
ಮಾಸೂಮ್ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಬಾಲಿವುಡ್ ಚಿತ್ರೋದ್ಯಮಕ್ಕೆ ಪ್ರವೇಶಿಸಿದ ನಟಿ ಊರ್ಮಿಳಾ ಮಾತೋಂಡ್ಕರ್ ಬಾಲಿವುಡ್‌ನ ರಂಗೀಲಾ ಗರ್ಲ್ ಎಂದೇ ಜನಪ್ರಿಯೆ. ರಾಮ್‌ಗೋಪಾಲ್ ವರ್ಮಾನ ರಂಗೀಲಾ ಸಿನಿಮಾ ಬಂದಾಗ ಆಕೆಗಿನ್ನೂ ಜಸ್ಟ್ ಇಪ್ಪತ್ತೊಂದು. ಆಗ ಆಕೆ ನಿಗಿನಿಗಿ ಕೆಂಡ. ಇತ್ತೀಚೆಗೆ ಸಿನಿಮಾಗಳಿಂದ ದೂರವಿದ್ದರೂ ಅವರ ಸೌಂದರ್ಯ ಹಾಗೂ ಫಿಟ್ನೆಸ್ ಇಂದಿನ ನಟಿಯರಿಗೆ ಪೈಪೋಟಿ ನೀಡುತ್ತಿದೆ. ಊರ್ಮಿಳಾ ಮಾತೋಂಡ್ಕರ್ ಅವರು ತನಗಿಂತ 10 ವರ್ಷ ಚಿಕ್ಕವರಾದ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ವಿವಾಹವಾದರು. ಊರ್ಮಿಳಾ ತನ್ನ 8 ವರ್ಷಗಳ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದ್ದು, ಇದೀಗ ಡೈವೋರ್ಸ್‌ಗೆ ಅಪ್ಲೈ ಮಾಡಿದ್ದಾರೆ. ಹೀಗಾಗಿ ಈಗ ಕೊಂಚ ಸುದ್ದಿಯಲ್ಲಿದ್ದಾರೆ.
50ರ ಹರೆಯದ ಊರ್ಮಿಳಾ ಮಾತೋಂಡ್ಕರ್ ಅವರನ್ನು ನೋಡಿದರೆ ಅವರ ವಯಸ್ಸು ಎಷ್ಟು ಎಂದು ಕಂಡುಹಿಡಿಯುವುದು ಕಷ್ಟ. ಆಕೆಯ ಮುಖದ ಹೊಳಪು ಮತ್ತು ಫಿಟ್ನೆಸ್ 30 ವರ್ಷ ವಯಸ್ಸಿನ ನಟಿಯರಂತೆಯೇ ಇದೆ. ಊರ್ಮಿಳಾ ಟೂರ್ ಹೋಗುವುದನ್ನು ಇಷ್ಟಪಡುತ್ತಾಳೆ ಮತ್ತು ಆಗಾಗ್ಗೆ ಪ್ರಯಾಣಿಸುತ್ತಾಳೆ. ಇದು ಆಕೆಯ ಮಾನಸಿಕ ಸದೃಢತೆಗೆ ಉತ್ತಮ ವ್ಯಾಯಾಮವಿದ್ದಂತೆ ಇದೆಯಂತೆ. ಆದರೆ, ಈ ವಯಸ್ಸಿನಲ್ಲೂ ಆಕೆ ಕ್ರಿಯಾಶೀಲಳಾಗಿರಲು ಆಹಾರ ಕ್ರಮ, ಸಮತೋಲಿತ ಜೀವನಶೈಲಿ ಹಾಗೂ ಉತ್ತಮ ದಿನಚರಿಯೇ ಕಾರಣ.
ಮುಖದ ಹೊಳಪಿನ ಜೊತೆಗೆ ದೇಹವನ್ನು ಆಕಾರದಲ್ಲಿಡಲು ಊರ್ಮಿಳಾ ಮಾತೋಂಡ್ಕರ್ ಒಂದು ಫಿಟ್ನೆಸ್ ಕ್ರಮ ಕಾಪಾಡಿಕೊಳ್ಳುತ್ತಾರೆ. ಊರ್ಮಿಳಾ ಈ ವಯಸ್ಸಿನಲ್ಲೂ ತನ್ನನ್ನು ತಾನು ಫಿಟ್ ಆಗಿ ಮತ್ತು ಯಂಗ್ ಆಗಿ ಇಟ್ಟುಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಾಳೆ. ಊರ್ಮಿಳಾ ತನ್ನ ದಿನಚರಿಯನ್ನು ಬಾಲಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಪ್ರಾರಂಭಿಸುತ್ತಾರೆ. ಅವಳು ಬೇಗನೆ ಎಚ್ಚರಗೊಳ್ಳುತ್ತಾಳೆ ಮತ್ತು ಪ್ರತಿದಿನ ಕೆಲವು ಸರಳ ಯೋಗಾಸನಗಳನ್ನು ಮಾಡುತ್ತಾಳೆ. ಅದ್ಕೂ ಮೊದಲು ನಿಂಬೆ ಮತ್ತು ಜೇನುತುಪ್ಪ ಸೇರಿಸಿದ ಒಂದು ದೊಡ್ಡ ಲೋಟ ನೀರನ್ನು ಕುಡಿಯುತ್ತಾಳೆ. ಇದು ಅವಳ ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.
