Asianet Suvarna News Asianet Suvarna News

ಹೊಸ ಸಂಸತ್ತು, ಹೊಸ ರಾಜಪಥ: ಮೋದಿ ಸರ್ಕಾರದ ಪ್ಲಾನ್‌ ಏನು? ಈಗ ಹೇಗಿದೆ?

ದೇಶದ ರಾಜಕೀಯ ಶಕ್ತಿಕೇಂದ್ರವಾಗಿರುವ ಸಂಸತ್‌ ಕಟ್ಟಡವನ್ನು ನವೀಕರಣಗೊಳಿಸುವ ಅಥವಾ ಹೊಸದೊಂದು ಸಂಸತ್‌ ಭವನ ನಿರ್ಮಿಸುವ ಬೃಹತ್‌ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕೇವಲ ಸಂಸತ್‌ ಭವನ ಮಾತ್ರವಲ್ಲದೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಸುಮಾರು 3 ಕಿ.ಮೀ ಮಾರ್ಗವನ್ನು ಸುಂದರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ನಿರ್ಧರಿಸಿದೆ. ಆದರೆ ಈಗಿರುವ ಸಂಸತ್‌ ಕಟ್ಟಡ ಜಗತ್ತಿನ ಸುಂದರ ಸಂಸತ್ತುಗಳಲ್ಲಿ ಒಂದು. ಹಾಗಿದ್ದೂ ಹೊಸತು ಏಕೆ, ಹೊಸ ರಾಜಕೀಯ ಶಕ್ತಿಕೇಂದ್ರ ಹೇಗಿರಲಿದೆ, ಇವುಗಳ ವಿನ್ಯಾಸಕಾರರು ಯಾರು? ಎಂಬ ವಿವರ ಇಲ್ಲಿದೆ.

Narendra Modi Government To Redevelop Rajpath And Parliament
Author
Bangalore, First Published Sep 14, 2019, 12:46 PM IST

ಕೇಂದ್ರದ ಪ್ಲಾನ್‌ ಏನು?

ದೇಶದ ರಾಜಕೀಯ ಶಕ್ತಿಕೇಂದ್ರ ರಾಷ್ಟ್ರಪತಿ ಭವನದ ಗೇಟ್‌ನಿಂದ ಇಂಡಿಯಾ ಗೇಟ್‌ವರೆಗಿನ ಪ್ರದೇಶದ ಮರುಯೋಜನೆ ಮತ್ತು ಮರು ಅಭಿವೃದ್ಧಿಗೆ ಚಾಲನೆ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಎಡ್ವಿನ್‌ ಲುಟೆನ್ಸ್‌ ವಿನ್ಯಾಸಗೊಳಿಸಿರುವ ಈ ಆಕರ್ಷಕ 3 ಕಿ.ಮೀ ಪ್ರದೇಶದ ಮರು ಅಭಿವೃದ್ಧಿಯ ಮೆಗಾ ಪ್ಲಾನ್‌ ಅನ್ವಯ ಹಾಲಿ ಇರುವ ಸಂಸತ್‌ ಭವನದ ಪಕ್ಕ ಹೊಸ ಸಂಸತ್‌ ಭವನ ನಿರ್ಮಾಣ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಇದು ಸಾಧ್ಯವಾಗದಿದ್ದರೆ ಭವಿಷ್ಯದ ಅಗತ್ಯಕ್ಕೆ ಅನುಗುಣವಾಗಿ ಪ್ರಸಕ್ತ ಕಟ್ಟಡವನ್ನೇ ನವೀಕರಿಸಲಾಗುತ್ತದೆ.

ಹಾಗೆಯೇ ಸದ್ಯ ಹರಡಿಕೊಂಡಿರುವ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು ಒಂದೇ ಕಡೆ ಇರುವ ಬೃಹತ್‌ ಸಚಿವಾಲಯ ಸಮುಚ್ಛಯ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ಸರ್ಕಾರ ಉದ್ದೇಶಿಸಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ ಈ ಪ್ರದೇಶ ಅಭಿವೃದ್ಧಿಗೆ ಈಗಾಗಲೇ ಬಿಡ್‌ ಆಹ್ವಾನಿಸಿದೆ. ಮುಂದಿನ 100-150 ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಸುಭದ್ರ ಮತ್ತು ಸುವ್ಯಸ್ಥಿತ ರಾಜಕೀಯ ಶಕ್ತಿ ಕೇಂದ್ರದ ನಿರ್ಮಾಣ ಕೇದ್ರÓದ ಮೆಗಾ ಪ್ಲಾನ್‌.

