ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿರುವ 42141 ಕೋಟಿ ರೂ ಕಂಪೆನಿ ಒಡೆಯ ಬಿಗ್‌ಬಿ ಅಳಿಯ ನಿಖಿಲ್‌ ಯಾರು?

Published : Feb 17, 2025, 07:47 PM ISTUpdated : Feb 17, 2025, 08:21 PM IST
ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿರುವ 42141 ಕೋಟಿ ರೂ ಕಂಪೆನಿ ಒಡೆಯ ಬಿಗ್‌ಬಿ ಅಳಿಯ ನಿಖಿಲ್‌ ಯಾರು?

ಸಾರಾಂಶ

ಅಮಿತಾಭ್ ಬಚ್ಚನ್ ಅಳಿಯ, ಎಸ್ಕಾರ್ಟ್ಸ್ ಕುಬೋಟಾ ಮುಖ್ಯಸ್ಥ ನಿಖಿಲ್ ನಂದಾ, ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದಾರೆ. ಟ್ರ್ಯಾಕ್ಟರ್ ಡೀಲರ್ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ವಾರ್ಟನ್ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ನಂದಾ, ಕಪೂರ್ ಕುಟುಂಬದೊಂದಿಗೆ ನಂಟು ಹೊಂದಿದ್ದಾರೆ.

ಬೆದರಿಕೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಸಿಲುಕಿರುವ ಬಾಲಿವುಡ್  ಸ್ಟಾರ್ ನಟ ಬಿಗ್‌ ಬಿ  ಅಮಿತಾಭ್ ಬಚ್ಚನ್ ಅಳಿಯನ ನಿಖಿಲ್ ನಂದಾ ಅವರು ಬಂಧನದ ಭೀತಿ ಎದುರಿಸುತ್ತಿದ್ದಾರೆ.   ಟ್ರ್ಯಾಕ್ಟರ್ ಕಂಪನಿಯೊಂದರ ಮಾಲೀಕ  ನಿಖಿಲ್ ನಂದಾ ಅವರ ಆಸ್ತಿ ಮತ್ತು ವಿದ್ಯಾಭ್ಯಾಸದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹುಡುಕಾಟ ಆರಂಭವಾಗಿದೆ.

ಎಸ್ಕಾರ್ಟ್ಸ್ ಕುಬೋಟಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ನಿಖಿಲ್‌ 42,141 ಕೋಟಿ ರೂ.ಗಳ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಅಮಿತಾಬ್‌ ಅವರ ಏಕೈಕ ಮಗಳು ಶ್ವೇತಾ ಬಚ್ಚನ್ ಅವರನ್ನು ವಿವಾಹವಾಗಿದ್ದು, ಕಪೂರ್ ಕುಟುಂಬ ಸೇರಿದಂತೆ ಬಾಲಿವುಡ್ ರಾಜಮನೆತನದ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಮಾರ್ಚ್ 18, 1974 ರಂದು ಜನಿಸಿದ ನಿಖಿಲ್ ನಂದಾ ಕಾರ್ಪೊರೇಟ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಆಗಾಗ ಕೇಳಿ ಬರುವ ಹೆಸರು. ಎಸ್ಕಾರ್ಟ್ಸ್ ಕುಬೋಟಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಂಪನಿಯನ್ನು ಉನ್ನತ ಯಶಸ್ಸಿಗೆ ಕೊಂಡೊಯ್ದಿದ್ದು, ಕಂಪೆನಿಯು 42,141 ಕೋಟಿ ರೂಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಕೃಷಿ ಯಂತ್ರೋಪಕರಣಗಳ ಕ್ಷೇತ್ರದಲ್ಲಿ  ಎಸ್ಕಾರ್ಟ್ಸ್ ಕುಬೋಟಾ ಪ್ರಬಲ ಕಂಪೆನಿಯಾಗಿದೆ.

ಸಂಕಷ್ಟದಲ್ಲಿ ಸಿಲುಕಿದ ಅಮಿತಾಭ್ ಬಚ್ಚನ್ ಅಳಿಯ, FIR ದಾಖಲು: ನಿಖಿಲ್ ನಂದಾ ವಿರುದ್ಧ ಗಂಭೀರ ಆರೋಪ 

ತಮ್ಮ ವ್ಯವಹಾರ ಸಾಧನೆಗಳನ್ನು ಮೀರಿ ಬಾಲಿವುಡ್‌ ಕ್ಷೇತ್ರದಲ್ಲಿರುವ ರಾಜಮನೆತನದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಕಾರಣ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ಪ್ರಸಿದ್ಧ ನಟರಾದ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್  ಅವರನ್ನು ವಿವಾಹವಾಗಿ ಮತ್ತಷ್ಟು ಗುರುತಿಸಿಕೊಂಡರು. ಹೀಗಾಗಿ ವ್ಯಾಪರ-ವ್ಯವಹಾರ ಮತ್ತು ಸಿನೆಮಾ ಈ ಎರಡು ಪ್ರಭಾವಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

