ಗೌತಮ್ ಮಲತಾಯಿ ಅಲ್ಲವಾ ಶಕುಂತಲಾ? ಜೈದೇವ್ ಮಾತು ಕೇಳಿ ಬೆಕ್ಕಸ ಬೆರಗಾಗಿ ನ್ಯಾಯ ಬೇಕೆಂದ ವೀಕ್ಷಕರು!

Published : Feb 17, 2025, 06:59 PM ISTUpdated : Feb 17, 2025, 07:15 PM IST
ಗೌತಮ್ ಮಲತಾಯಿ ಅಲ್ಲವಾ ಶಕುಂತಲಾ? ಜೈದೇವ್ ಮಾತು ಕೇಳಿ ಬೆಕ್ಕಸ ಬೆರಗಾಗಿ ನ್ಯಾಯ ಬೇಕೆಂದ ವೀಕ್ಷಕರು!

ಸಾರಾಂಶ

Gautham Divan and Shakuntala: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ದೇವಿ ಖಳನಾಯಕಿ ಎಂದು ಬಿಂಬಿಸಲಾಗಿದ್ದು, ಗೌತಮ್ ದಿವಾನ್ ಮಲತಾಯಿ ಎಂದು ಪರಿಚಯಿಸಲಾಗಿದೆ. ಆದರೆ ಇದೀಗ ಬಿಡುಗಡೆಯಾದ ಪ್ರೋಮೋದಲ್ಲಿ ಶಕುಂತಲಾ ಗೌತಮ್‌ಗೆ ಮಲತಾಯಿ ಅಲ್ಲ ಎಂಬ ಸುಳಿವು ಸಿಕ್ಕಿದ್ದು, ವೀಕ್ಷಕರಲ್ಲಿ ಕುತೂಹಲ ಮೂಡಿದೆ.

Kannada Serial Amruthadhaare: ಒಂದು ಧಾರಾವಾಹಿ ಯಶಸ್ಸು ಆಗಬೇಕಾದ್ರೆ ಅಲ್ಲಿ ಟ್ವಿಸ್ಟ್‌ಗಳು ಇರಲೇಬೇಕು. ಇಲ್ಲಾಂದ್ರೆ ಜನರು ಧಾರಾವಾಹಿ ವೀಕ್ಷಣೆ ಮಾಡೋದನ್ನೇ ನಿಲ್ಲಿಸುತ್ತಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ಆರಂಭದಿಂದಲೂ ಗಟ್ಟಿ ಕಥೆ, ಅರ್ಥಗರ್ಭಿತ ಸಂಭಾಷಣೆ ಮತ್ತು ಕಲಾವಿದರ ಸಹಜ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದೆ. ಆರಂಭದಿಂದ ಇಂದಿನವರೆಗೂ ಶಕುಂತಲಾ ದೇವಿ ಸೀರಿಯಲ್‌ನ ಖಳನಾಯಕಿ ಎಂದು ಬಿಂಬಿಸಲಾಗಿದೆ. ಗೌತಮ್ ದಿವಾನ್ ಮಲತಾಯಿ ಎಂದೇ ಶಕುಂತಲಾ ಪಾತ್ರವನ್ನು ಪರಿಚಯಿಸಲಾಗಿದೆ. ಇಂದು ಬಿಡುಗಡೆಯಾದ ಪ್ರೋಮೋ ನೋಡಿದ ವೀಕ್ಷಕರಲ್ಲಿ  ಗೌತಮ್ ಮಲತಾಯಿ ಅಲ್ಲವಾ ಶಕುಂತಲಾ ಅಲ್ಲವಾ? ಹಾಗಾದ್ರೆ ಶಕುಂತಲಾ ಯಾರು ಎಂಬ ಪ್ರಶ್ನೆ ಮೂಡಿದೆ. 