ವಾರದಲ್ಲಿ ಮನೆ ಬಿಡಿ, ಮಾಜಿ ಸಂಸದರಿಗೆ ಗಡುವು!: ವಿದ್ಯುತ್, ನೀರು, ಗ್ಯಾಸ್‌ ಕಟ್‌!

ನವ ಭಾರತಕ್ಕೆ ನವ ಸಂಕಲ್ಪ

ಉತ್ತಮ ಆಡಳಿತ, ದಕ್ಷತೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಮಾನತೆ ತತ್ವಗಳ ನವಭಾರತದ ಮೌಲ್ಯ ಮತ್ತು ನಿರೀಕ್ಷೆಗಳನ್ನು ಪ್ರತಿನಿಧಿಸುವ, ಭಾರತೀಯ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳ ಬಿಂಬಿಸುವ ವಿನ್ಯಾಸಕ್ಕೆ ಉದ್ದೇಶಿಸಲಾಗಿದೆ. ದೇಶದ ರಾಜಕೀಯದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮೋದಿ ಸರ್ಕಾರ ಈ ಮೆಗಾ ಪ್ಲಾನ್‌ ಸಿದ್ಧಪಡಿಸಿದೆ.

ಈಗೇಕೆ ಹೊಸ ಸಂಸತ್ತು?

ಈಗಿರುವ ಸಂಸತ್‌ ಕಾರ್ಯಾಲಯ ಸ್ಥಳವು ತೀರಾ ಚಿಕ್ಕದಾಗಿದೆ. ಹೊಸದಾಗಿ ಕ್ಷೇತ್ರ ಮರುವಿಂಗಡಣೆಯಾದಾಗ ಹೆಚ್ಚಿನ ಸಂಸದರಿಗೆ ಸದ್ಯ ಇರುವ ಸಂಸತ್‌ ಭವನದಲ್ಲಿ ಸ್ಥಳಾವಕಾಶ ಕಲ್ಪಿಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಸಂಸತ್‌ ಭವನ ನಿರ್ಮಾಣ ಮಾಡುವ ಅಥವಾ ಇದನ್ನೇ ನವೀಕರಿಸಲು ಕೇಂದ್ರ ನಿರ್ಧರಿಸಿದೆ. ಅಲ್ಲದೆ ಸಚಿವಾಲಯಗಳು ಸುಮಾರು 47 ಕಟ್ಟಡಗಳಲ್ಲಿ ಹಂಚಿಹೋಗಿವೆ.

ಶೀಘ್ರವೇ ನೂತನ ಸಂಸತ್ ಭವನ ನಿರ್ಮಾಣಕ್ಕೆ ಕೇಂದ್ರದ ನಿರ್ಧಾರ?

ಸುಮಾರು 70,000 ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ನಾಥ್‌ರ್‍ ಮತ್ತು ಸೌತ್‌ ಬ್ಲಾಕ್‌ ಭೂಕಂಪನ ಸಂದರ್ಭದಲ್ಲಿ ಸುರಕ್ಷಿತ ಸ್ಥಳವಲ್ಲ. ಅದರ ಜೊತೆಗೆ ಸಾರ್ವಜನಿಕ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ, ಮೂಲಸೌಕರ್ಯ, ಪಾರ್ಕಿಂಗ್‌ ಮತ್ತು ಹಸಿರು ಪ್ರದೇಶವನ್ನು ಮೇಲ್ದರ್ಜೆಗೇರಿಸುವ ಉದ್ದೇಶವೂ ಇದೆ.

ಬಾಡಿಗೆಗೆ ವರ್ಷಕ್ಕೆ 1000 ಕೋಟಿ ಖರ್ಚು

ಮಾಹಿತಿ ಪ್ರಕಾರ ಖಾಸಗಿ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳ ಬಾಡಿಗೆ ಮತ್ತುನಿರ್ವಹಣೆಗೆಂದೇ ಕೇಂದ್ರ ಸರ್ಕಾರ ಪ್ರತಿ ವರ್ಷ 1000 ಕೋಟಿ ಹಣ ವ್ಯಯಿಸುತ್ತಿದೆ. ಒಂದು ವೇಳೆ ಸಚಿವಾಯದ ಬೃಹತ್‌ ಸಮುಚ್ಛಯವಿದ್ದರೆ ಈ ಹಣ ಉಳಿತಾಯವಾಗಲಿದೆ.

