ಭಾರತ ಪ್ರವಾಸ ರದ್ದುಗೊಳಿಸಿದ ಆಸಿಸ್ ಪ್ರಧಾನಿ?: ಕಾರಣ ಏನು?

ದಿಢೀರ್ ಭಾರತ ಪ್ರವಾಸ ರದ್ದುಗೊಳಿಸಿದ ಆಸ್ಟ್ರೆಲೀಯಾ ಪ್ರಧಾನಿ| ಮೋದಿ ಭೇಟಿ ಮುಂದೂಡಿದ ಆಸಿಸ್ ಪ್ರಧಾನಿ ಸ್ಕಾಟ್ ಮಾರಿಸನ್| ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವ ಅರಣ್ಯ ನಾಶ ಬಿಕ್ಕಟ್ಟು ಹಿನ್ನೆಲೆ| ಜಪಾನ್‌ ಭೇಟಿಯನ್ನೂ ರದ್ದುಗೊಳಿಸಿದ ಸ್ಕಾಟ್ ಮಾರಿಸನ್| ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ| 

Australia PM Scott Morrison May Cancel India Visit Amid Bushfire Crisis

ಸಿಡ್ನಿ(ಜ.03): ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವ ಅರಣ್ಯ ನಾಶ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಆಸ್ಟ್ರೆಲೀಯಾ ಪ್ರಧಾನಿ ಸ್ಕಾಟ್ ಮಾರಿಸನ್ ಈ ತಿಂಗಳ ಭಾರತ ಪ್ರವಾಸವನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 

Australia PM Scott Morrison May Cancel India Visit Amid Bushfire Crisis

ಮಾರಿಸನ್ ಜನವರಿ 13 ರಿಂದ 16 ರವರೆಗೆ ಭಾರತ ಪ್ರವಾಸ ಕೈಗೊಳ್ಳುವವರಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾರಿಸನ್ ಮಹತ್ವದ ಮಾತುಕತೆ ನಡೆಸುವವರಿದ್ದರು.

Australia PM Scott Morrison May Cancel India Visit Amid Bushfire Crisis

ಆದರೆ ಸದ್ಯ ತಾವು ಭಾರತ ಪ್ರವಾಸ ಕೈಗೊಳ್ಳಲು ಒಲವು ತೋರುತ್ತಿಲ್ಲ ಎಂದು ಹೇಳಿದ್ದು, ಇದಕ್ಕೆ ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವ ಅರಣ್ಯ ನಾಶ ಬಿಕ್ಕಟ್ಟು ಕಾರಣ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೇ ಮಾರಿಸನ್ ಭಾರತದ ಪ್ರವಸಾದ ಬಳಿಕ ಜಪಾನ್‌ಗೂ ಭೇಟಿ ನೀಡುವ ಉದ್ದೇಶವಿತ್ತು. ಆದರೆ ಈ ಪ್ರವಾಸವನ್ನೂ ಅವರು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
Australia PM Scott Morrison May Cancel India Visit Amid Bushfire Crisis

ಆಸ್ಟ್ರೇಲಿಯಾ ಪ್ರಧಾನಿಯ T20 ವಿಶ್ವಕಪ್ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ!

ಈ ಕುರಿತು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದ್ದು, ದೇಶಕಾರ್ಯ ನಿಮಿತ್ತ ಮಾರಿಸನ್ ತಮ್ಮ ವಿದೇಶ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿದೆ.

Latest Videos
Follow Us:
Download App:
  • android
  • ios