ಟೇ. ಆದರೆ ಮಾತಿನ ಭರದಲ್ಲಿ ಒಬ್ಬರ ವಿರುದ್ಧ ಕೆಟ್ಟ ರೀತಿಯಲ್ಲಿ ಮಾತನಾಡಿದಾಗ ವಿವಾದ ಸುತ್ತಿಕೊಳ್ಳುವುದು ಉಂಟು.
ಇದಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೆಲವು ಕೇಸ್ಗಳು ಇದಾಗಲೇ ನಡೆಯುತ್ತಿರುವ ಹೊತ್ತಿನಲ್ಲಿಯೇ ನಟಿ ಐಶ್ವರ್ಯ ರೈ ಅವರನ್ನು ನಾಚ್ ನೇ ವಾಲಿ ಎಂದು ಕರೆಯುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿರುವುದು ಗೊತ್ತೇ ಇದೆ. ಜನವರಿ 22ರಂದು ಅಯೋಧ್ಯಾದಲ್ಲಿ ನಡೆದ ರಾಮ ಮಂದಿರ ಉದ್ಘಾಟನೆ ಸಮಾರಂಭದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ರಾಹುಲ್ ಗಾಂಧಿ ಅವರು ಐಶ್ವರ್ಯಾ ರೈ ಹೆಸರು ಪ್ರಸ್ತಾಪಿಸಿದ್ದರು. ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನರನ್ನು ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ. ಆದರೆ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಅವರೆಲ್ಲ ಬಂದಿದ್ದರು ಎಂದು ಟೀಕಿಸಿದ್ದರು. ಅಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ. ಆದರೆ ಇದನ್ನು ಹೇಳುವಾಗ, ಐಶ್ವರ್ಯ ರೈ ಅವರನ್ನು ನಾಚ್ ನೇ ವಾಲಿ ಎಂದಿದ್ದರು. ಇದರ ವಿರುದ್ಧ ಇದಾಗಲೇ ಬಿಜೆಪಿ ನಾಯಕರು ಸೇರಿದಂತೆ ಹಲವರು ಸಿಡಿದೆದ್ದಿದ್ದರು.
undefined
ಜನರಿಗೆ ವಾಸ್ತವ ಬೇಡ, ಮನರಂಜನೆ ಸಾಕು... ನನ್ನ ಸಿನಿಮಾದಲ್ಲಿ ಧರ್ಮಕ್ಕೆ ಜಾಗವಿಲ್ಲ: ಫಹಾದ್ ಫಾಸಿಲ್
ಇದೀಗ ರಾಹುಲ್ ಗಾಂಧಿಯವರು ಮತ್ತೆ ಐಶ್ವರ್ಯ ರೈ, ಅಮಿತಾಭ್ ಬಚ್ಚನ್ ಸೇರಿದಂತೆ ಇವರ ಜೊತೆ ಕ್ರಿಕೆಟ್ ಪಟು ವಿರಾಟ್ ಕೊಹ್ಲಿ ಅವರನ್ನೂ ಎಳೆತಂದಿದ್ದಾರೆ. ತಮ್ಮ ವಿರುದ್ಧ ಕೆಲವು ಮಾಧ್ಯಮಗಳಲ್ಲಿ ಕೆಲವು ರಾಜಕೀಯ ವ್ಯಕ್ತಿಗಳು ನೀಡಿರುವ ಹೇಳಿಕೆಗಳ ಕುರಿತು ಪ್ರಕಟ ಆಗಿರುವ ವಿಷಯಗಳನ್ನು ಪ್ರಸ್ತಾಪಿಸುವ ಸಮಯದಲ್ಲಿ ಈ ಮಾತನ್ನು ಹೇಳಿರುವ ರಾಹುಲ್ ಗಾಂಧಿ ಮತ್ತೆ ಕೆಲವರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ, ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ನಾನು ರಾಜಕೀಯದ ಬಗ್ಗೆ ಗಂಭೀರವಾಗಿಲ್ಲ ಎಂದು ಅವರು ಮಾಧ್ಯಮಗಳಲ್ಲಿ ಹೇಳುತ್ತಲೇ ಬರುತ್ತಿದ್ದಾರೆ. ಆದರೆ ನಾನು ಜನಸಾಮಾನ್ಯರಿಗಾಗಿ ಮಾಡುವ ಹೋರಾಟಗಳ ಬಗ್ಗೆ ಅವರಿಗೆ ಲೆಕ್ಕಕ್ಕಿಲ್ಲ. ನರೇಗಾ, ಭೂ ಸ್ವಾಧೀನ ಕಾಯ್ದೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ನಾನು ಹೋರಾಡುವುದು ಗಂಭೀರ ಅನಿಸಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ, ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ವಿರಾಟ್ ಕೊಹ್ಲಿ ಅವರ ಹೆಸರುಗಳನ್ನು ಹೇಳಿರುವ ರಾಹುಲ್ ಗಾಂಧಿಯವರು, ನಾನು ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ವಿರಾಟ್ ಕೊಹ್ಲಿ ಹೆಸರು ಹೇಳಿದರೆ ಅದು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಬೇರೆ ವಿಷಯಗಳು ಅಲ್ಲ ಎಂದಿದ್ದಾರೆ. ‘ರಾಮ ಮಂದಿರ ಉದ್ಘಾಟನೆ ವೇಳೆ ಅಮಿತಾಭ್ ಬಚ್ಚನ್, 'ನಾಚನೇವಾಲಿ' ಐಶ್ವರ್ಯಾ ರೈ, ಅಂಬಾನಿ, ಅದಾನಿ ಮೊದಲಾದ ಉದ್ಯಮಿಗಳನ್ನು ನೋಡಿದೆ. ಆದರೆ, ಒಬ್ಬೇ ಒಬ್ಬ ಬಡವನನ್ನು, ರೈತನನ್ನು, ಕಾರ್ಮಿಕನನ್ನು, ನಿರುದ್ಯೋಗಿಯನ್ನು ನೋಡಿಲ್ಲ’ ಎಂದು ಈ ಹಿಂದೆ ಹೇಳಿದ್ದರು. ಅದರ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದೀಗ ಮತ್ತದೇ ವಿಷಯವನ್ನು ಕೆದಕಿರುವ ರಾಹುಲ್ ಗಾಂಧಿ, ಈ ವಿಷಯ ಮಾತ್ರ ಗಂಭೀರವಾಗುತ್ತದೆ ಎನ್ನುವ ಮೂಲಕ ಮತ್ತೆ ಕೆಲವರ ಅಸಮಾಧಾನಕ್ಕೆ ಒಳಗಾಗುತ್ತಿದ್ದಾರೆ.
ಹಾಕಿದ್ದೇ ಚೋಟುದ್ದ ಡ್ರೆಸ್, ಗಾಳಿಗೆ ಹಾರೋದಾ? ಬಾಯ್ಫ್ರೆಂಡ್ ಜತೆಗಿರುವಾಗ ಹೃತಿಕ್ ಮಾಜಿ ಪತ್ನಿಗೆ ಹೀಗಾಗೋದಾ?