ಹೇಗಿರಲಿದೆ ನೂತನ ಸಂಸತ್ತು?

ನೂತನ ಸಂಸತ್‌ ಭವನವನ್ನು ಸ್ಮಾರ್ಟ್‌ ಸಿಟಿ ಲಕ್ಷಣಗಳನ್ನು ಒಳಗೊಂಡಂತೆ ವಿನ್ಯಾಸಗೊಳಿಸಲಾಗುತ್ತದೆ. 1000ಕ್ಕೂ ಹೆಚ್ಚು ಸಂಸದರು ಕೂರಬಲ್ಲ, ವಿಶ್ವದರ್ಜೆಯ, ಅತ್ಯಾಧುನಿಕ ಸೌಲಭ್ಯಗಳನ್ನು ನೂತನ ಸಂಸತ್ತು ಒಳಗೊಂಡಿರಲಿದೆ. ಅದರ ಜೊತೆಗೆ ಸಾರ್ವಜನಿಕ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ, ಮೂಲಸೌಕರ್ಯ, ಪಾರ್ಕಿಂಗ್‌ ಮತ್ತು ಹಸಿರು ಪ್ರದೇಶವನ್ನು ಮೇಲ್ದರ್ಜೆಗೇರಿಸುವ ಉದ್ದೇಶವೂ ಇದೆ. ಸದ್ಯದ ಪ್ರಸ್ತಾಪದಂತೆ ಈಗಿರುವ ಸಂಸತ್‌ ಭವನದ ಬದಲಾಗಿ ಹೊಸ ಸಂಸತ್‌ ಭವನ ನಿರ್ಮಾಣವಾದಲ್ಲಿ ಮೂಲಗಳ ಪ್ರಕಾರ ಹಳೆಯ ಕಟ್ಟಡವನ್ನು ಮ್ಯೂಸಿಯಂ ಮಾಡಲಾಗುತ್ತದೆ. ಹಾಗೆಯೇ ಎಲ್ಲಾ ಸಚಿವರು ಒಂದೇ ಕಡೆ ಕಾರ್ಯನಿರ್ವಹಿಸಲು ಅನುಕೂಲವಾಗಬಲ್ಲ, 70000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸ್ಥಳಾವಕಾಶ ಹೊಂದಿರುವ ಬೃಹತ್‌ ಕೇಂದ್ರ ಸಚಿವಾಲಯ ಕಟ್ಟಡ ನಿರ್ಮಾಣವಾಗಲಿದೆ.

20 ವರ್ಷದ ದಾಖಲೆ ಮುರಿದ ಮೋದಿ ಸರ್ಕಾರ!

ಈಗಿರುವ ಸಂಸತ್‌ ಕಟ್ಟಡ ಹೇಗಿದೆ?

ವಿಶೇಷ ವಾಸ್ತುಶೈಲಿ ಹೊಂದಿರುವ ಹಾಲಿ ಸಂಸತ್‌ ಭವನ, ರಾಷ್ಟ್ರಪತಿ ಭವನ ಮತ್ತು ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳನ್ನು ಬ್ರಿಟಿಷ್‌ ವಿನ್ಯಾಸಕಾರರಾದ ಎಡ್ವಿನ್‌ ಲ್ಯೂಟನ್ಸ್‌ ಹಾಗೂ ಹರ್ಬಟ್‌ ಬೇಕರ್‌ ವಿನ್ಯಾಸಗೊಳಿಸಿದ್ದರು. ಸಂಸತ್‌ ಭವನದ ಕಾಮಗಾರಿಯು 1921ರಲ್ಲಿ ಪ್ರಾರಂಭವಾಗಿ ಆರು ವರ್ಷದೊಳಗೆ ಮುಕ್ತಾಯಗೊಂಡಿದ್ದು, ಅಂದಾಜು 83 ಲಕ್ಷ ಖರ್ಚಾಗಿತ್ತು. ಗವರ್ನರ್‌ ಜನರಲ್‌ ಲಾರ್ಡ್‌ ಇರ್ವಿನ್‌ ಅದನ್ನು ಉದ್ಘಾಟಿಸಿದ್ದರು. ಸ್ವಾತಂತ್ರ್ಯಪೂರ್ವಕ್ಕೆ ಮುನ್ನ ಈ ಕಟ್ಟಡವನ್ನು ಇಂಪಿರಿಯಲ್‌ ಲಿಜಿಸ್ಲೆಟಿವ್‌ ಕೌನ್ಸಿಲ್‌ ಆಗಿ ಬಳಸಲಾಗುತ್ತಿತ್ತು. ಕಟ್ಟಡವು 6 ಎಕರೆ ಪ್ರದೇಶದಲ್ಲಿದ್ದು 12 ಗೇಟ್‌ಗಳನ್ನು ಒಳಗೊಂಡಿದೆ.