 ಶೈಕ್ಷಣಿಕ ಸಾಧನೆ:
ನಿಖಿಲ್ ನಂದಾ ಡೆಹ್ರಾಡೂನ್‌ನ ಪ್ರತಿಷ್ಠಿತ ಡೂನ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದ ಬಳಿಕ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಗೌರವಾನ್ವಿತ ವಾರ್ಟನ್ ಶಾಲೆಯಲ್ಲಿ ವ್ಯವಹಾರ ನಿರ್ವಹಣೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಜೊತೆಗೆ ಹಣಕಾಸು ಮತ್ತು ಮಾರ್ಕೆಟಿಂಗ್‌ನಲ್ಲಿ ಪರಿಣತಿ ಇದ್ದ ಕಾರಣ ಎಸ್ಕಾರ್ಟ್ಸ್ ಕುಬೋಟಾ ಲಿಮಿಟೆಡ್‌ನಲ್ಲಿ ಅಧಿಕಾರ ವಹಿಸಿಕೊಂಡು ಕಂಪೆನಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು.  

ಅಮಿತಾಬ್ ಪುತ್ರಿ ಶ್ವೇತಾ ಜೊತೆ ಮದುವೆಗೂ ಮೊದಲೇ ಇತ್ತು ಅಳಿಯ ನಿಖಿಲ್ ನಂದಾಗೆ ಬಾಲಿವುಡ್‌ ಲಿಂಕ್

ರಾಜವಂಶದ ನಂಟು:
ನಿಖಿಲ್‌ ನಂದಾ ಬಾಲಿವುಡ್‌ ಜೊತೆಗೆ ಆಳವಾದ ಸಂಬಂಧ ಹೊಂದಿರಲು ಕಾರಣವಿದೆ. ಬಾಲಿವುಡ್‌ನ ಐಕಾನಿಕ್ ಕಪೂರ್ ಕುಟುಂಬದ ರಕ್ತ ಅವರ ಮೈಯಲ್ಲಿದೆ. ಕಪೂರ್‌ ಕುಟುಂಬದ ದಂತಕತೆ ನಟ ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ಕಪೂರ್ ಅವರ ಪುತ್ರಿ ರಿತು ನಂದಾ ಅವರ ಮಗ. ಹೀಗಾಗಿ ಪ್ರಸಿದ್ಧ ನಟರಾದ ರಿಷಿ ಕಪೂರ್, ರಣಧೀರ್ ಕಪೂರ್ ಮತ್ತು ರಾಜೀವ್ ಕಪೂರ್ ಅವರ ಸೋದರಳಿಯನಾಗಿದ್ದಾರೆ. ಸೋದರಸಂಬಂಧಿಗಳಲ್ಲಿ ಬಾಲಿವುಡ್ ಎ-ಲಿಸ್ಟರ್‌ಗಳಾದ ಕರಿಷ್ಮಾ ಕಪೂರ್, ಕರೀನಾ ಕಪೂರ್ ಖಾನ್ ಮತ್ತು ರಣಬೀರ್ ಕಪೂರ್ ಸೇರಿದ್ದಾರೆ 

ನಿಖಿಲ್ ನಂದಾ ಮತ್ತು ಶ್ವೇತಾ ಬಚ್ಚನ್ ನಂದಾ ಇಬ್ಬರು ಮಕ್ಕಳಾದ ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಅವರ ಪೋಷಕರು. ನವ್ಯಾ ಮಾಡೆಲ್‌ ಮತ್ತು ಪಾಡ್‌ಕ್ಯಾಸ್ಟಿಂಗ್ ಉದ್ಯಮಗಳಿಂದ ತಮ್ಮದೇ ಆದ ಛಾಪು ಮೂಡಿಸಿದ್ದರೆ, ಅಗಸ್ತ್ಯ ಇತ್ತೀಚೆಗೆ ಜೋಯಾ ಅಖ್ತರ್ ಅವರ ನೆಟ್‌ಫ್ಲಿಕ್ಸ್ ಚಲನಚಿತ್ರ "ದಿ ಆರ್ಚೀಸ್" ಮೂಲಕ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಬಂಧನ ಭೀತಿಯಲ್ಲಿ ನಿಖಿಲ್ ನಂದ:
ಕೃಷಿ ಟ್ರ್ಯಾಕ್ಟರ್ ಕಂಪನಿಯ ಡೀಲರ್ ಜೀತೇಂದ್ರ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ ಈ ಸಂಬಂಧ  ಜೀತೇಂದ್ರ ಸಹೋದರ   ನಿಖಿಲ್ ನಂದಾ ಸೇರಿದಂತೆ 9 ಜನರ ವಿರುದ್ದ   ದೂರು ನೀಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ದಾತಾಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.  ಸೋದರ ಜಿತೇಂದ್ರ ಸಾವಿಗೆ ಈ 9 ಜನರು ನೀಡಿದ ಮಾನಸಿಕ ಕಿರುಕುಳ ಕಾರಣ, ಅವರು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖವಿದೆ. 2024 ನವೆಂಬರ್ 22ರಂದು ಜಿತೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ದೂರು ನೀಡಲು ಹೋದಾಗ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆ ಜಿತೇಂದ್ರ ಸೋದರ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ನಿಖಿಲ್ ನಂದಾ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?