'ಏನ್ರಯ್ಯಾ ಇದು..?': ಆರ್‌ಸಿಬಿ ಎದುರು ಸನ್‌ರೈಸರ್ಸ್ ಆಟ ನೋಡಿದ ಕಾವ್ಯ ಮಾರನ್ ರಿಯಾಕ್ಷನ್ ವೈರಲ್..!

By Naveen Kodase  |  First Published Apr 26, 2024, 11:58 AM IST

2024ನೇ ಸಾಲಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇದೀಗ ತವರಿನಲ್ಲಿ ಮೊದಲನೇ ಹಾಗೂ ಒಟ್ಟಾರೆ ಮೂರನೇ ಸೋಲು ಕಂಡಿದೆ. ಈ ಸೋಲಿನ ಹೊರತಾಗಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡವು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೇ ಮುಂದುವರೆದಿದೆ.


ಹೈದರಾಬಾದ್(ಏ.26): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಆರು ಸೋಲುಗಳ ಬಳಿಕ ಕೊನೆಗೂ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಈ ಆವೃತ್ತಿಯ ಐಪಿಎಲ್ ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಎದುರು ಆರ್‌ಸಿಬಿ ತಂಡವು ಅವರದ್ದೇ ಮೈದಾನದಲ್ಲಿ 35 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. 

ಸನ್‌ರೈಸರ್ಸ್ ಹೈದರಾಬಾದ್ ತಂಡವು ಇದುವರೆಗೂ ತವರಿನಲ್ಲಿ ಸೋಲು ಕಂಡಿರಲಿಲ್ಲ. ಆದರೆ ಆರ್‌ಸಿಬಿ ತಂಡವು ಆರೆಂಜ್ ಆರ್ಮಿಗೆ ಸೋಲಿನ ರುಚಿ ತೋರಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ ಬಾರಿಸಿದ ಭರ್ಜರಿ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತ್ತು. ಇದಾದ ಬಳಿಕ ಸವಾಲಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕರ್ಣ್ ಶರ್ಮಾ, ಕ್ಯಾಮರೋನ್ ಗ್ರೀನ್ ಹಾಗೂ ಸ್ವಪ್ನಿಲ್ ಸಿಂಗ್ ಮಾರಕ ದಾಳಿಗೆ ತತ್ತರಿಸಿ 8 ವಿಕೆಟ್ ಕಳೆದುಕೊಂಡು 171 ರನ್ ಗಳಿಸಷ್ಟೇ ಶಕ್ತವಾಯಿತು.

Tap to resize

Latest Videos

7 ಪಂದ್ಯ ಸೋತರೇನಂತೆ RCB ತಂಡಕ್ಕೆ ಈಗಲೂ ಇದೆ ಪ್ಲೇ ಆಫ್ ಅವಕಾಶ.! ಯಾವ ನೆಟ್‌ ರನ್‌ರೇಟ್ ಅಗತ್ಯವೂ ಇಲ್ಲ..!

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಟೂರ್ನಿಯುದ್ದಕ್ಕೂ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಯ್ಡನ್ ಮಾರ್ಕ್‌ರಮ್ ಹಾಗೂ ಹೆನ್ರಿಚ್ ಕ್ಲಾಸೇನ್, ಆರ್‌ಸಿಬಿ ಬೌಲರ್‌ಗಳೆದುರು ಸಾಧಾರಣ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೇಡ್ ನಡೆಸಿದರು. ನಾಟಕೀಯ ಕುಸಿತ ಕಂಡ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್‌ಗಳ ಪ್ರದರ್ಶನ ಕಂಡು ತಂಡದ ಮಾಲೀಕರಾದ ಕಾವ್ಯ ಮಾರನ್ ಅವರ ರಿಯಾಕ್ಷನ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಹೀಗಿತ್ತು ನೋಡಿ ಆ ಕ್ಷಣ:

Kavya Maran tonight. pic.twitter.com/peqL0ZN95b

— Mufaddal Vohra (@mufaddal_vohra)

Rocked 😎
Kavya Maran Shocked 😮‍💨
Congratulations RCB 😍 pic.twitter.com/xISW2H2cWG

— Mohammed Aziz (@itsmeaziz07)

Kavya Maran 😭😭😭 pic.twitter.com/5JfJAm2IeI

— Yashvi (@BreatheKohli)

2024ನೇ ಸಾಲಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇದೀಗ ತವರಿನಲ್ಲಿ ಮೊದಲನೇ ಹಾಗೂ ಒಟ್ಟಾರೆ ಮೂರನೇ ಸೋಲು ಕಂಡಿದೆ. ಈ ಸೋಲಿನ ಹೊರತಾಗಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡವು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೇ ಮುಂದುವರೆದಿದೆ.

click me!