Narendra Modi Government To Redevelop Rajpath And Parliament

ಈ ಕಟ್ಟಡವನ್ನು 2009ರಲ್ಲಿ ಫಸ್ಟ್‌ ಗ್ರೇಡ್‌ ಪಾರಂಪರಿಕ ಕಟ್ಟಡ ಎಂದು ಘೋಷಿಸಲಾಗಿದೆ. ಕಟ್ಟಡದ ಆಕಾರವು ವೃತ್ತಾಕಾರವಾಗಿದ್ದು, ಇದು ಅಶೋಕ ಚಕ್ರವನ್ನು ಆಧರಿಸಿದೆ. ಕಟ್ಟಡದ ಮಧ್ಯಭಾಗದಲ್ಲಿ ಸೆಂಟ್ರಲ್ ಚೇಂಬರ್‌ ಇದೆ, ಮತ್ತು ಇದರ ಸುತ್ತಲೂ ಚೇಂಬರ್‌ ಆಫ್‌ ಪ್ರಿನ್ಸಸ್‌ನ ಅಧಿವೇಶನಗಳಿಗಾಗಿ ನಿರ್ಮಿಸಲಾದ ಅರ್ಧವೃತ್ತಾಕಾರದ ಸಭಾಂಗಣಗಳಿವೆ. ಜೊತೆಗೆ ಲೋಕಸಭೆ ಮತ್ತು ರಾಜ್ಯ ಸಭೆ ಹಾಲ್‌ ಇದೆ. ಸಂಸತ್‌ ಭವನದ ಸುತ್ತಮುತ್ತ ಭದ್ರತಾ ದೃಷ್ಟಿಯಿಂದ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗುತ್ತದೆ.

ಬ್ರಿಟನ್‌ನ ಖ್ಯಾತ ವಾಸ್ತುಶಾಸ್ತ್ರಜ್ಞರು ಎಡ್ವಿನ್‌ ಲುಟೆನ್ಸ್‌ ಮತ್ತು ಹರ್ಬರ್ಟ್‌ ಬೇಕರ್‌

ಎಡ್ವಿನ್‌ ಲುಟೆನ್ಸ್‌ ಬ್ರಿಟಿಷ್‌ ವಾಸ್ತುಶಾಸ್ತ್ರಜ್ಞ. ಭಾರತದ ರಾಜಕೀಯ ಶಕ್ತಿ ಕೇಂದ್ರವಾಗಿರುವ ಸಂಸತ್‌ ಭವನ, ರಾಷ್ಟ್ರಪತಿ ಭವನ ಸೇರಿದಂತೆ ಬ್ರಿಟನ್‌ನ ಅನೇಕ ಮನೆಗಳು, ಯುದ್ಧ ಸ್ಮಾರಕಗಳನ್ನು ವಿನ್ಯಾಸಗೊಳಿಸಿದ್ದಾರೆ. ನವದೆಹಲಿಗೆ ಇವರ ಕೊಡುಗೆಯನ್ನು ಕಂಡು ‘ಲುಟೆನ್ಸ್‌ ದೆಹಲಿ’ ಎಂದು ಹೆಸರಿಡಲಾಯಿತು. ಇನ್ನು ಹರ್ಬರ್ಟ್‌ ಬೇಕರ್‌ ಕೂಡ ಖ್ಯಾತ ವಾಸ್ತುಶಾಸ್ತ್ರಜ್ಞ. ಇಂಡಿಯಾ ಗೇಟ್‌ ಸೇರಿದಂತೆ ದೆಹಲಿ ಅನೇಕ ಸ್ಮಾರಕಗಳ ವಿನ್ಯಾಸಕಾರ. ಇಂದಿನ ರಾಷ್ಟ್ರಪತಿ ಭವನದ ವಿನ್ಯಾಸಕಾರ ಕೂಡ ಇವರೆ. ಆದರೆ ಸದ್ಯ ನಿರ್ಮಾಣವಾಗಲಿರುವ ಹೊಸ ರಾಜಪಥದ ವಿನ್ಯಾಸಕಾರರು ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

