ಸೀರೆ ಮೇಲೆ ಬ್ಲೌಸ್ ಹಾಕೊಂಡ ವೈಷ್ಣವಿ ಗೌಡ… Worst outfit ಅಂದು ಬಿಟ್ರು ಜನ

Published : Feb 17, 2025, 11:09 PM ISTUpdated : Feb 18, 2025, 09:57 AM IST

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ, ತಮ್ಮ ಮುದ್ದಾದ ಲುಕ್ ಗಳಿಂದಲೆ ಸದಾ ಗಮನ ಸೆಳೆಯುತ್ತಿರುತ್ತಾರೆ. ಆದರೆ ಈ ಬಾರಿ ಯಾಕೋ ಅವರ ಲುಕ್ ಕೈಕೊಟ್ಟಂತೆ ಕಾಣಿಸುತ್ತಿದೆ.   

PREV
19
ಸೀರೆ ಮೇಲೆ ಬ್ಲೌಸ್ ಹಾಕೊಂಡ ವೈಷ್ಣವಿ ಗೌಡ… Worst outfit ಅಂದು ಬಿಟ್ರು ಜನ

ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ತಮ್ಮ ನಟನೆಯ ಮೂಲಕವೇ ಮೋಡಿ ಮಾಡುತ್ತಿರುವ ನಟಿ ವೈಷ್ಣವಿ ಗೌಡ. ಇವರಿಗೆ ಸಾಕಷ್ಟು ಅಭಿಮಾನಿಗಳು ಸಹ ಇದ್ದಾರೆ. 
 

29

ಅಗ್ನಿ ಸಾಕ್ಷಿ ಧಾರಾವಾಹಿಯಿಂದ ಆರಂಭವಾದ ವೈಷ್ಣವಿ ಗೌಡ ಜರ್ನಿ, ನಂತರ ಬಿಗ್ ಬಾಸ್ ಮೂಲಕ ಕನ್ನಡಿಗರ ಮನೆ ಮನೆಗೆ ಮುಟ್ಟುವವರೆಗೂ ಜನಪ್ರಿಯತೆ ಪಡೆದಿದ್ದರು. ಇವರು ಮುಗ್ಧತೆಯೇ ಬಿಗ್ ಬಾಸ್ ಮನೆಯ ಮುಖ್ಯವಾದ ಹೈಲೈಟ್ ಆಗಿದ್ದು. 
 

39

ಆದಾದ ಬಳಿಕ ಸೀತಾ ರಾಮ ಸೀರಿಯಲ್ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಿದ್ರು, ವೈಷ್ಣವಿ ಗೌಡ. ಸದ್ಯ ಕನ್ನಡಿಗರ ಪ್ರೀತಿಯ ಸೀತಾ, ಸಿಹಿಯ ಸೀತಮ್ಮಾ ಆಗಿಯೇ ಗಮನ ಸೆಳೆಯುತ್ತಿದ್ದಾರೆ. 
 

49

ಯಾವಾಗ್ಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ವೈಷ್ಣವಿ ಹೆಚ್ಚಾಗಿ ತಮ್ಮ ಡ್ಯಾನ್ಸ್ ರೀಲ್ಸ್ ಮೂಲಕ ಸಖತ್ ಸೌಂಡ್ ಮಾಡ್ತಿರುತ್ತಾರೆ. ಡ್ಯಾನ್ಸರ್ ಆಗಿರುವ ವೈಷ್ಣವಿ, ಸಿನಿಮಾ ಹಾಡುಗಳಿಗೆ ಏಕಾಂಗಿಯಾಗಿ ಅಥವಾ ಸೀರಿಯಲ್ ತಂಡದ ಜೊತೆ ಹೆಜ್ಜೆ ಹಾಕುತ್ತಿರುತ್ತಾರೆ. 
 