ಗೌತಮ್‌ನನ್ನು ಕಂಪನಿಯ ಚೇರ್‌ಮ್ಯಾನ್ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಜಯದೇವ್ ಪ್ಲಾನ್ ಮಾಡಿದ್ದನು. ಆದ್ರೆ ಕೊನೆ ಕ್ಷಣದಲ್ಲಿ ಆಫಿಸ್‌ಗೆ ಬಂದ ಭೂಮಿಕಾ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದಳು. ಕಂಪನಿಯ ಶೇ.51ರಷ್ಟು ಷೇರುಗಳು ಗೌತಮ್ ಮತ್ತು ಶೇ.25ರಷ್ಟು ಷೇರು ಅವರ ತಂಗಿ ಸುಧಾ ಹೆಸರಿನಲ್ಲಿದೆ. ಇನ್ನುಳಿದ ಶೇ.24ರಷ್ಟು ಷೇರು ಪಬ್ಲಿಕ್ ಬಳಿಯಲ್ಲಿವೆ.  ಹಾಗಾಗಿ ಸುಧಾ ತೀರ್ಮಾನದಂತೆ ಗೌತಮ್ ದಿವಾನ್ ಚೇರ್‌ಮ್ಯಾನ್ ಆಗಿ ಮುಂದುವರಿದರು. ಇದರಿಂದ ಕೆರಳಿ ಕೆಂಡವಾಗಿರುವ ಶಕುಂತಲಾ ಮತ್ತು ಜೈದೇವ್ ನಡುವೆ ಮಾತಿನ ಚಕಮಕಿ ಉಂಟಾಗಿದೆ. 

ತಾಯಿ ಶಕುಂತಲಾ ಮುಂದೆ ಆಕ್ರೋಶದ ಮಾತುಗಳನ್ನಾಡಿರುವ ಜೈದೇವ್ ತಮ್ಮ ಈ ಸ್ಥಿತಿಗೆ ಕಾರಣ ತಂದೆಯೇ ಕಾರಣ. ಅವನನ್ನು ಹೇಗೆ ನೀನು ಮದುವೆಯಾದ ಅಮ್ಮಾ.. ನೋಡಲು ದೊಡ್ಡ ಮನೆ, ದಿವಾನ್ ಕುಟುಂಬ. ಆದ್ರೆ ನಾವೆಲ್ಲಾ ಗುಲಾಮರಂತೆ ಬದುಕುತ್ತಿದ್ದೇವೆ. ನಮ್ಮ ಇಂದಿನ ಈ ದಯನೀಯ ಸ್ಥಿತಿಗೆ ನಿನ್ನ ಗಂಡನೇ ಕಾರಣ. ಗೌತಮ್ ದಿವಾನ್ ಮನೆತನ ಹಾಗೆ, ಹೀಗೆ ಅಂತ ದೊಡ್ಡ ದೊಡ್ಡ ಸ್ಪೀಚ್ ನೀಡುತ್ತಾರೆ. ನಮಗೆ ಆಗುತ್ತಿರೋ ಅನ್ಯಾಯ ಯಾರಿಗೂ ಕಾಣಿಸುತ್ತಿಲ್ಲ ಯಾಕೆ ಎಂದು ತಾಯಿ ಶಕುಂತಲಾ ಮುಂದೆ ಜೈದೇವ್  ಆಕ್ರೋಶ ಹೊರಹಾಕಿದ್ದಾನೆ. 

ಮನಸ್ಸಲ್ಲಿ ಹತ್ತು ಜನ್ಮಕ್ಕೆ ಆಗುವಷ್ಟು ಉರಿ ಇದ್ರೂ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಬದುಕುತ್ತಿದ್ದೇವೆ. ಇಂತಾ ಒಂದು ದಿನ ಬರುತ್ತೆ ಅಂತ ನಮ್ಮ ಕೈಗೆ ಚೊಂಬು ಕೊಟ್ಟಿ ಹೋಗಿದ್ದಾನೆ. ಇಂತಹವನ್ನು ಹೇಗೆ ಮದುವೆಯಾದೆ? ಯಾವ ಸೌಭಾಗ್ಯಕ್ಕೆ ನಮ್ಮನ್ನು ಹುಟ್ಟಿಸಬೇಕಿತ್ತು? ನಮ್ಮನ್ನು ಹುಟ್ಟಿಸಿದ ಅಪ್ಪ, ನಿನ್ನ ಗಂಡ ಒಬ್ಬ ನಾಲಾಯಕ್.  ಎಲ್ಲಾ ಆಸ್ತಿಯನ್ನು ಅವರಿಬ್ಬರ  ಹೆಸರಿಗೆ ಬರೆದರೆ ನಾವೇನು ಮಾಡಬೇಕು ಎಂದು ಜೈದೇವ್ ಪ್ರಶ್ನೆ ಮಾಡಿದ್ದಾನೆ.