75ನೇ ಸ್ವಾತಂತ್ರ್ಯೋತ್ಸವಕ್ಕೆ ಹೊಸ ಸಂಸತ್‌ ಭವನ

ಎಲ್ಲವೂ ಅಂದುಕೊಂಡಂತೆ ನಡೆದರೆ ದೇಶದ 75ನೇ ಸ್ವಾತಂತ್ರ್ಯ ಸಂಭ್ರಮದ ವರ್ಷವಾದ 2022ರ ವೇಳೆಗೆ ವಿಶ್ವದರ್ಜೆಯ, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ನೂತನ ಸಂಸತ್‌ ಭವನ ಉದ್ಘಾಟನೆಗೊಳ್ಳಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸೂ ಹೌದು. ಇನ್ನು ಎಲ್ಲಾ ಸಚಿವರು ಒಂದೇ ಕಡೆ ಕಾರ್ಯನಿರ್ವಹಿಸಲು ಅನುಕೂಲವಾಗಬಲ್ಲ, ಬೃಹತ್‌ ಸಚಿವಾಲಯ ಸಮುಚ್ಛಯ ಕಟ್ಟಡವು 2024ರ ವೇಳೆಗೆ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ.

ನವ ಭಾರತಕ್ಕೆ ನವ ರಾಜಪಥ

ಏನಿದು ರಾಜಕೀಯ ಶಕ್ತಿ ಕೇಂದ್ರ

-ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ 3 ಕಿ.ಮೀ ಪ್ರದೇಶ.

-ಪಾರ್ಲಿಮೆಂಟ್‌, ಸೌತ್‌ ಮತ್ತು ನಾತ್‌ರ್‍ ಬ್ಲಾಕ್‌ ಸೇರಿದಂತೆ ಇಲ್ಲಿ 44 ಕಟ್ಟಡಗಳಿವೆ

Narendra Modi Government To Redevelop Rajpath And Parliament

30 ಮಸೂದೆ ಅಂಗೀಕಾರ: ಲೋಕಸಭೆ ಹೊಸ ದಾಖಲೆ, 67 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು!

ಹೊಸ ಪ್ಲಾನ್‌ನಲ್ಲಿ ಏನಿದೆ?

-ಕೇಂದ್ರ ಸಂಸತ ಭವನ ವ್ಯಾಪ್ತಿಯ 3ಕಿ.ಮೀ ಪ್ರದೇಶವನ್ನು ಮರು ಅಭಿವೃದ್ಧಿಗೊಳಿಸುವುದು

-ಮುಂದಿನ 150 ರಿಂದ 200 ವರ್ಷಗಳ ಕಾಲ ಸುಭದ್ರವಾಗಿರುವ ಕಟ್ಟಡ ನಿರ್ಮಾಣ

ಸರ್ಕಾರದ ಯೋಚನೆ ಏನು?

-ಸಂಸತ್‌ ಭವನದ ಬಾಹ್ಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡದೆ ಸಂಸತ್‌ ಕಟ್ಟಡವನ್ನು 2022ರ ಒಳಗಾಗಿ ನವೀಕರಿಸುವುದು ಅಥವಾ ಅದರ ಪಕ್ಕದಲ್ಲೇ ಹೊಸ ಕಟ್ಟಡ ನಿರ್ಮಿಸುವುದು

-2024ರ ಒಳಗಾಗಿ ಬೃಹತ್‌ ಸಚಿವಾಲಯ ಕಟ್ಟಡ ನಿರ್ಮಿಸುವುದು

Follow Us:
Download App:
  • android
  • ios