ಕಾಲು ಮುರಿದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಎಕ್ಸ್-ರೇ ಫೋಟೋಗಳನ್ನು ಶೇರ್ ಮಾಡಿ ಕೊಟ್ಟಿರುವ ಶೀರ್ಷಿಕೆ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಟಿ ಹೇಳಿದ್ದೇನು?
'ನಾನು ನನ್ನ ಕಾಲ ಮೇಲೆ ಇನ್ನು ನಡೆಯುವುದು ಯಾವಾಗಲೋ ಗೊತ್ತಿಲ್ಲ. ಅರೆ ಇದೇನಾಗೋಯ್ತು. ನಾನು ನಡೆಯುವುದನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೀನಿ. ಆದರೂ ನಾನು ಧೈರ್ಯಶಾಲಿ. ಈಗಷ್ಟೇ ಮಹಾರಾಣಿ ಯಶುಬಾಯಿ ಪಾತ್ರ ಮಾಡಿದ್ದೇನೆ. ಆಕೆ ಯಾವುದಕ್ಕೂ ಸೋತವಳಲ್ಲ, ನಾನು ಕೂಡ ಆಕೆಯಂತೆಯೇ ಧೈರ್ಯಶಾಲಿ. ನನ್ನ ಕಾಲಿನ ನೋವನ್ನೆಲ್ಲಾ ನುಂಗಿ ಖುಷಿಯಾಗಿ ಇರಲು ನೋಡುತ್ತಿದ್ದೇನೆ' ಎಂದು ನಟಿ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದು, ತಮ್ಮ ಫ್ರ್ಯಾಕ್ಚರ್ ಆಗಿರುವ ಎಕ್ಸ್ರೇ ಹಾಕಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಶಾಕ್ ಆಗಿದ್ದು, ಹಾಗಿದ್ರೆ ಇನ್ಮುಂದೆ ನೀವು ನಡೆಯೊದೇ ಇಲ್ವಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.
ಸದಾ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇರುವ ನಟಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಈಗ ಕಾಲು ಮುರಿದುಕೊಂಡಿರುವ ಶಾಕ್ ಕೊಟ್ಟಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕಾಲು ಮುರಿದುಕೊಂಡಿರುವ ನಟಿಗೆ ಈಗ ವ್ಹೀಲ್ಚೇರ್ ಗತಿಯಾಗಿದೆ. ಚಿಕ್ಕ ಗಾಯ ಎಂದು ಹೆಚ್ಚು ಗಮನ ಕೊಡದದ್ದೇ ಈ ಪರಿ ವಿಪರೀತಕ್ಕೆ ಹೋಗಿದೆ ಎನ್ನಲಾಗಿದೆ. ಸಿಕಂದರ್ ಚಿತ್ರದ ಚಿತ್ರೀಕರಣದಲ್ಲಿ ನಟಿ ಭಾಗಿಯಾಗಬೇಕಿತ್ತು. ಆದರೆ ಇದರ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಇಂದು ನಟಿ, ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಾಗ, ಆಗಿರುವ ಗಾಯ ಗೊತ್ತಾಗಿದೆ. ಕಾರಿನಿಂದ ಇಳಿಯಲು ಆಗದೇ ಕಷ್ಟಪಡುತ್ತಿದ್ದ ನಟಿ ಕೊನೆಗೆ ವ್ಹೀಲ್ಚೇರ್ನಲ್ಲಿ ಬಂದರು. ಇದನ್ನು ನೋಡಿದ ಫ್ಯಾನ್ಸ್ ಶಾಕ್ಗೆ ಒಳಗಾಗಿದ್ದು, ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ಕೊನೆಗೆ ವಿಷಯ ರಿವೀಲ್ ಆಗಿದೆ.
ರಿಷಬ್ ಶೆಟ್ಟಿ ಟ್ವೀಟ್ಗೆ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕಿಡಿಕಿಡಿ: ಜಾಲತಾಣದಲ್ಲಿ ಪರ-ವಿರೋಧಗಳ ಬಿಸಿಬಿಸಿ ಚರ್ಚೆ!
ಬಲಗಾಲಿಗೆ ತೀವ್ರ ಏಟಾಗಿದೆ ಎನ್ನುವುದು ತಿಳಿಯುತ್ತದೆ. ಆದರೆ ಇಷ್ಟೆಲ್ಲಾ ಸಮಸ್ಯೆ ಇದ್ದರೂ, ತಮ್ಮ ಛಾವಾ ಚಿತ್ರದ ಪ್ರೊಮೋಷನ್ಗಾಗಿ ನಟಿ ಹೈದರಾಬಾದ್‌ದಿಂದ ಮುಂಬೈಗೆ ತೆರಳುವ ಸಂದರ್ಭದಲ್ಲಿ, ವಿಷಯ ಬೆಳಕಿಗೆ ಬಂದಿದೆ. ಛಾವಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದಾಗಲೇ ಸಿಕಂದರ್ ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗಿರುವುದಕ್ಕೆ ನಟಿ ಕ್ಷಮೆ ಕೋರಿದ್ದರು. ಇದೀಗ ಕಾಲಿನ ಎಕ್ಸ್-ರೇ ಫೋಟೋ ಶೇರ್ ಮಾಡಿಕೊಂಡಿದ್ದು ನೋವು ತೋಡಿಕೊಂಡಿದ್ದಾರೆ. ಹೀಗಿದ್ದರೂ ಬ್ಯಾಂಡೇಜ್ ಹಾಕಿರುವ ಕಾಲಿನ ಬ್ಯಾಂಡೇಜ್ ಮೇಲೆ ಡಿಸೈನ್ ಮಾಡಿಸಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ.
ಇನ್ನು ಛಾವಾ ಚಿತ್ರದ ಕುರಿತು ಹೇಳುವುದಾದರೆ, ಇದರಲ್ಲಿ ರಶ್ಮಿಕಾ ಮಂದಣ್ಣ ಜೊತೆ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಇದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮರಾಠ ಮಹಾರಾಜನ ಮಹಾರಾಣಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇದು ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿಕಾರಿ ಛತ್ರಪತಿ ಸಾಂಭಾಜಿ ಮಹಾರಾಜ್ ಅವರ ಜೀವನದ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ಇದಕ್ಕೆ ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜ್ಜನ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರ ನಿರ್ಮಾಣದ ಮುಂದಿನ ಚಿತ್ರ ಥಾಮಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರೇ ನಾಯಕಿಯಾಗಿರುವುದು ವಿಶೇಷ.
ಫೋನ್‌ನಲ್ಲಿ ವಿಜಯ್ ದೇವರಕೊಂಡ ಮಾತು ಕೇಳ್ತಿದ್ದಂಗೇ ರಶ್ಮಿಕಾ ಹೊಟ್ಟೆಯಲ್ಲಿ ಹರಿದಾಡ್ತು ಚಿಟ್ಟೆ! ವಿಡಿಯೋ ವೈರಲ್