ಭೂಮಿಗೆ ಸ್ನೈಪರ್ ಗನ್ ಆಗಿ ಪರಿವರ್ತನೆಗೊಂಡ ಗುರು ಗ್ರಹ| ಗುರು-ಭೂಮಿ ಮಧ್ಯೆ ಶುರುವಾಗಿದೆ ವೈಮನಸ್ಸು| ಜುಪಿಟರ್ ಶೀಲ್ಡ್ ಥಿಯರಿ(ಗುರು ಕವಚ ಸಿದ್ಧಾಂತ)ಗೆ ಎಳ್ಳು-ನೀರು| ಗುರುವಿನ ಗುರುತ್ವ ಬಲದ ಪರಿಣಾಮ ಭೂಮಿಯತ್ತ ನುಗ್ಗುವ ಕ್ಷುದ್ರಗ್ರಹಗಳು| ಮಂಗಳ ಹಾಗೂ ಗುರು ಗ್ರಹಗಳ ಮಧ್ಯೆ ಇರುವ Ateriod Belt ನಲ್ಲಿರುವ ಕ್ಷುದ್ರಗ್ರಹಗಳು| ಖಗೋಳಶಾಸ್ತ್ರಜ್ಞ ಕೆವಿನ್ ಗ್ರೆಜಿಯರ್ ನೇತೃತ್ವದ ತಂಡದಿಂದ ಸಂಶೋಧನೆ|

ವಾಷಿಂಗ್ಟನ್(ಜ.11): ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದ್ದ ಗುರು ಗ್ರಹ, ಅಸಲಿಗೆ ಕ್ಷುದ್ರಗ್ರಹಗಳು ಭೂಮಿಯತ್ತ ತಿರುಗುವಂತೆ ಮಾಡುತ್ತದೆ ಎಂಬುದು ಹೊಸ ಸಂಶೋಧನೆಗಳಿಂದ ಬಹಿರಂಗವಾಗಿದೆ.

ಜುಪಿಟರ್ ಶೀಲ್ಡ್ ಥಿಯರಿ(ಗುರು ಕವಚ ಸಿದ್ಧಾಂತ) ಅನ್ವಯ, ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಕ್ಷುದ್ರಗ್ರಹಗಳ ಪಟ್ಟಿ(Asteriod Belt)ಯಿಂದ ಕ್ಷುದ್ರಗ್ರಹಗಳು ಭೂಮಿಗೆ ಬರದಂತೆ ಗುರು ಗ್ರಹ ತಡೆಯುತ್ತದೆ ಎಂದು ನಂಬಲಾಗಿತ್ತು.

ಸುತ್ತುವೆ ನಿನ್ನನು ಹಗಲಿರುಳು: ಗುರುವಿನ ಮೇಲೆ ಬಿತ್ತು ಐಯೋ ನೆರಳು!

ಆದರೆ ಈ ಸಿದ್ಧಾಂತವನ್ನು ಅಲ್ಲಗಳೆದಿರುವ ಖಗೋಳಶಾಸ್ತ್ರಜ್ಞ ಕೆವಿನ್ ಗ್ರೆಜಿಯರ್, ಅಗಾಧ ಗುರುತ್ವಾಕರ್ಷಣೆ ಬಲ ಹೊಂದಿರುವ ಗುರು ಗ್ರಹ ಕ್ಷುದ್ರಗ್ರಹಗಳನ್ನು ಭೂಮಿಯತ್ತ ಚಿಮ್ಮಿಸುತ್ತದೆ ಎಂದು ಹೇಳಿದ್ದಾರೆ.

ಗುರುವಿನ ಗುರುತ್ವ ಬಲದಿಂದ ಖಾಲಿ ಪ್ರದೇಶದಲ್ಲಿ ಹಾರುವ ಕ್ಷುದ್ರಗ್ರಹಗಳು, ಭೂಮಿಯತ್ತ ನುಗ್ಗುವ ಸಂಭವ ಹೆಚ್ಚು ಎಂದು ಕೆವಿನ್ ವಾದಿಸಿದ್ದಾರೆ.

Scroll to load tweet…

ತನ್ನತ್ತ ಬರುವ ಕ್ಷುದ್ರಗ್ರಹಗಳನ್ನು ಸ್ನೈಪರ್ ಗನ್‌ನಂತೆ ಶೂಟ್ ಮಾಡಿ ಭೂಮಿಯತ್ತ ತಿರುಗಿಸುವಲ್ಲಿ ಗುರು ಗ್ರಹ ನಿಸ್ಸೀಮ ಎಂದು ಕೆವಿನ್ ಹೇಳಿದ್ದಾರೆ.

ನಡುಗಿ ಹೋದ ಗುರು ಗ್ರಹ: ಡಿಕ್ಕಿ ಹೊಡೆಯಿತೊಂದು ಕ್ಷುದ್ರಗ್ರಹ!

ಈ ವಿದ್ಯಮಾನ ಮಂಗಳ ಗ್ರಹಕ್ಕೂ ಗಂಡಾಂತರಕಾರಿ ಎಂದಿರುವ ಕೆವಿನ್ ನೇತೃತ್ವದ ಸಂಶೋಧನಾ ತಂಡ, ಗುರುವಿನ ಅಗಾಧ ಗುರುತ್ವ ಬಲ ಕ್ಷುದ್ರಗ್ರಹಗಳನ್ನು ಭೂಮಿಯವರೆಗೂ ತಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.