
ಸದ್ಯ ರಾಜಮೌಳಿ ಸಿನಿಮಾಕ್ಕಾಗಿ ಹಾಲಿವುಡ್ ಮತ್ತು ಟಾಲಿವುಡ್ ನಡುವೆ ರನ್ನಿಂಗ್ ರೇಸ್ ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ವರ್ಜಿನಿಟಿ ಬಗ್ಗೆ ಮಾತನಾಡಿದ್ದಾರೆ. ಹೆಂಡತಿ ವರ್ಜಿನ್ ಆಗಿರಬೇಕು ಅಂತೆಲ್ಲ ಗಂಡಂದಿರು ಬಯಸಬಾರದು ಎಂದ ಪಿಂಕಿ ಮಾತಿಗೆ ಬೇರೆ ಬೇರೆ ಬಗೆಯ ಕಾಮೆಂಟ್‌ಗಳು ಹರಿದು ಬರ್ತಿವೆ. ಆದರೆ ಪ್ರಿಯಾಂಕಾ ಈ ಮಾತು ಹೇಳಿರೋದಕ್ಕೂ ಒಂದು ರೀಸನ್ನಿದೆ. ಅದನ್ನು ಕೇಳಿದ್ರೆ ನೀವೂ ಪಿಂಕಿ ಮಾತು ಸರಿ ಅಂತ ಥಂಬ್ಸ್‌ಅಪ್ ಮಾಡ್ತೀರ. ಅಷ್ಟಕ್ಕೂ ಪ್ರಿಯಾಂಕಾ ಚೋಪ್ರಾ ಮೊದಲಿಂದಲೂ ನೇರ ಮಾತಿಗೆ ಫೇಮಸ್. ಆಕೆ ಮಾತಿಗೆ ಪಾಲಿಶ್ ಹಾಕಿ ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತನಾಡೋದು ಕಡಿಮೆ. ಬದಲಿಗೆ ಬುಲೆಟ್‌ನಂತೆ ನೇರ ತಾಕುವ ಹಾಗೆ ಮಾತಾಡ್ತಾರೆ. ಟೆಡ್ ಟಾಕ್ ನಂಥಾ ಪ್ಲಾಟ್‌ಫಾರ್ಮ್‌ಗಳಿಂದ ಹಿಡಿದು ಅನೇಕ ಪಾಡ್‌ಕಾಸ್ಟ್‌ಗಳವರೆಗೆ ಅನೇಕ ಕಡೆ ಪ್ರಿಯಾಂಕಾ ಮಾತಾಡ್ತಾ ಇರುತ್ತಾರೆ. ಎಷ್ಟೋ ವೇದಿಕೆಯಲ್ಲಿ ಅವರು ಮೋಟಿವೇಶನ್ ಸ್ಪೀಚ್ ಮಾಡಿದ್ದೂ ಇದೆ.
ಹಾಗೆಂದು ಸ್ಟೈಲಿನಲ್ಲೂ ಈಕೆ ಹಿಂದೆ ಬಿದ್ದವರಲ್ಲ. ಹತ್ತು ದಿನಗಳ ಹಿಂದೆ ಈಕೆಯ ತಮ್ಮ ಸಿದ್ಧಾರ್ಥ ಚೋಪ್ರಾ ಮದುವೇಲಿ ಈ ನಟಿ ಮಿಂಚಿದ್ದೇ ಮಿಂಚಿದ್ದು. ಈಕೆಗಿಂತಲೂ ಈಕೆ ತೊಟ್ಟು ಎಪ್ಪತ್ತು ಕೋಟಿ ಬೆಲೆಬಾಳುವ ಮನೀಷ್ ಮಲ್ಹೋತ್ರ ವಿನ್ಯಾಸದ ನೆಕ್ಲೆಸ್ ಮಿಂಚಿತ್ತು. 200 ಕ್ಯಾರೆಟ್ ಪಚ್ಚೆ ಮತ್ತು ವಜ್ರಗಳಿಂದ ಮಾಡಲ್ಪಟ್ಟ ಬಲ್ಗರಿ ಹಾರವಂತೆ ಇದು. ಮೆಡಿಟರೇನಿಯನ್ ಕಡಲಿನ ಸಸ್ಯವಾದ ಕ್ಯಾಪೆಲ್ವೆನೆರೆಯಿಂದ ಸ್ಫೂರ್ತಿ ಪಡೆದು ಇದನ್ನು ಮನೀಷ್ ಆಂಡ್ ಟೀಮ್ ತಯಾರು ಮಾಡಿದೆ. 71.24 ಕ್ಯಾರೆಟ್ ಡೈಮಂಡ್ ಹರಳುಗಳು,ಪಚ್ಚೆ ಮಣಿಗಳಿಂದ ಭರ್ಜರಿ 130.77 ಕ್ಯಾರೆಟ್ ತೂಗುತ್ತಿದ್ದ ತೊಲಗಾತ್ರದ ಈ ನೆಕ್ಲೆಸ್‌ಗೆ 'ದಿ ಎಮರಾಲ್ಡ್ ವೀನಸ್' ಅನ್ನೋ ಹೆಸರಿಸಲಾಗಿದೆ. ಇದನ್ನು ತಯಾರಿಸಲು 1600 ಗಂಟೆಗಳನ್ನು ತೆಗೆದುಕೊಂಡಿದೆ ಅಂತೆಲ್ಲ ಸಿಕ್ಕಾಪಟ್ಟೆ ಸುದ್ದಿ ಆಗಿತ್ತು.
