ಆ್ಯಂಟಿಕ್ ಅಂತ ಮನೇನಲ್ಲಿ ಏನೇನೋ ಇಟ್ಕೋಬೇಡಿ!
ಆ್ಯಂಟಿಕ್ ವಸ್ತುಗಳ ಸಂಗ್ರಹಣೆ ಒಂದು ಅಪರೂಪದ ಹಾಗೂ ಸ್ಪಲ್ಪ ದುಬಾರಿ ಹವ್ಯಾಸ. ನಾಣ್ಯಗಳು, ಒಡವೆಗಳು, ಪಿಠೋಪಕರಣಗಳು ಮತ್ತು ಬಟ್ಟೆಗಳು ಹೆಚ್ಚಾಗಿ ಸಂಗ್ರಹಿಸಲ್ಪಡುವ ಆ್ಯಂಟಿಕ್ ವಸ್ತುಗಳ ಪಟ್ಟಿಗೆ ಸೇರುತ್ತವೆ. ಹಳೇ ಪಿಠೋಪಕರಣಗಳ ಸಂಗ್ರಹವೂ ಪುರಾತನ ವಸ್ತುಗಳ ಸಂಗ್ರಹದಲ್ಲಿ ಅತಿ ಜನಪ್ರಿಯವಾಗಿವೆ. ಆ್ಯಂಟಿಕ್‌ಗಳ ಮೇಲೆ ಹೂಡುವ ಹಣ ಪೋಲಾಗದಿರಲು ಸಂಗ್ರಹಣೆಗೆ ತೊಡಗುವ ಮುನ್ನ ಕೆಲವು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟು ಕೊಂಡರೆ ಒಳ್ಳೆಯದು.
ಯಾವಾಗಲೂ ಅಧಿಕೃತ ಮಾರಾಟಗಾರರಲ್ಲೇ ಆ್ಯಂಟಿಕ್ ಖರೀದಿಸಿ.
ಆ್ಯಂಟಿಕ್ ಎಂದರೆ ಪ್ರಾಚೀನ ವಸ್ತು, ಹಳೆಯ ಕಲಾಕೃತಿ, ಪ್ರಾಚೀನ ಕಲಾಕೃತಿ ಎಂದು.
ಆದರೆ ಎಲ್ಲಾ ಹಳೆಯ ವಸ್ತುಗಳು ಆ್ಯಂಟಿಕ್ ಅಲ್ಲ. ಅಸಲಿ ಮತ್ತು ನಕಲಿಯ ನಡುವಿನ ವ್ಯತ್ಯಾಸ ತಿಳಿದಿರಲಿ.
ಆ್ಯಂಟಿಕ್ ವಸ್ತುಗಳ ಬಗ್ಗೆ ಸಾದ್ಯವಾದಷ್ಟು ಅಧ್ಯಯನ ಮಾಡಿ, ಇಲ್ಲ ಎಕ್ಸ್‌ಪರ್ಟ್ ಓಪಿನಿಯನ್ ತಗೊಳ್ಳಿ.
ಯಾವಾಗಲೂ ಖರೀದಿಯ ನಂತರ ರಸೀದಿಯನ್ನು ಪಡೆಯಿರಿ.
ತುಂಬಾ ದುಬಾರಿ ಹಾಗೂ ರೇರ್ ವಸ್ತುಗಳಾದ ಇವುಗಳ ನಿರ್ವಹಣೆಗೆ ಎಕ್ಸ್‌ಟ್ರಾ ಕೇರ್ ಅಗತ್ಯ.
ಸಂಗ್ರಹಿಸಿದ ವಸ್ತುಗಳನ್ನು ಬಿಸಿಲು, ಪ್ರಕಾಶಮಾನವಾದ ಬೆಳಕು, ತೇವಾಂಶ ಅಥವಾ ಅತಿ ಉಷ್ಣಾಂಶಗಳಿಂದ ರಕ್ಷಿಸಿ.
ಆ್ಯಂಟಿಕ್ ವಸ್ತುಗಳಿಗಾಗಿ ಒಂದು ಪ್ರತ್ಯೇಕ ಕ್ಲೀನ್ ರೂಮ್ ಇರಲಿ.
ಹೆಚ್ಚು ಮಾಹಿತಿಗಳನ್ನು ಮ್ಯಾಗಜೀನ್ ಅಥವಾ ಅನ್‌ಲೈನ್ ಮೂಲಕ ಕಲೆ ಹಾಕಿ.
ಒಂದೇ ಕಡೆ ಸೇಮ್ ಸ್ಟೈಲ್ ಮತ್ತು ಟೈಪ್‌ನ ಒಂದಕ್ಕಿಂತ ಹೆಚ್ಚು ವಸ್ತುಗಳು ಇದ್ದರೆ ಅವುಗಳು ಒರಿಜಿನಲ್ ಆಗಿರುವ ಛಾನ್ಸ್ ಕಡಿಮೆ.