ಅವಳು ವ್ಯಾಯಾಮ ಮಾಡಲು ಮರೆಯುವುದಿಲ್ಲ. ಪ್ರತಿದಿನ ನಿಯಮಿತವಾಗಿ ಜಿಮ್‌ಗೆ ಹೋಗುತ್ತಾಳೆ. ತನ್ನ ದೇಹವನ್ನು ಶೇಪ್‌ನಲ್ಲಿ ಇಟ್ಟುಕೊಳ್ಳಲು ವಿಭಿನ್ನ ವ್ಯಾಯಾಮಗಳನ್ನು ಮಾಡುತ್ತಾಳೆ. ದೈನಂದಿನ ವ್ಯಾಯಾಮಗಳು ಹೃದಯದ ಆರೋಗ್ಯವನ್ನು ಸುಧಾರಿಸಲು, ಸ್ನಾಯುಗಳನ್ನು ಬಲಪಡಿಸಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ವಯಸ್ಸಾದಂತೆ ಮುಖ್ಯವಾಗಿದೆ.
ಇದರೊಂದಿಗೆ ಊರ್ಮಿಳಾ ಅವರ ದಿನಚರಿಯಲ್ಲಿ ಯೋಗವೂ ಸೇರಿಕೊಂಡಿದೆ. ಯೋಗ ಅವಳನ್ನು ದೈಹಿಕವಾಗಿ ಆರೋಗ್ಯವಾಗಿರಿಸುತ್ತದೆ, ಜತೆಗೆ ಅವಳ ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಯೋಗ 40 ವರ್ಷ ವಯಸ್ಸಿನ ನಂತರ ಜನರಿಗೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದು ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚಿಸಲು, ದೇಹ ಮತ್ತು ಮನಸ್ಸನ್ನು ವಿಶ್ರಾಂತಿ ಮಾಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೆಂಡ್ತಿ ವರ್ಜಿನ್ ಆಗಿರ್ಬೇಕು ಅನ್ಬೇಡಿ! ಅದು ಒಂದು ರಾತ್ರಿಯಲ್ಲಿ ಕಳೆದುಹೋಗುತ್ತೆ ಅಂತಿದ್ದಾರೆ ಪ್ರಿಯಾಂಕಾ ಚೋಪ್ರಾ!
ಊರ್ಮಿಳಾ ಧ್ಯಾನ ಮಾಡಲು ಮರೆಯುವುದಿಲ್ಲ. ಧ್ಯಾನವು ಅವಳನ್ನು ಮಾನಸಿಕವಾಗಿ ಚುರುಕಾಗಿರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಧ್ಯಾನವು ಏಕಾಗ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ವಯಸ್ಸಿನೊಂದಿಗೆ, ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕ ಸದೃಢತೆಯೂ ಮುಖ್ಯವಾಗುತ್ತದೆ.
ಊರ್ಮಿಳಾ ತಮ್ಮ ಆಹಾರ ಕ್ರಮದ ಬಗ್ಗೆಯೂ ವಿಶೇಷ ಗಮನ ಹರಿಸುತ್ತಾರೆ. ಅಗತ್ಯವಾದ ಪ್ರೋಟೀನ್‌ಗಳು ಮತ್ತು ಖನಿಜಗಳನ್ನು ಹೊಂದಿರುವ, ಮನೆಯಲ್ಲೇ ಬೇಯಿಸಿದ ಆಹಾರವನ್ನು ಸೇವಿಸುವತ್ತ ಅವಳು ಆದ್ಯತೆ ನೀಡುತ್ತಾಳೆ. ಅವಳು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಹೊರಗಿನ ಆಹಾರವನ್ನು ತಿನ್ನುತ್ತಾಳೆ. ಆಕೆಯ ಆಹಾರವು ಪೋಷಕಾಂಶಗಳ ಮಿಶ್ರಣ. ಇದು 50 ನೇ ವಯಸ್ಸಿನಲ್ಲಿ ಆಕೆಗೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
26 ವರ್ಷದ ಬಳಿಕ 'ನೀಲಾಂಬರಿ'ಯ ರಹಸ್ಯ ಬಿಚ್ಚಿಟ್ಟ ನಿರ್ದೆಶಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.