26 ವರ್ಷದ ಬಳಿಕ 'ನೀಲಾಂಬರಿ'ಯ ರಹಸ್ಯ ಬಿಚ್ಚಿಟ್ಟ ನಿರ್ದೆಶಕ
ಈಗ ವಿಷಯಕ್ಕೆ ಬರಾಣ, ನಮ್ ಪಿಂಕಿ ಮಾತಾಡಿದ್ದು ಸದ್ಯಕ್ಕೆ ಸಖತ್ ಸೌಂಡ್ ಮಾಡ್ತಿದೆ. ರಿಲೇಶನ್‌ಶಿಪ್ ಬಗ್ಗೆ ಈ ಹಿಂದೆ ಮಾತನಾಡಿದ್ದ ಪ್ರಿಯಾಂಕಾ, 'ನನ್ನ ಹಿಂದಿನ ಅನುಭವಗಳಿಂದ ನನಗೆ ಡೇಟಿಂಗ್ ಮಾಡಲು ಹಿಂಜರಿಕೆ ಆಗುತ್ತಿತ್ತು. ನನಗೆ ಕೌಟುಂಬಿಕ ವಾತಾವರಣ ಬಯಸುವ ವ್ಯಕ್ತಿಯ ಜೊತೆಗೆ ಬದುಕು ಕಟ್ಟಿಕೊಳ್ಳುವುದು ಇಷ್ಟವಿತ್ತು. ಈ ಹಿಂದಿನ ಸಂಬಂಧಗಳಲ್ಲಿ ನನ್ನ ಜೊತೆಗೆ ಇದ್ದವರಿಂದ ನಾನು ಬಹಳ ನೋವನ್ನು ಅನುಭವಿಸಿದ್ದೆ. ಹೀಗಾಗಿಯೇ ಆರಂಭದಲ್ಲಿ ನಿಕ್ ಜೊತೆ ಡೇಟ್ ಮಾಡಲೂ ಹಿಂಜರಿಕೆ ಇತ್ತು' ಅಂದಿದ್ದಾರೆ. ಜೊತೆಗೆ ಅವರಿಗೆ ತಾನು ಜೀವನ ಸಂಗಾತಿಯಾಗಿ ಆರಿಸುವ ಹುಡುಗ ಪ್ರಾಮಾಣಿಕನಾಗಿರಬೇಕು ಅನ್ನೋದು ಬಹಳ ಇತ್ತಂತೆ. ಇದಕ್ಕೂ ಹಿಂದಿನ ಕಹಿ ಅನುಭವಗಳೇ ಕಾರಣವಂತೆ. ತಾನು ತನ್ನ ಮದುವೆ ಆಗುವ ಹುಡುಗ ಹೀಗಿರಬೇಕು ಅಂತ ಒಂದು ಲಿಸ್ಟ್ ಹಾಕ್ಕೊಂಡಿದ್ರಂತೆ ಪ್ರಿಯಾಂಕಾ. ಅವೆಲ್ಲ ನಿಕ್ ಬಳಿ ಇದ್ದ ಕಾರಣ ಮದುವೆ ಆದರಂತೆ. ಇಲ್ಲವಾದರೆ ಆತನ ಕೈ ಹಿಡಿಯುತ್ತಿರಲಿಲ್ವಂತೆ.
ಉಪೇಂದ್ರ ಹುಡುಕಿಕೊಂಡು ಮಂಗಳೂರಿಗೆ ಹೋಗಿದ್ರಂತೆ ಅನುರಾಗ್ ಕಶ್ಯಪ್!
ಇಂಥಾ ಪಿಂಕಿ ಇದೀಗ ಗಂಡಂದಿರೆಲ್ಲ ತಮ್ಮ ಹೆಂಡತಿ ವರ್ಜಿನ್ ಆಗಿರಬೇಕು ಅಂತ ಬಯಸಬಾರದು. ಅದರ ಬದಲಿಗೆ ಉತ್ತಮ ಗುಣ ನಡತೆಯ ಹುಡುಗಿ ಬೇಕು ಅಂತ ಬಯಸಬೇಕು. ಏಕೆಂದರೆ ವರ್ಜಿನಿಟಿ ಕತೆ ಒಂದು ರಾತ್ರಿಯಲ್ಲಿ ಮುಗಿದುಹೋಗುತ್ತದೆ. ಗುಣ ನಡತೆ ಲೈಫ್‌ಟೈಮ್ ಇರುತ್ತೆ ಅನ್ನೋ ಮಾತನ್ನು ಹೇಳಿದ್ದಾರೆ. ಅದಕ್ಕೆ ಒಬ್ಬ ಪುಣ್ಯಾತ್ಮ ಉತ್ತಮ ಗುಣನಡತೆ ಇರುವ ಹುಡುಗಿ ಎಂದೂ ವರ್ಜಿನಿಟಿ ಕಳೆದುಕೊಳಲ್ಲ ಅನ್ನೋ ಮಾತು ಹೇಳಿ ನೆಟ್ಟಿಗರ ಕೈಯಿಂದ ಹಿಗ್ಗಾಮಗ್ಗ ಝಾಡಿಸಿಕೊಂಡಿದ್ದಾನೆ. ಇದನ್ನ ಹುಡುಗರಿಗೂ ಅಪ್ಲೈ ಮಾಡಿ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯಕ್ಕಂತೂ ಪಿಂಕಿ ಮಾತು ಸಖತ್ ಟ್ರೆಂಡಿಂಗ್ ಅಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.