ಇದನ್ನೂ ಓದಿ: ಅಮೃತಧಾರೆ ಚಿತ್ರೀಕರಣದಲ್ಲಿ ಏನಾಯ್ತು ನೋಡಿ: ವೈರಲ್ ಆಯ್ತು ವಿಡಿಯೋ

ಎಲ್ಲಾ ಆಸ್ತಿಯನ್ನು ಗೌತಮ್  ಮತ್ತು ಸುಧಾಗೆ ನೀಡಿರೋದನ್ನು ಪ್ರಶ್ನೆ ಮಾಡಿರುವ ಜೈದೇವ್‌ ಮಾತಿನಲ್ಲಿ ನ್ಯಾಯವಿದೆ ಅಲ್ಲವಾ ಎಂದು ವೀಕ್ಷಕರು ಕೇಳುತ್ತಿದ್ದಾರೆ. ಗೌತಮ್ ದಿವಾನ್ ಎರಡು ಮದುವೆಯಾಗಿದ್ರೆ ಶಕುಂತಲಾ ಮತ್ತು ಆಕೆಯ ನಾಲ್ಕು ಮಕ್ಕಳಿಗೆ  ಏನಾದ್ರು ಆಸ್ತಿ ಕೊಡಬೇಕಿತ್ತು. ಆದ್ರೆ ಇಲ್ಲಿ ಎಲ್ಲವೂ ಗೌತಮ್ ಮತ್ತು ಸುಧಾ ಹೆಸರಿನಲ್ಲಿದೆ. ಹಾಗಾದ್ರೆ ಶಕುಂತಲಾ ಮಲತಾಯಿ ಅಲ್ಲವಾ? ದಿವಾನ್ ಕುಟುಂಬಕ್ಕೂ ಶಕುಂತಲಾಗೆ ಲಿಂಕ್ ಏನು? ಹಾಗಾದ್ರೆ ಶಕುಂತಲಾ ಗಂಡ ಯಾರು ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಹುಟ್ಟಿಕೊಂಡಿವೆ. 

ಈ ಹಿಂದೆ ಗೌತಮ್ ದಿವಾನ್ ಸತ್ತು ಹೋಗಿದ್ದಾಳೆ ಎಂದುಕೊಂಡಿದ್ದ ತಾಯಿಯನ್ನು ಕರೆತರುವ ಮೂಲಕ ಧಾರಾವಾಹಿಯಲ್ಲಿ ಟ್ವಿಸ್ಟ್ ನೀಡಲಾಗಿತ್ತು.  ಇತ್ತೀಚೆಗಷ್ಟೇ ಜೀವ ಮತ್ತು ಮಹಿಮಾ ಪಾತ್ರವೂ ಬದಲಾಗಿತ್ತು. ಇದೀಗ ಶಕುಂತಲಾ ಯಾರು ಎಂಬ ಪ್ರಶ್ನೆಯನ್ನು ಮುನ್ನಲೆಗೆ ತರೋ ಸುಳಿವನ್ನು ನಿರ್ದೇಶಕರು ನೀಡಿದ್ದಾರೆ.

ಇದನ್ನೂ ಓದಿ: ಆಂಟಿ ಅಂಕಲ್ ಕಥೆ ಅಂತ ಜನ ಬೈಯ್ಯುತ್ತಿದ್ದ ಅಮೃತಧಾರೆ ನಂಬರ್ 1 ಆಗಿದ್ದು ಹೇಗೆ? ಇದು ಅಮ್ಮಮ್ಮನ ಕೊಡುಗೆಯಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!