59

ಅದೂ ಇಲ್ಲಾಂದ್ರೆ ನಟಿ ಜೋಕ್ಸ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಮುದ್ದಾ ಟ್ರೆಡಿಶನಲ್ ಹಾಗೂ ಮಾಡರ್ನ್ ಲುಕ್ ಗೂ ಸಹ ವೈಷ್ಣವಿ ಫೇಮಸ್. ಇವರ ಮಾಡರ್ನ್ ಆಗಿದ್ದರೂ ಡಿಸೆಂಟ್ ಆಗಿರುವ ಡ್ರೆಸ್ಸಿಂಗ್ ಸ್ಟೈಲನ್ನು ಜನ ಇಷ್ಟಪಡುತ್ತಾರೆ. 
 

69

ಸೀರೆಯುಟ್ಟರೆ ಅಂತೂ ವೈಷ್ಣವಿ, ಸಖತ್ ಕ್ಯೂಟ್, ಸೌಂದರ್ಯ ದೇವತೆ ಥರ ಕಾಣಿಸ್ತಾರೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ರೌಂಡ್ಸ್ ಹೊಡಿತಿರೋ ವೈಷ್ಣವಿ ಫೋಟೊ ನೋಡಿ ಮಾತ್ರ ಜನ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. 
 

79

ಅಷ್ಟಕ್ಕೂ ಯಾಕಪ್ಪಾ ಏನಾಗಿದೆ ವೈಷ್ಣವಿ ಗೌಡ ಲುಕ್ ಅಂಥ ನೀವು ಕೇಳೋದು ಬೇಡ, ಯಾಕಂದ್ರೆ ವೈಷ್ಣವಿ ಲುಕ್ ಹೇಗಿದೆ ಅನ್ನೋದನ್ನು ನೀವೆ ಕಣ್ಣಾರೆ ಕಾಣಬಹುದು. ಈ ಫೋಟೊ ನೋಡಿ ಕೆಲವರು ನೀವು ಪ್ರೆಗ್ನೆಂಟಾ ಅಂತಾನೂ ಕೇಳಿದ್ದಾರೆ. 
 

89

ಸುಂದರವಾದ ಹಸಿರು ಬಣ್ಣದ ಸಿಲ್ಕ್ ಸೀರೆಯುಟ್ಟಿರುವ ವೈಷ್ಣವಿ ಗೌಡ, ಅದಕ್ಕೆ ಮ್ಯಾಚ್ ಆಗದೇ ಇರುವಂತಹ ಒಂದು ಕಪ್ಪು  ಬಣ್ಣದ ಟ್ಯೂಬ್ ಟಾಪನ್ನು ಸೀರೆಯ ಮೇಲೆ ಧರಿಸಿದ್ದಾರೆ. ಇದು ಸ್ವಲ್ಪ ವಿಚಿತ್ರ ಕಾಂಬಿನೇಶನ್ ಆಗಿದ್ದು, ಜನ ಈ ಲುಕ್ ನೋಡಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿರುತ್ತಾರೆ. 
 

99

ಇದು ತುಂಬಾನೆ ಕೆಟ್ಟದಾದ ಡ್ರೆಸ್ಸಿಂಗ್ ಸ್ಟೈಲ್, ಈ ಲುಕ್ ಚೆನ್ನಾಗಿ ಕಾಣಿಸ್ತಾನೆ ಇಲ್ಲ, ನಿಮ್ಮ ಸೀರೆ ಚೆನ್ನಾಗಿದೆ ಹಾಗೂ ಟಾಪ್ ಚೆನ್ನಾಗಿದೆ, ಆದರೆ ಎರಡೂ ಒಟ್ಟಾಗಿ ಸೇರಿದ್ರೆ ಮಾತ್ರ ತುಂಬಾ ಕೆಟ್ಟದಾಗಿ ಕಾಣಿಸ್ತಿದೆ ಎಂದಿದ್ದಾರೆ. ಯಾವಾಗ್ಲೂ ಚೆನ್ನಾಗಿ ಡ್ರೆಸ್ ಮಾಡೋ ವೈಷ್ಣವಿ ಇದ್ಯಾಕಪ್ಪಾ ಈ ರೀತಿ ಡ್ರೆಸ್ ಮಾಡ್ಕೊಂಡ್ರು ಗೊತ್ತಿಲ್ಲ. 
 

Read more Photos on
click me!

Recommended Stories